International Tea Day 2022: ದೈನಂದಿನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರುವ ಚಹಾ ಕುರಿತು ನಿಮಗೆ ತಿಳಿಯದ ವಿಷಯ ಇಲ್ಲಿದೆ

TV9 Digital Desk

| Edited By: ವಿವೇಕ ಬಿರಾದಾರ

Updated on:May 21, 2022 | 12:59 PM

ಚಹಾವನ್ನು ಜಗತ್ತಿಗೆ ಮೊದಲು ಪರಿಚಯಿಸಿದ ದೇಶ ಚೀನಾ. ಒಂದು ದಂತಕಥೆಯ ಪ್ರಕಾರ ಕ್ರಿ.ಪೂ 2737ರಲ್ಲಿ ಚಹಾ ಬೆಳೆಯನ್ನು ಚೀನಾದಲ್ಲಿ ಬೆಳೆಯುತ್ತಿದ್ದರು.

International Tea Day 2022:  ದೈನಂದಿನ ಜೀವನದಲ್ಲಿ ಅವಿಭಾಜ್ಯ ಅಂಗವಾಗಿರುವ ಚಹಾ ಕುರಿತು ನಿಮಗೆ ತಿಳಿಯದ ವಿಷಯ ಇಲ್ಲಿದೆ
ಸಾಂಧರ್ಬಿಕ ಚಿತ್ರ
Image Credit source: Hindustan Times

ಚಹಾ ದೈನಂದಿನ ಜೀವನದಲ್ಲಿ ಒಂದು ಅವಿಭಾಜ್ಯ ಅಂಗ ಎಂಬಂತಾಗಿದೆ. ಚಹಾ ಇಲ್ಲದಿದ್ದರೆ ದಿನವೇ ಪ್ರಾರಂಭವಾಗುವುದಿಲ್ಲ ಎನ್ನುವ ಮಟ್ಟಿಗೆ ಕೆಲವು ಜನರು ಚಹಾದ ದಾಸರಾಗಿರುತ್ತಾರೆ. ಚಹಾವನ್ನು ಕೆಲವರು ದಿನಕ್ಕೆ 3-4 ಬಾರಿ ಕುಡಿದರೇ ಇನ್ನು ಕೆಲವರು ದಿನಕ್ಕೆ 2 ಬಾರಿ ಕುಡಿಯುತ್ತಾರೆ. ಈ ಕಚೇರಿಗಳಲ್ಲಿ ಕೆಲಸ ಮಾಡೊ ಕೆಲವು ಜನರು ಮೈಂಡ ರಿಲ್ಯಾಕ್ಸ್​ಗಾಗಿ ಚಹಾ ಕುಡಿಯುತ್ತಾರೆ. ಚಹಾವನ್ನು ಕೆಲವರು ಬೆಳಿಗ್ಗೆ ಮತ್ತು ಸಾಯಂಕಾಲ ಮಾತ್ರ ಕುಡಿದರೇ, ಕೆಲವರು ಮಧ್ಯಾಹ್ನ ಊಟವಾದ ಮೇಲೂ ಚಹಾ ಕುಡಿಯುತ್ತಾರೆ.

ಉತ್ತರ ಕರ್ನಾಟಕದ ಭಾಗದಲ್ಲಿ ಚಹಾ ಎಲೆ ಅಡಿಕೆ, ಚಹಾದ ಜೋಡಿ ಚೂಡಾ ಸವಿಯುತ್ತಾರೆ. ಹಾಗೇ ವರಕವಿ ದ.ರಾ ಬೇಂದ್ರೆ ಅಜ್ಜ ತಮ್ಮ ನಿ ಹಿಂಗ ನೋಡ ಬ್ಯಾಡ ನನ್ನ ಹಾಡಿನೊಳಗೆ ಒಂದು ಸಾಲು ಬರೆಯುತ್ತಾರೆ, “ಚಾಹಾದ ಜೋಡಿ ಚೂಡಾಧಾಂಗ ನೀ ನನಗಂದಾಂವಾ ಚೌಡಿಯಲ್ಲ ನೀ ಚೂಡಾಮಣಿಯಂತ ರಮೀಸ ಬಂದಾಂವಾ” ಹೀಗೆ ಪ್ರಯತಮೆ ತನ್ನ ಪ್ರಿಯಕರನನ್ನು ತನ್ನೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತಾಳೆ. ಇದೆಲ್ಲ ಈಗ ಏಕೆ ಹೇಳುತ್ತಿದ್ದೇನೆ ಅಂದರೆ ಇವತ್ತು “ವಿಶ್ವ ಚಹಾ ದಿನ” (International Tea Day)   ಬನ್ನಿ ಈ ಚಹಾದ ಕುರಿತು ಕೆಲವೊಂದು ವಿಶೇಷ ಸಂಗತಿಗಳನ್ನು ತಿಳಿಯೋಣ….

ಚಹಾವನ್ನು ಜಗತ್ತಿಗೆ ಮೊದಲು ಪರಿಚಯಿಸಿದ ದೇಶ ಚೀನಾ (China). ಒಂದು ದಂತಕಥೆಯ ಪ್ರಕಾರ ಕ್ರಿ.ಪೂ 2737ರಲ್ಲಿ ಚೀನೀ ಚಕ್ರವರ್ತಿ ಶೆನ್ ನುಂಗ್ ಒಂದು ಮರದ ಕೆಳಗೆ ಕುಳಿತಿದ್ದನು. ಆಗ ಅವನ ಸೇವಕ, ಚಕ್ರವರ್ತಿಗೆ ಕುಡಿಯಲು ನೀರನ್ನು ಬಿಸಿ ಮಾಡುತ್ತಿರುವಾಗ ಮರದ ಎಲೆಗಳು ನೀರಿನಲ್ಲಿ ಬಿದ್ದವು. ಆಗ ರಾಜ ಆ ನೀರನ್ನು ಹಾಗೇ ಕುಡಿದ ಆಗ ಆತನಿಗೆ ಚಹಾ ರೀತಿಯ ನೀರನ್ನು ಕುಡಿದಂತೆ ಭಾಸವಾಯಿತು.

ಇದನ್ನೂ ಓದಿ

ಇದನ್ನು ಓದಿ: ಸಾವಿರ ಭಿನ್ನಾಭಿಪ್ರಾಯಗಳಿದ್ದರೂ ಒಲ್ಲದ ಸಂಗಾತಿಯೊಂದಿಗೆ ಬದುಕುವುದೇಕೆ? ಇಲ್ಲಿವೆ ಕಾರಣಗಳು

ಈ ಕಥೆಯಲ್ಲಿ ಏನಾದರೂ ಸತ್ಯವಿದೆಯೇ ಎಂದು ತಿಳಿಯುವುದು ಅಸಾಧ್ಯ. ಆದರೆ ಒಂದಂತು ಸತ್ಯ ಪಶ್ಚಿಮ ದೇಶಗಳಿಗಿಂತ ಹಲವು ಶತಮಾನಗಳ ಮೊದಲು ಚೀನಾದಲ್ಲಿ ಚಹಾವನ್ನು ಕುಡಿಯುತ್ತಿದ್ದರು. ಇದಕ್ಕೆ ಪೂರಕವೆಂಬಂತೆ ಹಾನ್ ರಾಜವಂಶದ (ಕ್ರಿ.ಪೂ. 206 – ಕ್ರಿ.ಶ. 220) ಸಮಾಧಿಗಳಲ್ಲಿ ಚಹಾಕ್ಕಾಗಿ ಕಂಟೈನರ್‌ಗಳು ಕಂಡುಬಂದಿವೆ. (ಕ್ರಿ.ಶ. 618-906), ಚಹಾವು ಚೀನಾದ ರಾಷ್ಟ್ರೀಯ ಪಾನೀಯವಾಗಿತ್ತು. ಎಂಟನೇ ಶತಮಾನದ ಅಂತ್ಯದಲ್ಲಿ ಲು ಯು ಎಂಬ ಬರಹಗಾರ ಸಂಪೂರ್ಣವಾಗಿ ಚಹಾ, ಚಾ ಚಿಂಗ್ ಅಥವಾ ಟೀ ಕ್ಲಾಸಿಕ್ ಬಗ್ಗೆ ಮೊದಲ ಪುಸ್ತಕವನ್ನು ಬರೆದರು. ಇದರ ನಂತರ ಸ್ವಲ್ಪ ಸಮಯದ ನಂತರ ಚಹಾವನ್ನು ಮೊದಲು ಜಪಾನ್‌ಗೆ ಪರಿಚಯಿಸಲಾಯಿತು.

1600ನೇ ಶತಮಾನದ ಉತ್ತರಾರ್ಧದಲ್ಲಿ ಯುರೋಪಿಯನಲ್ಲಿ ಚಹಾ ಪರಿಚಯವಾಯಿತು. ಭಾರತದಲ್ಲಿ ಅಸ್ಸಾಂ ಚಹಾ ಪುಡಿ ಮತ್ತು ಡಾರ್ಜಿಲಿಂಗ್ ಚಹಾ ಪುಡಿ ಪ್ರಸಿದ್ಧಿಯಾಗಿವೆ. ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಹಾ ಉತ್ಪಾದಕ ದೇಶವಾಗಿದೆ. 1820 ರ ದಶಕದ ಆರಂಭದಲ್ಲಿ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಭಾರತದ ಅಸ್ಸಾಂನಲ್ಲಿ ದೊಡ್ಡ ಪ್ರಮಾಣದ ಚಹಾ ಉತ್ಪಾದನೆಯನ್ನು ಪ್ರಾರಂಭಿಸಿತು, ಇದು ಸಾಂಪ್ರದಾಯಿಕವಾಗಿ ಸಿಂಗ್ಫೋ ಬುಡಕಟ್ಟಿನಿಂದ ತಯಾರಿಸಲ್ಪಟ್ಟ ಚಹಾ ವಿಧವಾಗಿದೆ.

ಚಹಾ ಅಸ್ಸಾಂನ ರಾಜ್ಯ ಪಾನೀಯ. ಡಿಸೆಂಬರ್ 2011 ರಲ್ಲಿ ಬಿಡುಗಡೆಯಾದ ASSOCHAM ವರದಿಯ ಪ್ರಕಾರ, ಭಾರತವು ವಿಶ್ವದ ಅತಿದೊಡ್ಡ ಚಹಾ ಗ್ರಾಹಕವಾಗಿದೆ. ಭಾರತ ಜಾಗತ್ತಿಗೆ ಶೇ 30 ರಷ್ಟು ಚಹಾವನ್ನು ರಪ್ತು ಮಾಡುತ್ತದೆ. ಚೀನಾದ ನಂತರ ಭಾರತವು ಎರಡನೇ ಅತಿ ದೊಡ್ಡ ಚಹಾ ರಫ್ತುದಾರವಾಗಿದೆ.

ಚಹಾ ಸೇವನೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ದಿನವನ್ನು ಮುಖ್ಯವಾಗಿ ವಿಶ್ವ ಚಹಾ ದಿನವೆಂದು ಆಚರಿಸಲಾಗುತ್ತದೆ. ಚಹಾವು ಔಷಧೀಯ ಮೌಲ್ಯವನ್ನು ಹೊಂದಿದ್ದು ಮತ್ತು ಜನರಿಗೆ ಆರೋಗ್ಯ ಪ್ರಯೋಜನಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಯುಎನ್ ಹೇಳಿದೆ. 2019 ರಲ್ಲಿ, ವಿಶ್ವಸಂಸ್ಥೆ (ಯುಎನ್) ವಿಶ್ವದ ಅತ್ಯಂತ ಹಳೆಯ ಪಾನೀಯಗಳ ಮಹತ್ವವನ್ನು ಗುರುತಿಸಿದೆ.

ಅಂತಾರಾಷ್ಟ್ರೀಯ ಚಹಾ ದಿನದ ಇತಿಹಾಸ 2005ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚಹಾ ದಿನವನ್ನು ಭಾರತದಲ್ಲಿ ಆಚರಿಸಲಾಯಿತು. 2015 ರಲ್ಲಿ ಭಾರತ ಸರ್ಕಾರ ಜಾಗತಿಕವಾಗಿ ಈ ದಿನವನ್ನು ವಿಸ್ತರಿಸಲು ಪ್ರಸ್ತಾಪಿಸಿತು. ಈ ದಿನವನ್ನು ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಏಕೆಂದರೆ ವರ್ಷದ ಈ ಸಮಯದಲ್ಲಿ ಹೆಚ್ಚಿನ ದೇಶಗಳಲ್ಲಿ ಚಹಾ ಉತ್ಪಾದನೆಯು ಪ್ರಾರಂಭವಾಗುತ್ತದೆ.

ಚಹಾ ಆರೋಗ್ಯಕ್ಕೆ ಪೂರಕ ಅಥವಾ ಮಾರಕ

ಚಹಾ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಾ? ಅಥವಾ ಕೆಟ್ಟದ್ದೇ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವೈದ್ಯಕೀಯ ಮತ್ತು ವೈಜ್ಞಾನಿಕ ಸಂಶೋಧನೆಯ ಪ್ರಕಾರ ದಿನಕ್ಕೆ ನಾಲ್ಕು ಕಪ್ ಚಹಾ ಕುಡಿಯುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದೆ. ವಿವಿಧ ಚಹಾಗಳು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು, ಉರಿಯೂತದ ವಿರುದ್ಧ ಹೋರಾಡಬಹುದು ಮತ್ತು ಕ್ಯಾನ್ಸರ್ ಮತ್ತು ಹೃದ್ರೋಗವನ್ನು ದೂರವಿಡಬಹುದು ಎಂದು ಹಲವಾರು ಅಧ್ಯಯನಗಳಲ್ಲಿ ಸಾಬೀತಾಗಿದೆ. ಹೀಗೆ ಅಂದ ಮಾತ್ರಕ್ಕೆ ಅತಿಯಾಗಿ ಚಹಾ ಕುಡಿಯುವ ಮುಂಚೆ ನಿಮ್ಮ ದೇಹ ಅದಕ್ಕೆ ಸ್ಪಂದಿಸುತ್ತಾ ಒಮ್ಮೆ ವಿಚಾರ ಮಾಡಿ ನಿಮ್ಮ ವೈದ್ಯರ ಸಲಹೆ ಪಡೆದು ಸೇವಿಸಿ.

ಇತ್ತೀಚಿನ ದಿನಗಳಲ್ಲಿ ಚಹಾ ಕುಡಿಯುವರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಚಹಾದ ಬೇಡಿಕೆಯು ಹೆಚ್ಚಾಗಿದೆ. ಈ ಮಳೆಗಾಲ ಮತ್ತು ಚಳಿಗಾಲ ಬಂದರೆ ಸಾಕು ಬೆಳಗಿನ ನಸುಕಿನ ಜಾವ ಚುಮು ಚುಮು ಚಳಿಯಲ್ಲಿ ಚಹಾ ಕುಡಿಯುವುದೇ ಒಂದು ಮಜಾ. ಹಾಗೇ ಸಂಜೆ ಹೊತ್ತು ಜಿಟಿ ಜಿಟಿ ಮಳೆಯಲ್ಲಿ ಬಿಸಿ ಬಿಸಿ ಚಹಾ ಅದರೊಂದಿಗೆ ಮಿರ್ಚಿ ಅಥವಾ ಯಾವುದಾರೂ ಕರೆದಿರುವ ಖ್ಯಾದ್ಯ ತಿಂದರೆ ಅದು ನೀಡುವ ತ್ರಿಲ್ ಬೇರೆಯಾಗಿರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada