ಊಟದ ಬಳಿಕ ಸಿಹಿ ತಿಂದರೆ ಕಾಡುವ ಆರೋಗ್ಯ ಸಮಸ್ಯೆಗಳೇನು?

ಯಾವ ಊಟವೂ ಸಿಹಿಯಿಲ್ಲದೆ ಪೂರ್ಣಗೊಳ್ಳುವುದಿಲ್ಲ, ಆದರೆ ಊಟಕ್ಕೂ ಮೊದಲು ಸಿಹಿ ತಿನ್ನಬೇಕೇ ಅಥವಾ ಊಟದ ಬಳಿಕ ಸಿಹಿ ತಿನ್ನಬೇಕೆ ಎಂಬುದು ಕೆಲವರಲ್ಲಿರುವ ಗೊಂದಲವಾಗಿದೆ. ಅತಿ ಹೆಚ್ಚು ಸಿಹಿಯನ್ನು ತಿನ್ನುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿಮ್ಮನ್ನು ಕಾಡಬಹುದು.

ಊಟದ ಬಳಿಕ ಸಿಹಿ ತಿಂದರೆ ಕಾಡುವ ಆರೋಗ್ಯ ಸಮಸ್ಯೆಗಳೇನು?
ಸಿಹಿ
Follow us
TV9 Web
| Updated By: ನಯನಾ ರಾಜೀವ್

Updated on: May 11, 2022 | 12:51 PM

ಯಾವ ಊಟವೂ ಸಿಹಿ(Sweet) ಯಿಲ್ಲದೆ ಪೂರ್ಣಗೊಳ್ಳುವುದಿಲ್ಲ, ಆದರೆ ಊಟ(Meal)ಕ್ಕೂ ಮೊದಲು ಸಿಹಿ ತಿನ್ನಬೇಕೇ ಅಥವಾ ಊಟದ ಬಳಿಕ ಸಿಹಿ ತಿನ್ನಬೇಕೆ ಎಂಬುದು ಕೆಲವರಲ್ಲಿರುವ ಗೊಂದಲವಾಗಿದೆ. ಅತಿ ಹೆಚ್ಚು ಸಿಹಿಯನ್ನು ತಿನ್ನುವುದರಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿಮ್ಮನ್ನು ಕಾಡಬಹುದು. ತೂಕ(Weight) ಹೆಚ್ಚಳ, ಒಬೆಸಿಟಿ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ(Sugar) ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ ನೀವು ಊಟದ ಕೊನೆಯನ್ನು ಸಿಹಿಯನ್ನು ತಿಂದರೆ ಬೇರೆ ಆಹಾರಗಳಷ್ಟು ಬೇಗ ಸಿಹಿಯು ಜೀರ್ಣವಾಗುವುದಿಲ್ಲ.

ಊಟದ ಬಳಿಕ ಸಿಹಿ ಸೇವನೆ ಆರೋಗ್ಯಕರ ಅಭ್ಯಾಸ ಎಂದು ಜನರು ಭಾವಿಸುತ್ತಾರೆ. ಇದು ಜೀರ್ಣಕ್ರಿಯೆ (Digestion) ಯನ್ನು ಸುಧಾರಿಸುತ್ತದೆ ಎಂದು ನಂಬುತ್ತಾರೆ. ಆದ್ರೆ ಇದು ಸತ್ಯವಲ್ಲ. ಆಯುರ್ವೇದದಲ್ಲಿ ಈ ಪದ್ಧತಿ ತಪ್ಪು ಎಂದು ಹೇಳಲಾಗಿದೆ. ಆಯುರ್ವೇದದ ಪ್ರಕಾರ, ಯಾವುದೇ ಸಿಹಿ ಪದಾರ್ಥವನ್ನು ಊಟದ ಮೊದಲು ತಿನ್ನಬೇಕು.

  1. ಜೀರ್ಣಕ್ರಿಯೆ : ಊಟದ ನಂಬಳಿಕ ಸಿಹಿ ತಿಂಡಿ ಬೇಕೇಬೇಕು ಎನ್ನುವವರು ಮೊದಲು ಈ ವಿಷಯವನ್ನು ಅರ್ಥಮಾಡಿಕೊಳ್ಳಬೇಕು. ಊಟದ ನಂತರ ಸಿಹಿ ತಿಂಡಿ ಸೇವನೆ ಮಾಡಿದರೆ ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಊಟದ ನಂತರ ಸಿಹಿತಿಂಡಿಗಳನ್ನು ತಿನ್ನುವುದು ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸುಧಾರಿಸುತ್ತದೆ ಎಂದು ಹಲವರು ಭಾವಿಸುತ್ತಾರೆ. ಅದಕ್ಕಾಗಿಯೇ ಹೆಚ್ಚಿನ ಜನರು ಈ ವಿಧಾನವನ್ನು ಅನುಸರಿಸುತ್ತಾರೆ. ಆದರೆ ಆಯುರ್ವೇದ ತಜ್ಞರ ಪ್ರಕಾರ, ಸಿಹಿ ತಿಂಡಿಯನ್ನು ಆಹಾರದ ಮೊದಲು ಸೇವನೆ ಮಾಡಬೇಕು. ಏಕೆಂದರೆ ಇದು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇದರಿಂದಾಗಿ ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ.
  2. ಮಲಬದ್ಧತೆ : ಊಟದ ಬಳಿಕ ಸಿಹಿ ತಿನ್ನುವುದರಿಂದ ಮಲಬದ್ಧತೆ ಉಂಟಾಗಲಿದೆ. ಹಾಗಾಗಿ ಊಟ ಶುರು ಮಾಡುವ ಮೊದಲು ಸಿಹಿ ತಿನ್ನಲು ಪ್ರಯತ್ನಿಸಿ. ಇದರಿಂದ ಯಾವುದೇ ಜೀರ್ಣಕ್ರಿಯೆ ಸಮಸ್ಯೆ ಉಂಟಾಗುವುದಿಲ್ಲ.
  3. ಅಜೀರ್ಣ : ಸಾಮಾನ್ಯವಾಗಿ ಊಟದ ಮೊದಲು ಸಿಹಿ ತಿಂದರೆ ಸರಿಯಾಗಿ ಊಟ ಮಾಡಲು ಸಾಧ್ಯವಿಲ್ಲ ಎಂದು ಕೆಲವರು ಭಾವಿಸಿದ್ದಾರೆ, ಆದರೆ ಈ ನಂಬಿಕೆ ತಪ್ಪು. ಜೀರ್ಣಕ್ರಿಯೆ ಹೊರತಾಗಿ, ಆಹಾರ ಸೇವನೆ ಮೊದಲು ಸಿಹಿತಿಂಡಿಗಳನ್ನು ತಿನ್ನುವುದರಿಂದ ರುಚಿ ಮೊಗ್ಗುಗಳು ಸಕ್ರಿಯಗೊಳ್ಳುತ್ತವೆ. ಇದು ರುಚಿಯನ್ನು ಇನ್ನಷ್ಟು ಉತ್ತಮಗೊಳಿಸುತ್ತದೆ. ಅದೇ ಊಟದ ನಂತರ ಸಿಹಿ ತಿನ್ನುವುದರಿಂದ ಹೊಟ್ಟೆಯಲ್ಲಿ ಕಿರಿಕಿರಿ ಉಂಟಾಗುತ್ತದೆ. ಹುಳಿ ತೇಗು ಬರಬಹುದು.
  4. ಉಬ್ಬಸ:ಕೆಲವರು ಊಟದ ಕೊನೆಯಲ್ಲಿ ಸಕ್ಕರೆ ತಿನ್ನಲು ಪ್ರಾರಂಭಿಸುವವರೂ ಇದ್ದಾರೆ. ಈ ತಪ್ಪು ನಿಮ್ಮ ಆರೋಗ್ಯಕ್ಕೆ ಹಾನಿಯುಂಟುಮಾಡುವುದಲ್ಲದೆ, ಹೊಟ್ಟೆಯಲ್ಲಿ ಗ್ಯಾಸ್ ಅಥವಾ ಉಬ್ಬುವಿಕೆಯ ಸಮಸ್ಯೆ ಕೂಡ ಶುರುವಾಗುತ್ತದೆ. ಹೊಟ್ಟೆ ಉಬ್ಬುವಿಕೆಯಿಂದಾಗಿ ಹೊಟ್ಟೆಯಲ್ಲಿ ಯಾವಾಗಲೂ ಕಿರಿಕಿರಿಯಾಗುತ್ತಿರುತ್ತದೆ. ಕೆಲವು ಜನರು ಸಿಹಿತಿಂಡಿಗಳಲ್ಲಿ ಆರೋಗ್ಯಕರ ಆಯ್ಕೆಗಳನ್ನು ಆರಿಸಿಕೊಳ್ಳುತ್ತಾರೆ. ಉದಾಹರಣೆಗೆ ಬೆಲ್ಲ ಅಥವಾ ಖರ್ಜೂರ ಸೇರಿದಂತೆ ಆರೋಗ್ಯಕರ ಸಿಹಿ ಸೇವನೆ ಮಾಡ್ತಾರೆ. ಊಟದ ನಂತ್ರ ಬೆಲ್ಲ ಅಥವಾ ಕರ್ಜೂರ ತಿಂದರೆ ಯಾವುದೇ ಸಮಸ್ಯೆಯಾಗುವುದಿಲ್ಲವೆಂದು ಹೇಳುತ್ತಾರೆ.

ಜೀವನಶೈಲಿ ಹಾಗೂ ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ