ಸಾವಿರ ಭಿನ್ನಾಭಿಪ್ರಾಯಗಳಿದ್ದರೂ ಒಲ್ಲದ ಸಂಗಾತಿಯೊಂದಿಗೆ ಬದುಕುವುದೇಕೆ? ಇಲ್ಲಿವೆ ಕಾರಣಗಳು
Unhealthy Relationship:ಒಬ್ಬರನ್ನೊಬ್ಬರು ಅರಿತು ಪ್ರೀತಿ, ವಿಶ್ವಾಸ, ನಂಬಿಕೆಯೊಂದಿಗೆ ಬದುಕುವುದು ಉತ್ತಮ ಸಂಬಂಧ ಎನಿಸಿಕೊಳ್ಳುತ್ತದೆ. ಆದರೆ ಎಲ್ಲರ ಜೀವನದ ದಾರಿಯೂ ಅಷ್ಟು ಸಲೀಸಲ್ಲ, ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ.
ಒಬ್ಬರನ್ನೊಬ್ಬರು ಅರಿತು ಪ್ರೀತಿ, ವಿಶ್ವಾಸ, ನಂಬಿಕೆಯೊಂದಿಗೆ ಬದುಕುವುದು ಉತ್ತಮ ಸಂಬಂಧ ಎನಿಸಿಕೊಳ್ಳುತ್ತದೆ. ಆದರೆ ಎಲ್ಲರ ಜೀವನದ ದಾರಿಯೂ ಅಷ್ಟು ಸಲೀಸಲ್ಲ, ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಕೆಲವು ಭಿನ್ನಾಭಿಪ್ರಾಯಗಳು ಅವರಿಬ್ಬರ ಮಧ್ಯೆ ಮೂಡಿದರೆ ಇನ್ನೂ ಕೆಲವು ಕುಟುಂಬದ ಇತರೆ ಸದಸ್ಯರಿಂದ ಮೂಡಬಹುದು.
ಒಲ್ಲದ ಸಂಗಾತಿ ಜತೆಗೆ ಹೆಚ್ಚು ವರ್ಷಗಳ ಕಾಲ ಬದುಕುವವರ ಬಗ್ಗೆ ಸಂಶೋಧನೆ ನಡೆದಿದ್ದು, ಅದಕ್ಕಿರುವ ಕಾರಣಗಳ ಬಗ್ಗೆ ಒಂದಷ್ಟು ಮಾಹಿತಿಗಳು ಇಲ್ಲಿವೆ.
ಪರಸ್ಪರ ಅರ್ಥಮಾಡಿಕೊಳ್ಳುವುದು, ರಕ್ಷಣೆ ನೀಡುವುದು, ಅತಿಯಾದ ಪ್ರೀತಿ ತೋರಿಸುವುದು ಹೀಗೆ ಇವೆಲ್ಲವೂ ಒಂದು ಉತ್ತಮ ಸಂಬಂಧದ ಸೂತ್ರಗಳು. ಆದರೆ ವಿಜ್ಞಾನ ಅದಕ್ಕೂ ಮಿಗಿಲಾಗಿ ಈ ವಿಷಯವಾಗಿ ಹೆಚ್ಚಿನದನ್ನು ತಿಳಿಸುತ್ತದೆ. ಅವುಗಳನ್ನು ತಿಳಿದುಕೊಳ್ಳುವುದು ಮುಖ್ಯ. ಹಾಗಾಗಿ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ.
ಸಾಮ್ಯತೆ ಸಂಬಂಧಗಳಲ್ಲಿ ಲೆಕ್ಕಕ್ಕೆ ಬರುವುದಿಲ್ಲ ಬಟ್ಟೆ, ಸಂಗೀತ, ತಿನಿಸುಗಳಲ್ಲಿ ನಿಮ್ಮ ಅಭಿರುಚಿ ಒಂದೇ ಎಂದುಕೊಂಡಾಕ್ಷಣ ಎಲ್ಲವೂ ಒಂದೇ ಆಗುವುದಿಲ್ಲ. ಇದನ್ನು ಮಾನದಂಡವಾಗಿ ಸಂಬಂಧಗಳನ್ನು ಅಳೆಯಲಾಗುವುದಿಲ್ಲ. ಸಂಬಂಧಗಳು ಭಾವನೆಗಳ ಮೇಲೆ ನಿಂತಿದೆ. ಹಾಗಾಗಿ ಭಾವನಗಳಲ್ಲಿನ ಸಾಮ್ಯತೆ ಮಾತ್ರ ಸಂಬಂಧಗಳನ್ನು ಗಟ್ಟಿಗೊಳಿಸಲು ಸಾಧ್ಯ.
ಭಾವನೆಗಳನ್ನು ಅರ್ಥಮಾಡಿಕೊಳ್ಳುವ ಜೀವನ ಸಂಗಾತಿಯಿಂದ ಮಾತ್ರ ಜೀವನದ ಕೊನೆಯವೆರೆಗೂ ಸಂತೋಷದಿಂದ ಇರಲು ಸಾಧ್ಯ. ಅದಿಲ್ಲವಾದಲ್ಲಿ ಸಣ್ಣ ಜಗಳ ಇಬ್ಬರ ನಡುವೆ ಕಂದಕ ಸೃಷ್ಟಿಸುತ್ತದೆ.
ಸಂಬಂಧ ಸರಿ ಹೋಗಬಹುದೆನ್ನುವ ನಂಬಿಕೆ: ಗಂಡ ಹೆಂಡತಿ ಎಂದ ಮೇಲೆ ಒಂದೊಂದು ವಿಚಾರದಲ್ಲಿ ಇಬ್ಬರದ್ದೂ ಬೇರೆ ಬೇರೆಯದ್ದೇ ದೃಷ್ಟಿಕೋನವಿರುತ್ತದೆ. ಮಧ್ಯೆ ಭಿನ್ನಾಭಿಪ್ರಾಯಗಳು ಕೂಡ ಸಾಮಾನ್ಯ. ಹಾಗೆಯೇ ಒಂದಲ್ಲಾ ಒಂದು ದಿನ ಈ ಸಂಬಂಧ ಸರಿ ಹೋಗಬಹುದು ಎಂದು ಕಾಯುತ್ತಿರುತ್ತಾರೆ.
ಸಂಗಾತಿ ಬದಲಾಗಬಹುದು ಎನ್ನುವ ನಂಬಿಕೆ: ಯಾವುದೋ ಒಂದು ವಿಚಾರದಲ್ಲಿ ಮನಸ್ತಾಪ ಉಂಟಾಗಿದ್ದು, ಸಂಗಾತಿ ತನ್ನ ದೃಷ್ಟಿಕೋನವನ್ನು ಬದಲಿಸಿಕೊಂಡು ಬದಲಾಗಬಹುದು ಎನ್ನುವ ನಂಬಿಕೆಯೊಂದಿಗೆ ಬದುಕುತ್ತಿರುತ್ತಾರೆ.
ಮಕ್ಕಳು: ಒಂದೊಮ್ಮೆ ತಾವು ದೂರವಾದರೆ ತಮ್ಮ ಮಕ್ಕಳ ಮುಂದಿನ ಭವಿಷ್ಯದ ಗತಿ ಏನು ಎಂದು ಆಲೋಚಿಸಿ ಕೆಲವರು ಭಿನ್ನಾಭಿಪ್ರಾಯವನ್ನು ನಮ್ಮೊಳಗೆ ಇಟ್ಟುಕೊಂಡು ಬದುಕುತ್ತಿರುತ್ತಾರೆ.
ಗೊಂದಲ: ಈ ಸಂಬಂಧಕ್ಕೆ ಇಲ್ಲಿಗೆ ಅಂತ್ಯ ಹಾಡಬೇಕೆ ಅಥವಾ ಮುಂದುವರೆಸಬೇಕೆ ಎನ್ನುವ ಗೊಂದಲದಲ್ಲಿ ಸಾಕಷ್ಟು ಮಂದಿ ಇರುತ್ತಾರೆ.
ಕಾಳಜಿ: ಒಂದೊಮ್ಮೆ ನಾವು ದೂರವಾದರೆ ಸಂಗಾತಿ ಜೀವನ ಹೇಗಿರುತ್ತದೋ ಎನ್ನುವ ಕಾಳಜಿಯೊಂದಿಗೆ ಜತೆಗಿರುತ್ತಾರೆ.
ಜತೆಗೆ ಇರಲು ಒತ್ತಾಯ: ಕೆಲವೊಮ್ಮೆ ಕುಟುಂಬದಲ್ಲಿ ಜತೆಗಿರುವಂತೆ ಒತ್ತಡ ಹಾಕಲಾಗುತ್ತದೆ ಅವರಿಗೆ ಸಂಬಂಧ ಎಷ್ಟು ಹಾಳಾಗಿದೆ ಎನ್ನುವ ಅರಿವಿರುವುದಿಲ್ಲ.
ಹಣಕಾಸಿನ ವಿಚಾರ: ಕೆಲವೊಮ್ಮೆ ನೀವು ಹಣಕಾಸಿನ ವಿಚಾರವಾಗಿ ಪ್ರತಿಯೊಂದಕ್ಕೂ ಸಂಗಾತಿಯನ್ನೇ ಅವಲಂಬಿಸಿರುತ್ತಾರೆ ಆ ಸಮಯದಲ್ಲಿ ಒಂದೊಮ್ಮೆ ಅವರಿಂದ ದೂರವಾದರೆ ತಮ್ಮ ಮುಂದಿನ ಜೀವನ ಹೇಗಿರುತ್ತೋ ಎನ್ನುವ ಭಯದಲ್ಲಿರುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:30 am, Sat, 21 May 22