AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sweat: ಬೆವರಿನ ದುರ್ವಾಸನೆಯಿಂದ ಮುಕ್ತಿ ಹೊಂದಲು ಹೀಗೆ ಮಾಡಿ

Sweat:ಬೇಸಿಗೆ(Summer)ಯಂತಲ್ಲ ಬೆವರಿನ ದೇಹ ಪ್ರಕೃತಿಯಿದ್ದರೆ ಎಲ್ಲಾ ಕಾಲದಲ್ಲಿಯೂ ದೇಹ ಬೆವರುತ್ತದೆ. ದೇಶದ ವಿವಿಧೆಡೆ ಮಳೆ ಆರಂಭವಾಗಿದೆ ಇನ್ನೂ ಕೆಲವೆಡೆ ಬಿಸಿಲಿನ ತಾಪಮಾನ ಹಾಗೆಯೇ ಇದೆ. ಕಂಕುಳಲ್ಲಿನ ಬೆವರು ಕಿರಿಕಿರಿ ಜತೆಗೆ ಮುಜುಗರವನ್ನು ಕೂಡ ಉಂಟು ಮಾಡುತ್ತದೆ.

Sweat: ಬೆವರಿನ ದುರ್ವಾಸನೆಯಿಂದ ಮುಕ್ತಿ ಹೊಂದಲು ಹೀಗೆ ಮಾಡಿ
Sweat
TV9 Web
| Updated By: ನಯನಾ ರಾಜೀವ್|

Updated on: May 20, 2022 | 4:02 PM

Share

ಬೇಸಿಗೆ(Summer)ಯಂತಲ್ಲ ಬೆವರಿನ ದೇಹ ಪ್ರಕೃತಿಯಿದ್ದರೆ ಎಲ್ಲಾ ಕಾಲದಲ್ಲಿಯೂ ದೇಹ ಬೆವರುತ್ತದೆ. ದೇಶದ ವಿವಿಧೆಡೆ ಮಳೆ ಆರಂಭವಾಗಿದೆ ಇನ್ನೂ ಕೆಲವೆಡೆ ಬಿಸಿಲಿನ ತಾಪಮಾನ ಹಾಗೆಯೇ ಇದೆ. ಕಂಕುಳಲ್ಲಿನ ಬೆವರು ಕಿರಿಕಿರಿ ಜತೆಗೆ ಮುಜುಗರವನ್ನು ಕೂಡ ಉಂಟು ಮಾಡುತ್ತದೆ.

ಬಿಗಿಯಾದ ಬಟ್ಟೆಗಳನ್ನು ತೊಡುವುದನ್ನು ಕಡಿಮೆ ಮಾಡಿ

ಬೇಸಿಗೆ ಸಮಯ ಅಥವಾ ಬಿಸಿಲಿದ್ದಾಗ ಮನೆಯಿಂದ ಹೊರಗೆ ಹೊರಟರೆ ಬಿಗಿಯಾದ ಬಟ್ಟೆಗಳನ್ನು ಧರಿಸುವುದನ್ನು ಬಿಡಿ. ದೇಹದೊಳಗೆ ಸ್ವಲ್ಪವೂ ಗಾಳಿ ಹೋಗದೆ ಇದ್ದರೆ ಅಂತಹ ಪರಿಸ್ಥಿತಿಯಲ್ಲಿ, ನೀವು ಸಡಿಲವಾದ ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸುವುದು ಬಹುಮುಖ್ಯವಾಗುತ್ತದೆ.

ಕಂಕುಳ ವಿಪರೀತ ಬೆವರುವುದನ್ನು ತಡೆಗಟ್ಟುವುದು ಹೇಗೆ? ಲಿಂಬೆ ರಸ ಲಿಂಬೆ ರಸದಲ್ಲಿ ಆಮ್ಲೀಯ ಗುಣವು ಇದೆ ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಕಂಕುಳಿನಲ್ಲಿ ಇರುವಂತಹ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಇದು ತಡೆಯುವುದು. ಲಿಂಬೆ ರಸ ಹಚ್ಚಿಕೊಂಡರೆ ಆಗ ಅದು ಪಿಎಚ್ ಮಟ್ಟ ತಗ್ಗಿಸಿ, ಚರ್ಮದಲ್ಲಿನ ಬ್ಯಾಕ್ಟೀರಿಯಾ ಕೊಲ್ಲುವುದು.

-ಲಿಂಬೆ ತೆಗೆದುಕೊಳ್ಳಿ ಮತ್ತು ಅದನ್ನು ಎರಡು ತುಂಡು ಮಾಡಿ.

-ಇದನ್ನು ನೇರವಾಗಿ ಕಂಕುಳಿನ ಭಾಗಕ್ಕೆ ಉಜ್ಜಿಕೊಳ್ಳಿ.

-ಒಂದು ನಿಮಿಷ ಕಾಲ ಹಾಗೆ ಒಣಗಲು ಬಿಡಿ ಮತ್ತು ಇದರ ಬಳಿಕ ತೊಳೆಯಿರಿ.

-ಇದನ್ನು ನೀವು ಸ್ನಾನಕ್ಕೆ ಮೊದಲು ಮಾಡಿದರೆ ತುಂಬಾ ಒಳ್ಳೆಯದು.

ಸೂಚನೆ: ಸೂಕ್ಷ್ಮ ಚರ್ಮದ ಸಮಸ್ಯೆ ಇರುವಂತಹ ಜನರು ನೇರವಾಗಿ ಲಿಂಬೆಯನ್ನು ಚರ್ಮಕ್ಕೆ ಹಚ್ಚಿಕೊಳ್ಳಬೇಡಿ. ಇದನ್ನು ನೀರಿನೊಂದಿಗೆ ಮಿಶ್ರಣ ಮಾಡಿಕೊಂಡು, ಹತ್ತಿ ಉಂಡೆಯಿಂದ ಕಂಕುಳಿನ ಭಾಗಕ್ಕೆ ಹಚ್ಚಿ.

ಕೊಬ್ಬಿನ ಪದಾರ್ಥ ಸೇವನೆ ಕಡಿಮೆ ಮಾಡಿ ನೀವು ಹೆಚ್ಚು ಬವರುತ್ತಿದ್ದರೆ ನಿಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಹೆಚ್ಚು ಎಣ್ಣೆಯುಕ್ತ ಆಹಾರ ಪದಾರ್ಥಗಳ ಸೇವನೆಯನ್ನು ತಪ್ಪಿಸಬೇಕು. ಕೊಬ್ಬಿನ ಪದಾರ್ಥಗಳನ್ನು ತಿನ್ನುವುದು ಅತಿಯಾದ ಬೆವರುವಿಕೆಗೆ ಕಾರಣವಾಗುತ್ತದೆ, ಇದರಿಂದ ದುರ್ವಾಸನೆ ಉಂಟಾಗುತ್ತದೆ.

ಈ ಕೆಲಸವನ್ನು ಮಾಡಿ ನಿಮ್ಮ ದೇಹ ಹೆಚ್ಚಾಗಿ ಬೆವರುತ್ತಿದ್ದರೆ ರಾತ್ರಿ ಮಲಗುವ ಮುನ್ನ ಸ್ನಾನ ಮಾಡಿ, ಬಳಿಕ ಕಂಕುಳನ್ನು ಒಣಗಿಸಿ ಆ ಜಾಗದಲ್ಲಿ ಡಿಯೋಡರೆಂಟ್ ಹಚ್ಚಿದರೆ ಬೆವರುವುದು ಕಡಿಮೆಯಾಗುತ್ತದೆ.

ಟೀ ಬ್ಯಾಗ್ ದೇಹದಲ್ಲಿ ಬೆವರಿನ ಕಣಗಳು ನಿಲ್ಲದಂತೆ ಮಾಡುವಂತಹ ಅಂಶವು ಚಾದಲ್ಲಿದೆ. ಇದು ಬೆವರು ತಡೆಯಲು ಚರ್ಮವನ್ನು ಒಣಗುವಂತೆ ಮಾಡುವುದು. ಕೆಲವು ಟೀ ಬ್ಯಾಗ್ ಗಳನ್ನು ಕುದಿಸಿ ಮತ್ತು ಇದನ್ನು ಬಾತ್ ಟಬ್​ನಲ್ಲಿರುವ ನೀರಿಗೆ ಹಾಕಿ. ಹೀಗೆ ನೀವು ದಿನಾಲೂ ಸ್ನಾನ ಮಾಡಿದರೆ ಆಗ ಖಂಡಿತವಾಗಿಯೂ ವಾಸನೆಯಿಂದ ಪರಿಹಾರ ಸಿಗುವುದು.

ರೋಸ್ ವಾಟರ್ ರೋಸ್ ವಾಟರ್ ಬಳಕೆ ಮಾಡುವುದರಿಂದ ಚರ್ಮದಲ್ಲಿನ ರಂಧ್ರಗಳು ಕುಗ್ಗಿ, ಬೆವರು ಕಡಿಮೆ ಆಗುವುದು. ಇದರೊಂದಿಗೆ ದೇಹದಲ್ಲಿ ಒಳ್ಳೆಯ ಸುವಾಸನೆ ಬರುವಂತೆ ಮಾಡುವುದು. ರೋಸ್ ವಾಟರ್ ಮತ್ತು ಆ್ಯಪಲ್ ಸೀಡರ್ ವಿನೇಗರ್​ ಅನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಿ ಮತ್ತು ಅದನ್ನು ಸಣ್ಣ ಸ್ಪ್ರೇ ಬಾಟಲಿಗೆ ಹಾಕಿಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ