Relationship Tips: ಪ್ರೀತಿಯಲ್ಲಿ ಕೆಲ ಸುಳ್ಳುಗಳನ್ನು ಹೇಳಿ, ಸಂಬಂಧದಲ್ಲಿ ಬಿರುಕು ಮೂಡದು
Relationship Tips: ನೀವು ಪ್ರೀತಿಯಲ್ಲಿದ್ದೀರಾ ಎಂದರೆ ಕೆಲ ಸುಳ್ಳು(Love)ಗಳನ್ನು ಹೇಳುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಬಹುದು. ಕೆಲವು ಸಂಬಂಧಗಳೇ ಹಾಗೆ ಒಬ್ಬರನ್ನು ಸಂತೋಷವಾಗಿಡಬೇಕಾದರೆ ಸುಳ್ಳುಗಳನ್ನು ಹೇಳಲೇಬೇಕಾಗುತ್ತದೆ. ಆ ಸುಳ್ಳುಗಳು ನಿಮ್ಮ ಸಂಬಂಧ(Relationship)ವನ್ನು ಮತ್ತಷ್ಟು ಸದೃಢಗೊಳಿಸುವಂತಿರಬೇಕು
ನೀವು ಪ್ರೀತಿಯಲ್ಲಿದ್ದೀರಾ ಎಂದರೆ ಕೆಲ ಸುಳ್ಳು(Love)ಗಳನ್ನು ಹೇಳುವುದು ನಿಮಗೆ ತುಂಬಾ ಪ್ರಯೋಜನಕಾರಿಯಾಗಬಹುದು. ಕೆಲವು ಸಂಬಂಧಗಳೇ ಹಾಗೆ ಒಬ್ಬರನ್ನು ಸಂತೋಷವಾಗಿಡಬೇಕಾದರೆ ಸುಳ್ಳುಗಳನ್ನು ಹೇಳಲೇಬೇಕಾಗುತ್ತದೆ. ಆ ಸುಳ್ಳುಗಳು ನಿಮ್ಮ ಸಂಬಂಧ(Relationship)ವನ್ನು ಮತ್ತಷ್ಟು ಸದೃಢಗೊಳಿಸುವಂತಿರಬೇಕು. ನಾವು ಪ್ರೀತಿಯಲ್ಲಿದ್ದಾಗ ಆ ಸಂಬಂಧವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳಲು ಸಾಕಷ್ಟು ಕಷ್ಟಪಡುತ್ತೇವೆ ಈ ಪ್ರಪಂಚದಲ್ಲಿ ಸುಳ್ಳು ಹೇಳದ ವ್ಯಕ್ತಿ ಯಾರಿದ್ದಾರೆ ಹೇಳಿ. ಕೆಲವೊಮ್ಮೆ ಸಂಬಂಧಗಳನ್ನು ಉಳಿಸಿಕೊಳ್ಳಲು ಸುಳ್ಳುಹೇಳಬೇಕಾಗುತ್ತದೆ.
ವಿಶ್ವಾಸ ಎನ್ನುವುದು ರಾತ್ರೋರಾತ್ರಿ ಹುಟ್ಟಿಬಿಡುವಂಥದಲ್ಲ, ಅದನ್ನು ಗಳಿಸಲು ಸಾಕಷ್ಟು ದಿನಗಳು ಬೇಕಾಗುತ್ತದೆ. ಒಮ್ಮೆ ವಿಶ್ವಾಸ ಹುಟ್ಟಿದ ನಂತರ ಅದನ್ನು ಸರಿಯಾದ ರೀತಿಯಲ್ಲಿ ಕಾಪಾಡಿಕೊಂಡು ಬರಬೇಕು,ಇಲ್ಲದಿದ್ದಲ್ಲಿ ಒಮ್ಮೆ ಕಷ್ಟಪಟ್ಟು ಗಳಿಸಿದ ವಿಶ್ವಾಸ,ನಂಬಿಕೆ ಒಂದು ಕ್ಷಣದಲ್ಲಿ ಮುರಿದು ಬೀಳಬಹುದು.
ಸಾಕಷ್ಟು ಬಾರಿ ಸರಿಯಾದ ಸಮಯವನ್ನು ನೀಡಿದರೆ ಮತ್ತು ನೀವು ಮನಸ್ಸು ಮಾಡಿದರೆ ವಿಶ್ವಾಸವನ್ನು ಪುನಃ ಗಳಿಸಲು ಸಾಧ್ಯವಿದೆ.ಆದರೆ ನಿಮ್ಮ ಮನಸ್ಸಿನಲ್ಲಿ ಒಂದು ಅನುಮಾನ ಇದ್ದೇ ಇರುತ್ತದೆ.ಅದರ ಜೊತೆಗೆ ನೀವು ಇತರರನ್ನೂ ಕೂಡ ನಂಬುವುದು ಕಷ್ಟವಾಗಿಬಿಡುತ್ತದೆ. ಬಹಳ ಹತ್ತಿರದ ಸ್ನೇಹಿತರಿಂದ ಮೋಸ ಹೋದವರಿದ್ದಾರೆ.
ವೈಯಕ್ತಿಕ ವಿಷಯವನ್ನು ಯಾರೊಂದಿಗೂ ಹೇಳುವುದಿಲ್ಲ ಎಂದು ಎಲ್ಲವನ್ನೂ ಖಾಸಗಿ ಮಾಡಿ ಬಿಡುವವರೂ ಇರುತ್ತಾರೆ.ಸಾಕಷ್ಟು ಬಾರಿ ಇದು ತಿಳಿದು ಮನ್ನಿಸಿದರೂ ಕೂಡ ಇದು ಮುಂದುವರೆದಾಗ ಅಂತವರಲ್ಲಿ ವಿಶ್ವಾಸ ಹೊಂದುವುದು ಕಷ್ಟವಾಗಿಬಿಡುತ್ತದೆ.
ಸಂಬಂಧಗಳು ಹಾಳಾಗುತ್ತಿರುವಾಗ ಸುಳ್ಳುಗಳನ್ನು ಹೇಳಿ ಒಂದೊಮ್ಮೆ ನಿಮ್ಮ ಸಂಬಂಧಗಳು ಹಾಳಾಗುತ್ತಿದೆ ಎನಿಸಿದಾಗ ಸುಳ್ಳುಗಳನ್ನು ಹೇಳಿ, ಪತಿ-ಪತ್ನಿ ನಡುವೆ ಯಾವುದೋ ವಿಷಯಕ್ಕೆ ಜಗಳವಾಗುವುದು ಸಾಮಾನ್ಯ, ಒಂದೊಮ್ಮೆ ನಿಮ್ಮ ಸಂಬಂಧ ಹಾಳಾಗುತ್ತಿದೆ ಎನ್ನುವಾಗ ನೀವು ಸುಳ್ಳುಗಳನ್ನು ಹೇಳಿ ಸಂಬಂಧ ಉಳಿಸಿಕೊಳ್ಳಿ, ಈ ಒಂದು ಸುಳ್ಳು ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗದಂತೆ ಮಾಡುತ್ತದೆ.
ಸುಳ್ಳು ಹೊಗಳಿಕೆ : ಪ್ರತಿಯೊಬ್ಬರಿಗೂ ತಮ್ಮ ಪಾರ್ಟ್ನರ್ ಚೆಂದವಾಗಿ ಕಾಣಬೇಕು, ಒಳ್ಳೊಳ್ಳೆ ಬಟ್ಟೆಗಳನ್ನು ಧರಿಸಬೇಕು ಎಂಬ ಆಶಯವಿರುತ್ತದೆ, ಆದರೆ ಕೆಲವೊಮ್ಮೆ ಅವರು ಧಿರಿಸುಗಳು ನಿಮಗೆ ಇಷ್ಟವಾಗುವುದಿಲ್ಲ, ಆದರೆ ಅದನ್ನು ಅವರಿಗೆ ಹೇಳಲು ನಿಮ್ಮಿಂದ ಸಾಧ್ಯವಾಗದಿದ್ದಾಗ ಹೊಗಳಿಕೆಯ ಮಾತನ್ನಾಡಿ.
ಶಾಪಿಂಗ್: ಸಾಮಾನ್ಯವಾಗಿ ಹೆಂಗಸರು ಶಾಪಿಂಗ್ಗೆ ಹೋದರೆ ಮನೆಗೆ ಬರುವಾಗ ಶಾಪಿಂಗ್ ಮಾಡಿದ ವಸ್ತುಗಳನ್ನು ಕಾರಿನಲ್ಲೇ ಇಟ್ಟು ಬರುತ್ತಾರೆ, ಪತಿ ಕಚೇರಿಗೆ ತೆರಳಿದ ಬಳಿಕ ಅವುಗಳನ್ನು ಮನೆಯೊಳಗೆ ತರುತ್ತಾರೆ, ಪತಿಗೆ ಶಾಪಿಂಗ್ನ ಅರ್ಧ ಬೆಲೆ ಮಾತ್ರ ಹೇಳುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದಂತೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:38 pm, Wed, 11 May 22