ಜೂನ್ 21ಕ್ಕೆ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ; ಅಗತ್ಯ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಪಿಎಂಒ

| Updated By: sandhya thejappa

Updated on: May 21, 2022 | 9:01 AM

ಯೋಗ ದಿನಾಚರಣೆಯಲ್ಲಿ ಪ್ರಧಾನಿ ಭಾಗವಹಿಸುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕುಟುಂಬ ಸಮೇತರಾಗಿ ಪ್ರಧಾನಿಯನ್ನು ಭೇಟಿಯಾಗಿ ಆಹ್ವಾನಿಸಿದ್ದರು.

ಜೂನ್ 21ಕ್ಕೆ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ; ಅಗತ್ಯ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಪಿಎಂಒ
ಸಂಸದ ಪ್ರತಾಪ್ ಸಿಂಹ ಕುಟುಂಬ ಸಮೇತರಾಗಿ ಪ್ರಧಾನಿಯನ್ನು ಭೇಟಿಯಾಗಿ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು
Follow us on

ಮೈಸೂರು: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ (International Yoga Day) ಹಿನ್ನೆಲೆ ಈ ಬಾರಿ ದೇಶದ ಪ್ರಧಾನಿ ನರೇಂದ್ರ ಮೋದಿ (Narendra Modi) ಮೈಸೂರಿಗೆ ಆಗಮಿಸುತ್ತಿದ್ದಾರೆ. ಕಾರ್ಯಕ್ರಮದ ಬಗ್ಗೆ ಪ್ರಧಾನಿ ಕಾರ್ಯಾಲಯ ದೃಢಪಡಿಸಿದ್ದು, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್​ಗೆ ಪತ್ರ ಬರೆದಿದೆ. ಪಿ.ರವಿಕುಮಾರ್​ಗೆ ಬರೆದ ಪತ್ರದಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಪಿಎಂಒ ತಿಳಿಸಿದೆ. ಯೋಗ ದಿನಾಚರಣೆಯಲ್ಲಿ ಪ್ರಧಾನಿ ಭಾಗವಹಿಸುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಕುಟುಂಬ ಸಮೇತರಾಗಿ ಪ್ರಧಾನಿಯನ್ನು ಭೇಟಿಯಾಗಿ ಆಹ್ವಾನಿಸಿದ್ದರು.

ಆಯುಷ್ ಸಚಿವಾಲಯವು ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ನಗರದ ರೇಸ್ ಕೋರ್ಸ್ ಆವರಣದಲ್ಲಿ ಭರ್ಜರಿ ಸಿದ್ಧತೆ ಮಾಡಲಾಗುತ್ತಿದೆ. ವಿಜಯನಗರದಲ್ಲಿರುವ ಯೋಗಾ ನರಸಿಂಹಸ್ವಾಮಿ ದೇಗುಲದಲ್ಲಿ ಯೋಗ ದಿನಾಚರಣೆ ಕುರಿತು ಪೋಸ್ಟರ್​ ಬಿಡುಗಡೆ ಮಾಡಲಾಯಿತು. 2017ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದ ಮೈಸೂರು, ಮತ್ತೆ ಗಿನ್ನೆಸ್​​​ ದಾಖಲೆ ಸೇರಲು ಸಾಂಸ್ಕೃತಿಕ ನಗರಿಯಲ್ಲಿ ಸಿದ್ಧತೆ ನಡೆದಿದ್ದು, ಈ ಬಾರಿ 2 ಲಕ್ಷ ಯೋಗಪಟುಗಳನ್ನು ಸೇರಿಸುವ ಆಶಯವಿದೆ.

ಇದನ್ನೂ ಓದಿ
PM Modi: ವಿದೇಶ ಪ್ರವಾಸಕ್ಕೆ ತೆರಳುವಾಗ ರಾತ್ರಿ ಪ್ರಯಾಣಕ್ಕೆ ಆದ್ಯತೆ ನೀಡುವ ಪ್ರಧಾನಿ ಮೋದಿ; ಕಾರಣವೇನು? 
ಸಾವಿರ ಭಿನ್ನಾಭಿಪ್ರಾಯಗಳಿದ್ದರೂ ಒಲ್ಲದ ಸಂಗಾತಿಯೊಂದಿಗೆ ಬದುಕುವುದೇಕೆ? ಇಲ್ಲಿವೆ ಕಾರಣಗಳು
Crime News, ವಿದ್ಯುತ್​ ಪ್ರವಹಿಸಿ ಗುತ್ತಿಗೆ ನೌಕರ ಸಾವು: ಚೆಸ್ಕಾಂ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರ ಆಕ್ರೋಶ
Bladder Cancer: ಮೂತ್ರಕೋಶ ಕ್ಯಾನ್ಸರ್​ನ ಲಕ್ಷಣಗಳೇನು? ಪತ್ತೆ ಹೇಗೆ?

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಮೋದಿ ಮೈಸೂರಿಗೆ ಬರುವ ಬಗ್ಗೆ ಗೊಂದಲ ಇತ್ತು. ಆದರೆ ಪ್ರಧಾನಿ ಕಾರ್ಯಾಲಯ ಇದೀಗ ಮೋದಿ ಬರುವ ಬಗ್ಗೆ ಸ್ಪಷ್ಟತೆ ನೀಡಿದೆ.

ಇದನ್ನೂ ಓದಿ: PM Modi: ವಿದೇಶ ಪ್ರವಾಸಕ್ಕೆ ತೆರಳುವಾಗ ರಾತ್ರಿ ಪ್ರಯಾಣಕ್ಕೆ ಆದ್ಯತೆ ನೀಡುವ ಪ್ರಧಾನಿ ಮೋದಿ; ಕಾರಣವೇನು? 

ಮುಖ್ಯಕಾರ್ಯದರ್ಶಿ ರವಿಕುಮಾರ್​ಗೆ ಪತ್ರ ಬರೆದ ಪಿಎಂಒ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:44 am, Sat, 21 May 22