ಸುಳ್ಳು ಸುದ್ದಿಗಳ ಮೇಲೆ ಸರ್ಕಾರದ ಪ್ರಹಾರ; ಪಾಕಿಸ್ತಾನ ಮೂಲದ 4 ಯೂಟ್ಯೂಬ್ ಸೇರಿದಂತೆ 22 ಯೂಟ್ಯೂಬ್ ಚಾನೆಲ್​​ಗಳಿಗೆ ನಿರ್ಬಂಧ

ಸುಳ್ಳು ಸುದ್ದಿಗಳ ಮೇಲೆ ಸರ್ಕಾರದ ಪ್ರಹಾರ; ಪಾಕಿಸ್ತಾನ ಮೂಲದ 4 ಯೂಟ್ಯೂಬ್ ಸೇರಿದಂತೆ 22 ಯೂಟ್ಯೂಬ್ ಚಾನೆಲ್​​ಗಳಿಗೆ ನಿರ್ಬಂಧ
ಪ್ರಾತಿನಿಧಿಕ ಚಿತ್ರ

ನಿರ್ಬಂಧಿತ ಯೂಟ್ಯೂಬ್ ಚಾನೆಲ್‌ಗಳು 260 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದ್ದು ಇವು ನಕಲಿ ಸುದ್ದಿಗಳನ್ನು ಹರಡಲು ಬಳಸಲಾಗುತ್ತಿತ್ತು. ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯ ದೃಷ್ಟಿಕೋನದಿಂದ ಸೂಕ್ಷ್ಮ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಗಳನ್ನು ಇವು ಹರಡಿವೆ.

TV9kannada Web Team

| Edited By: Rashmi Kallakatta

Apr 05, 2022 | 5:04 PM

ನಕಲಿ ಸುದ್ದಿಗಳನ್ನು ಹರಡುವ  22 ಯೂಟ್ಯೂಬ್ (Youtube) ಆಧಾರಿತ ಸುದ್ದಿ ಚಾನೆಲ್‌ಗಳು ಮತ್ತು ಹಲವಾರು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರ್ಕಾರ ನಿರ್ಬಂಧಿಸಿದೆ. ನಿರ್ಬಂಧಿಸಲಾದ ಯೂಟ್ಯೂಬ್ ಚಾನೆಲ್‌ಗಳಲ್ಲಿ 18 ಭಾರತೀಯ ಮತ್ತು ನಾಲ್ಕು ಪಾಕಿಸ್ತಾನ (Pakistan) ಮೂಲದ ಚಾನೆಲ್‌ಗಳು ಸೇರಿವೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ (Ministry of Information & Broadcasting) ಪಾಕಿಸ್ತಾನ ಮೂಲದ ನಾಲ್ಕು ಯೂಟ್ಯೂಬ್ ಸುದ್ದಿ ವಾಹಿನಿಗಳು ವೀಕ್ಷಕರನ್ನು ದಾರಿತಪ್ಪಿಸಲು ಟಿವಿ ಸುದ್ದಿ ವಾಹಿನಿಗಳ ಲೋಗೋಗಳು ಮತ್ತು ಸುಳ್ಳು ಥಂಬ್‌ನೇಲ್‌ಗಳನ್ನು ಬಳಸಿಕೊಂಡಿವೆ. ಅಲ್ಲದೆ, ಸರ್ಕಾರವು ಮೂರು ಟ್ವಿಟರ್ ಹ್ಯಾಂಡಲ್‌ಗಳು, ಒಂದು ಫೇಸ್‌ಬುಕ್ ಖಾತೆ ಮತ್ತು ಒಂದು ಸುದ್ದಿ ವೆಬ್‌ಸೈಟ್ ಅನ್ನು ಸಹ ನಿರ್ಬಂಧಿಸಿದೆ. ನಿರ್ಬಂಧಿತ ಯೂಟ್ಯೂಬ್ ಚಾನೆಲ್‌ಗಳು 260 ಕೋಟಿಗೂ ಹೆಚ್ಚು ವೀಕ್ಷಕರನ್ನು ಹೊಂದಿದ್ದು ಇವು ನಕಲಿ ಸುದ್ದಿಗಳನ್ನು ಹರಡಲು ಬಳಸಲಾಗುತ್ತಿತ್ತು. ರಾಷ್ಟ್ರೀಯ ಭದ್ರತೆ, ಭಾರತದ ವಿದೇಶಿ ಸಂಬಂಧಗಳು ಮತ್ತು ಸಾರ್ವಜನಿಕ ಸುವ್ಯವಸ್ಥೆಯ ದೃಷ್ಟಿಕೋನದಿಂದ ಸೂಕ್ಷ್ಮ ವಿಷಯಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ಮಾಹಿತಿಗಳನ್ನು ಇವು ಹರಡಿವೆ ಎಂದು ಮಾಹಿತಿ ಮತ್ತು ಪ್ರಸಾರಾಂಗ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ ಐಟಿ ನಿಯಮಗಳು, 2021 ರ ಅಧಿಸೂಚನೆಯ ನಂತರ ಭಾರತೀಯ ಯೂಟ್ಯೂಬ್ ಆಧಾರಿತ ಸುದ್ದಿ ಪ್ರಕಟಿಸುವವರ ವಿರುದ್ಧ ಇದೇ ಮೊದಲ ಬಾರಿಗೆ ಕ್ರಮ ತೆಗೆದುಕೊಳ್ಳಲಾಗಿದೆ.

ವಿಷಯದ ವಿಶ್ಲೇಷಣೆಯ ಸಮಯದಲ್ಲಿ ಭಾರತೀಯ ಸಶಸ್ತ್ರ ಪಡೆಗಳು, ಜಮ್ಮು ಮತ್ತು ಕಾಶ್ಮೀರ ಮುಂತಾದ ವಿವಿಧ ವಿಷಯಗಳ ಕುರಿತು ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡಲು ಒಂದಕ್ಕಿಂತ ಹೆಚ್ಚು ಯೂಟ್ಯೂಬ್ ಚಾನೆಲ್‌ಗಳನ್ನು ಬಳಸಲಾಗಿದೆ ಎಂದು ಕಂಡುಬಂದಿದೆ. ನಿರ್ಬಂಧಿಸಲು ಆದೇಶಿಸಿದ ಕಂಟೆಂಟ್‌ನಲ್ಲಿ ಕೆಲವು ಭಾರತ ವಿರೋಧಿ ವಿಷಯವನ್ನು ಪೋಸ್ಟ್ ಮಾಡಲಾಗಿದೆ. ಹಲವು ಸಾಮಾಜಿಕ ಮಾಧ್ಯಮ ಖಾತೆಗಳು ಪಾಕಿಸ್ತಾನದಿಂದ ಸಂಘಟಿತ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಈ ಭಾರತೀಯ ಯೂಟ್ಯೂಬ್ ಆಧಾರಿತ ಚಾನೆಲ್‌ಗಳು ಉಕ್ರೇನ್‌ನಲ್ಲಿ ನಡೆಯುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಗಮನಾರ್ಹ ಪ್ರಮಾಣದ ಸುಳ್ಳು ವಿಷಯವನ್ನು ಪ್ರಕಟಿಸಿವೆ. ಅಷ್ಟೇ ಅಲ್ಲದೆ ಇತರ ದೇಶಗಳೊಂದಿಗೆ ಭಾರತದ ವಿದೇಶಿ ಸಂಬಂಧಗಳಿಗೆ ಧಕ್ಕೆ ತರುವ ಗುರಿಯನ್ನು ಹೊಂದಿದೆ ಎಂದು ಗಮನಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

“ಸಾಮಾಜಿಕ ಮಾಧ್ಯಮದಲ್ಲಿ ವಿಷಯವನ್ನು ವೈರಲ್ ಮಾಡಲು ಸುಳ್ಳು ಥಂಬ್‌ನೇಲ್‌ಗಳನ್ನು ಬಳಸಲಾಗಿದೆ ಮತ್ತು ವಿಡಿಯೊಗಳ ಶೀರ್ಷಿಕೆ ಮತ್ತು ಥಂಬ್‌ನೇಲ್ ಅನ್ನು ಆಗಾಗ್ಗೆ ಬದಲಾಯಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ ವ್ಯವಸ್ಥಿತ ಭಾರತ ವಿರೋಧಿ ನಕಲಿ ಸುದ್ದಿಗಳು ಪಾಕಿಸ್ತಾನದಿಂದ ಹುಟ್ಟಿಕೊಂಡಿವೆ ಎಂದು ಗಮನಿಸಲಾಗಿದೆ” ಎಂದು ಸಚಿವಾಲಯ ಹೇಳಿದೆ.

ರಾಷ್ಟ್ರೀಯ ಭದ್ರತೆ, ಸಾರ್ವಭೌಮತೆ ಮತ್ತು ಭಾರತದ ಸಮಗ್ರತೆ, ಸಾರ್ವಜನಿಕ ಸುವ್ಯವಸ್ಥೆ ಇತ್ಯಾದಿಗಳಿಗೆ ಸಂಬಂಧಿಸಿದ ಆಧಾರದ ಮೇಲೆ 78 ಯೂಟ್ಯೂಬ್ ಆಧಾರಿತ ಸುದ್ದಿ ಚಾನೆಲ್‌ಗಳು ಮತ್ತು ಹಲವಾರು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲು ಸರ್ಕಾರವು ಡಿಸೆಂಬರ್ 2021 ರಿಂದ ನಿರ್ದೇಶನಗಳನ್ನು ನೀಡಿತ್ತು.

ಇದನ್ನೂ ಓದಿಹಿಜಾಬ್ ಧರಿಸಿ ಬಂದ ರಶ್ಮಿಕಾ ಮಂದಣ್ಣ; ಮುಸ್ಲಿಂ ಹುಡುಗಿ ಪಾತ್ರದಲ್ಲಿ ಕೊಡಗಿನ ಬೆಡಗಿ

Follow us on

Related Stories

Most Read Stories

Click on your DTH Provider to Add TV9 Kannada