Selfish People : ಈ ಗುಣಗಳಿರುವ ವ್ಯಕ್ತಿಗಳು ಸ್ವಾರ್ಥಿಗಳಂತೆ, ದೂರವಿದ್ದರೆ ನಿಮಗೆ ಒಳ್ಳೆಯದಂತೆ

ಈಗಿನ ಕಾಲದಲ್ಲಿ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ತಿಳಿಯುವುದೇ ಕಷ್ಟ. ಎದುರುಗಡೆ ಒಳ್ಳೆಯವರಂತೆ ಮುಖವಾಡ ಧರಿಸಿರುವ ಅದೆಷ್ಟೋ ಜನರು ಮನಸ್ಸು ಶುದ್ಧವಾಗಿರುವುದೇ ಇಲ್ಲ. ಕೆಲವೊಮ್ಮೆ ಸ್ವಾರ್ಥಕ್ಕೆ ಒಳ್ಳೆಯವರಂತೆ ನಟಿಸಿ ಬೆನ್ನಿಗೆ ಚೂರಿ ಹಾಕುವುದನ್ನು ನೋಡಿರಬಹುದು. ಹೀಗಾಗಿ ಇಂತಹ ಜನರಿಂದ ದೂರವಿರುವುದೇ ಒಳ್ಳೆಯದು. ಹಾಗಾದ್ರೆ ಈ ಸ್ವಾರ್ಥ ಜನರನ್ನು ಗುರುತಿಸುವುದು ಹೇಗೆ? ಎನ್ನುವ ಕುತೂಹಲಕಾರಿ ಸಂಗತಿ ಇಲ್ಲಿದೆ.

Selfish People : ಈ ಗುಣಗಳಿರುವ ವ್ಯಕ್ತಿಗಳು ಸ್ವಾರ್ಥಿಗಳಂತೆ, ದೂರವಿದ್ದರೆ ನಿಮಗೆ ಒಳ್ಳೆಯದಂತೆ
Selfish People
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Jan 10, 2025 | 12:48 PM

ಜೀವನನುದ್ದಕ್ಕೂ ವಿಭಿನ್ನ ಗುಣಸ್ವಭಾವದ ವ್ಯಕ್ತಿಗಳನ್ನು ಭೇಟಿಯಾಗುತ್ತೇವೆ. ಕೆಲವರು ನಮ್ಮ ಜೀವನದಲ್ಲಿ ಬಹಳ ಮುಖ್ಯ ವ್ಯಕ್ತಿಗಳಾಗುತ್ತಾರೆ. ಇನ್ನು ಕೆಲವು ಸಂಬಂಧಗಳು ಹೆಸರಿಗಷ್ಟೇ ಇರುತ್ತದೆ. ಆದರೆ ಎಲ್ಲವರನ್ನು ನಮ್ಮವರು ಎಂದುಕೊಳ್ಳುವುದು ಕಷ್ಟ. ಪ್ರಾರಂಭದಲ್ಲಿ ಒಳ್ಳೆಯವರಂತೆ ಮುಖವಾಡ ಹಾಕಿಕೊಂಡು ಹೆಚ್ಚಿನ ಸಂದರ್ಭದಲ್ಲಿ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಾರೆ. ಸಮಯ ಕಳೆದಂತೆ ಆ ವ್ಯಕ್ತಿಯ ಸ್ವಾರ್ಥಗುಣ ಬಹಿರಂಗವಾಗುತ್ತಾರೆ. ಹೀಗಾಗಿ ಒಬ್ಬ ವ್ಯಕ್ತಿಯಲ್ಲಿ ಈ ನಡವಳಿಕೆ ಕಂಡು ಬಂದರೆ ಆ ವ್ಯಕ್ತಿಗಳು ಸ್ವಾರ್ಥಿಗಳಾಗಿರುತ್ತಾರೆ. ಇಂತಹ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳುವುದೇ ಉತ್ತಮ.

ಇತರರನ್ನು ಬಳಸಿಕೊಳ್ಳುವುದರಲ್ಲಿ ನಿಪುಣರು:

ಸ್ವಾರ್ಥಿಗಳು ಯಾವತ್ತೂ ಪರರ ಬಗ್ಗೆ ಯೋಚನೆ ಮಾಡುವುದಿಲ್ಲ. ನಮ್ಮ ಜೊತೆಗೆ ಇದ್ದು ನಮ್ಮನ್ನು ಬಳಸಿಕೊಳ್ಳುತ್ತಾರೆ. ಈ ವ್ಯಕ್ತಿಗಳು ನಾಜೂಕಾಗಿ ಮಾತನಾಡಿ, ಅವರ ಕೆಲಸವನ್ನೆಲ್ಲಾ ನಮ್ಮಲ್ಲಿ ಮಾಡಿಸಿಕೊಳ್ಳುತ್ತಾರೆ. ಈ ವೇಳೆಯಲ್ಲಿ ಅವರಿಗೆ ಸ್ವಾರ್ಥತನವೇ ಮುಖ್ಯವಾಗಿರುತ್ತದೆ. ಆತ್ಮೀಯರೆನೆಸಿಕೊಂಡವರನ್ನು ಬಳಸಿಕೊಳ್ಳುವ ವೇಳೆ, ಬೇರೆಯವರ ಬಗ್ಗೆ ಕಾಳಜಿ ವಹಿಸುವ ಗುಣ ಇವರಲ್ಲಿ ಇರುವುದಿಲ್ಲ.

ಬೇರೆಯವರ ಭರವಸೆ ಈಡೇರಿಸುವುದಿಲ್ಲ:

ಸ್ವಾರ್ಥಿಗಳು ತಮ್ಮ ಸುತ್ತಲಿನವರಿಗೆ ಭರವಸೆಗಳನ್ನು ನೀಡುವ ಮೂಲಕ ಒಂದೊಳ್ಳೆ ಬಾಂಧವ್ಯ ಹೊಂದುತ್ತಾರೆ. ತದನಂತರದಲ್ಲಿ ತಾವು ನೀಡುವ ಯಾವುದೇ ಭರವಸೆಗಳನ್ನು ಈಡೇರಿಸುವತ್ತ ಮನಸ್ಸು ಮಾಡುವುದಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಸುಳ್ಳು ಭರವಸೆ ನೀಡುವುದು, ಸುಳ್ಳು ಹೇಳುವುದೇ ಇವರ ಗುಣವಾಗಿರುತ್ತದೆ. ಈ ಜನರಿಗೆ ಭರವಸೆ ನೀಡುವುದು ಗೊತ್ತಿರುತ್ತದೆ. ಆದರೆ ಅದನ್ನು ಉಳಿಸಿಕೊಳ್ಳುವುದು ತಿಳಿದಿರುವುದಿಲ್ಲ. ಹೀಗಾಗಿ ನಂಬಿಸಿ ಮೋಸ ಮಾಡುವ ಸಂದರ್ಭಗಳೇ ಹೆಚ್ಚು ಎನ್ನಬಹುದು.

ಕಷ್ಟದ ಸಮಯದಲ್ಲಿ ಕೈ ಕೊಡುವ ಗುಣ:

ನಮ್ಮವರು ಯಾವುದೇ ಸಂದರ್ಭ ಇರಲಿ ಜೊತೆಯಾಗಿ ನಿಲ್ಲುತ್ತಾರೆ. ಆದರೆ ಸ್ವಾರ್ಥ ಗುಣವಿರುವ ವ್ಯಕ್ತಿಗಳು ಬೇರೆಯವರ ಬಗ್ಗೆ ಕಾಳಜಿ ವಹಿಸುವ ಮನಸ್ಥಿತಿ ಹೊಂದಿರುವುದಿಲ್ಲ. ಈ ಜನರ ಬಳಿ ಸಹಾಯ ಕೇಳಿದರೆ ಅರ್ಧದಲ್ಲೇ ಕೈ ಕೊಡುವುದೇ ಹೆಚ್ಚು. ತಮ್ಮ ಕಷ್ಟಗಳಿಗೆ ಕಿವಿಯಾಗದೇ ತಮ್ಮ ಕಷ್ಟಗಳ ಬಗ್ಗೆಯೇ ಮಾತನಾಡುತ್ತಾರೆ. ಈ ಜನರ ಸ್ನೇಹದಿಂದ ದೂರವಿರುವುದೇ ಉತ್ತಮ.

ಭಾವನಾತ್ಮಕ ಸಂಬಂಧಕ್ಕೆ ಬೆಲೆಯಿಲ್ಲ:

ಎಲ್ಲರ ಜೊತೆಗೆ ಸ್ನೇಹದಿಂದ ಇದ್ದರೂ ಕೂಡ ಈ ಜನರಲ್ಲಿ ಸಂಬಂಧಕ್ಕೆ ಬೆಲೆಯಿರುವುದಿಲ್ಲ. ತನ್ನ ಸುತ್ತಲಿನ ವ್ಯಕ್ತಿಗಳೊಂದಿಗೆ ಭಾವನಾತ್ಮಕವಾಗಿ ಸಂಬಂಧವನ್ನು ಹೊಂದಿರುವುದಿಲ್ಲ. ಅವರಿಗೆ ಬೇಕಾದ್ದನ್ನು ಮಾತ್ರ ಪಡೆದುಕೊಂಡು ಸ್ವಾರ್ಥಕ್ಕಾಗಿ ಸ್ನೇಹವನ್ನು ಬಳಸಿಕೊಳ್ಳುತ್ತಾರೆ. ಇಂತಹ ಜನರಲ್ಲಿ ಭಾವನಾತ್ಮಕ ಸಂಬಂಧ ಹಾಗೂ ಆತ್ಮೀಯತೆ ಬಯಸುವುದು ತಪ್ಪು.

ಎಲ್ಲರೊಂದಿಗೆ ಇದ್ದರೂ ಈ ವ್ಯಕ್ತಿಗಳು ಏಕಾಂಗಿಗಳಾಗಿರುತ್ತಾರೆ:

ಸ್ವಾರ್ಥ ಜನರು ಯಾವಾಗಲೂ ಏಕಾಂಗಿಯಾಗಿರಲು ಇಷ್ಟ ಪಡುತ್ತಾರೆ. ತಮ್ಮ ಸುತ್ತಮುತ್ತಲಿನ ಜನರು ತನ್ನ ಮಾತನ್ನು ಕೇಳಬೇಕು. ತಮ್ಮನ್ನು ಕೇಂದ್ರಿಕರಿಸಬೇಕೆನ್ನುವ ವರ್ತನೆಗಳು ಇವರಲ್ಲಿ ಹೆಚ್ಚು ಕಾಣಿಸುತ್ತದೆ. ತಮ್ಮವರು ಯಾರಾದರೂ ಜೀವನದಲ್ಲಿ ಉತ್ತಮ ಸ್ಥಾನಮಾನ ಪಡೆಯುತ್ತಿದ್ದರೆ ಅದನ್ನು ಸಹಿಸಿಕೊಳ್ಳುವುದಿಲ್ಲ. ಅವರನ್ನು ಕಂಡು ಅಸೂಯೆ ಪಟ್ಟುಕೊಳ್ಳುತ್ತಾರೆ. ಇತರರಿಗಿಂತ ತಾನು ಮೇಲೆ ಬರಬೇಕೆಂದು ಕಳ್ಳ ದಾರಿಯಲ್ಲಿ ದುಡ್ಡು ಮಾಡುವುದು, ತಾವು ದುಡ್ಡು ಮಾಡಲು ಇತರರನ್ನು ಬಳಸಿಕೊಳ್ಳುವುದು ಇಂತಹ ಜನರು ನಿಜಕ್ಕೂ ಕೆಟ್ಟವರು. ಈ ಗುಣವಿರುವ ಜನರು ನಿಮ್ಮ ಸ್ನೇಹಿತರ ಗುಂಪಿನಲ್ಲಿದ್ದರೆ ಅಂತರ ಕಾಯ್ದುಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ