AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test : ನಿಮ್ಮ ಇಷ್ಟದ ಪ್ರಾಣಿ ರಿವೀಲ್ ಮಾಡುತ್ತೆ ನಿಮ್ಮ ರಹಸ್ಯಮಯ ವ್ಯಕ್ತಿತ್ವ

ನೀವು ನಡೆಯುವ ಶೈಲಿಯಿಂದ, ಕುಳಿತುಕೊಳ್ಳುವ ಭಂಗಿ, ನಿಂತುಕೊಳ್ಳುವ ಭಂಗಿ, ಮೂಗು, ಮುಖ, ಕೈ ಬೆರಳುಗಳ ಆಕಾರದಿಂದ ನಿಮ್ಮ ವ್ಯಕ್ತಿತ್ವ ಹೇಗೆಂಬುದನ್ನು ತಿಳಿಯಬಹುದು ಎಂಬುದು ನಿಮಗೆ ತಿಳಿದಿದೆ. ಆದರೆ, ನಿಮ್ಮ ನೆಚ್ಚಿನ ಪ್ರಾಣಿಗಳ ಮೂಲಕವೂ ನಿಮ್ಮ ಗುಣಸ್ವಭಾವ ತಿಳಿಯಬಹುದು. ನೀವು ಪ್ರೀತಿಸುವ ಪ್ರಾಣಿ ನಿಮ್ಮ ಸ್ವಭಾವ, ನಿಮ್ಮ ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆಯಂತೆ, ಆ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Personality Test : ನಿಮ್ಮ ಇಷ್ಟದ ಪ್ರಾಣಿ ರಿವೀಲ್ ಮಾಡುತ್ತೆ ನಿಮ್ಮ ರಹಸ್ಯಮಯ ವ್ಯಕ್ತಿತ್ವ
Personality Test
ಸಾಯಿನಂದಾ
| Edited By: |

Updated on: Jan 10, 2025 | 2:03 PM

Share

ಪ್ರತಿಯೊಬ್ಬರು ಗುಣಸ್ವಭಾವ ಹಾಗೂ ವಿಭಿನ್ನ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಆದರೆ ಒಬ್ಬ ವ್ಯಕ್ತಿಯು ಹೇಗೆ ಎಂದು ತಿಳಿಯಲು ಆತನ ಜೊತೆಗೆ ಸ್ವಲ್ಪ ಸಮಯವಾದರೂ ಕಳೆಯಲೇ ಬೇಕು. ಆದರೆ ಈಗೀಗ ಕಣ್ಣು, ಅಂಗೈ, ಮುಷ್ಟಿ, ಮಾತನಾಡುವ, ನಡೆಯುವ ಶೈಲಿಯಿಂದಲೇ ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು ಎನ್ನುವುದು ತಿಳಿದಿದೆ. ಆದರೆ ಇಷ್ಟದ ಪ್ರಾಣಿಗಳು ಕೂಡ ವ್ಯಕ್ತಿಯ ಗುಣಸ್ವಭಾವವನ್ನು ಬಿಚ್ಚಿಡುತ್ತದೆಯಂತೆ, ಇದು ಅಚ್ಚರಿಯಾದರೂ ಕೂಡ ಸತ್ಯ. ಹಾಗಾದ್ರೆ ನಿಮ್ಮ ಇಷ್ಟದ ಪ್ರಾಣಿ ಯಾವುದು ಎನ್ನುವುದರ ಆಧಾರದ ಮೇಲೆ ನಿಮಗೆ ಗೊತ್ತಿಲ್ಲದ ರಹಸ್ಯಮಯ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ.

ಆನೆ:

ನಿಮ್ಮ ಇಷ್ಟದ ಪ್ರಾಣಿ ಆನೆಯಾಗಿದ್ದರೆ ಅದು ನಿಮ್ಮ ವ್ಯಕ್ತಿತ್ವವನ್ನು ತಿಳಿಸುತ್ತದೆ. ಈ ಪ್ರಾಣಿಯನ್ನು ಇಷ್ಟ ಪಡುವ ವ್ಯಕ್ತಿಗಳು ನಿಜಕ್ಕಿ ಬುದ್ಧಿವಂತಿಕೆ, ಪ್ರಾಮಾಣಿಕತೆ ಹಾಗೂ ಆಂತರಿಕ ಸಾಮರ್ಥ್ಯವನ್ನು ಹೆಚ್ಚಿರುತ್ತದೆ. ಆನೆಯಂತೆ ಈ ವ್ಯಕ್ತಿಗಳಲ್ಲಿ ತೀಕ್ಷ್ಣತೆ ಚಾಣಾಕ್ಷತನವನ್ನು ಹೊಂದಿರುತ್ತಾರೆ. ಗಜರಾಜನಂತೆ ಈ ವ್ಯಕ್ತಿಗಳು ತಮ್ಮ ಧೀಮಂತ ನಡಿಗೆ, ಗಾಂಭೀರ್ಯತೆಯಿಂದ ಇತರರಿಗಿಂತ ಭಿನ್ನವಾಗಿರುತ್ತಾರೆ, ಈ ವ್ಯಕ್ತಿಗಳನ್ನು ಎಲ್ಲರೂ ಕೂಡ ಗೌರವದಿಂದ ಕಾಣುತ್ತಾರೆ.

ಹುಲಿ:

ಕಾಡಿನಲ್ಲಿರುವ ಕ್ರೂರ ಪ್ರಾಣಿಗಳ ಪೈಕಿ ಹುಲಿಯನ್ನು ಇಷ್ಟ ಪಡುವ ವ್ಯಕ್ತಿಗಳು ನಿರ್ಭಯತೆ ಹಾಗೂ ಭಯವಿಲ್ಲದೆ ಸ್ವತಂತ್ರವಾಗಿ ಬದುಕುತ್ತಾರೆ. ಈ ವ್ಯಕ್ತಿಗಳು ಅತ್ಯಂತ ಶಕ್ತಿಶಾಲಿ ಗುಣವನ್ನು ಹೊಂದಿದ್ದು ತಮ್ಮ ಗುರಿಯೆಡೆಗೆ ಕೇಂದ್ರೀಕರಿಸುತ್ತಾರೆ. ಜೀವನದಲ್ಲಿ ಏನೇ ಸಂಕಷ್ಟ ಎದುರಾದರೂ ಧೈರ್ಯದಿಂದಲೇ ಮುನ್ನುಗ್ಗಿ ತಮ್ಮ ಕೆಲಸ ಮಾಡಿ ಮುಗಿಸುತ್ತಾರೆ.

ದನ:

ಸಾಕು ಪ್ರಾಣಿಯಾದ ದನವನ್ನು ಇಷ್ಟ ಪಡುವ ವ್ಯಕ್ತಿಗಳು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಸರಳತೆಯೊಂದಿಗೆ ಸುತ್ತಮುತ್ತಲಿನ ವ್ಯಕ್ತಿಗಳೊಂದಿಗೆ ಹೆಚ್ಚು ಆತ್ಮೀಯರಾಗಿರುತ್ತಾರೆ. ಎಲ್ಲರನ್ನು ಫೋಷಿಸುವ ಗುಣ ಹೊಂದಿದ್ದು , ಪರರಿಗೆ ಒಳ್ಳೆಯದ್ದನ್ನೇ ಬಯಸುವ ಮನಸ್ಸು ಇವರಾದ್ದಾಗಿರುತ್ತದೆ. ಆತ್ಮೀಯ ವ್ಯಕ್ತಿಗಳ ಜೀವನದ ಉನ್ನತಿಗಾಗಿ ಈ ವ್ಯಕ್ತಿಗಳು ಸದಾ ಶ್ರಮಿಸುತ್ತಾರೆ.

ನಾಯಿ:

ಪ್ರಾಮಾಣಿಕ ಹಾಗೂ ನಿಷ್ಕಲ್ಮಶ ಪ್ರೀತಿಗೆ ಹೆಸರಾದ ನಾಯಿಯನ್ನು ಇಷ್ಟಪಡುವ ವ್ಯಕ್ತಿಗಳು ಪ್ರಾಮಾಣಿಕತೆ ಹಾಗೂ ಸ್ನೇಹಪರರಾಗಿರುತ್ತಾರೆ. ಈ ವ್ಯಕ್ತಿಗಳು ತಮಗೆ ಸಹಾಯ ಮಾಡಿದ ವ್ಯಕ್ತಿಗಳನ್ನು ಜೀವಮಾನದಲ್ಲಿ ಮರೆಯುವುದಿಲ್ಲ. ಅವರಿಗೆ ಕೃತಜ್ಞತೆಯನ್ನು ತೋರುತ್ತಾರೆ. ಕಷ್ಟದಲ್ಲಿರುವವರಿಗೆ ನೆರವಾಗುವ ಗುಣ ಈ ವ್ಯಕ್ತಿಗಳಲ್ಲಿ ಅಧಿಕವಾಗಿರುತ್ತದೆ. ಹೀಗಾಗಿ ಈ ವ್ಯಕ್ತಿಗಳನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ.

ಇದನ್ನೂ ಓದಿ: ಈ ಗುಣಗಳಿರುವ ವ್ಯಕ್ತಿಗಳು ಸ್ವಾರ್ಥಿಗಳಂತೆ, ದೂರವಿದ್ದರೆ ನಿಮಗೆ ಒಳ್ಳೆಯದಂತೆ

ಕೋತಿ:

ಕೋತಿ ಸ್ವಭಾವತಃ ಚೇಷ್ಟೆ ಮಾಡುವ ಪ್ರಾಣಿಯಾಗಿದ್ದು, ನಿಮ್ಮ ಇಷ್ಟದ ಪ್ರಾಣಿ ಕೋತಿಯಾಗಿದ್ದರೆ ಈ ವ್ಯಕ್ತಿಗಳು ಸದಾ ವಿನೋದ ಹಾಗೂ ಕುತೂಹಲ ಪ್ರವೃತ್ತಿಯುಳ್ಳರಾಗಿರುತ್ತಾರೆ. ಜೀವನದಲ್ಲಿ ಏನೇ ಎದುರಾದರೂ ಖುಷಿಯಾಗಿಯೇ ಪ್ರತಿ ಕ್ಷಣವನ್ನು ಕಳೆಯುತ್ತಾರೆ. ಸಹಾಯಮಯ ಪ್ರವೃತ್ತಿಯಿಂದ ಜೀವನದಲ್ಲಿ ಹೊಸ ಹೊಸ ಕಾರ್ಯಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಯಾವುದಕ್ಕೂ ಹೆಚ್ಚು ತಲೆಕೆಡಿಸಿಕೊಳ್ಳದೇ ಆರಾಮದಾಯಕವಾಗಿರಲು ಬಯಸುವ ವ್ಯಕ್ತಿಗಳಾಗಿರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್