International Tea Day 2022: ಅಂತಾರಾಷ್ಟ್ರೀಯ ಚಹಾ ದಿನದ ಇತಿಹಾಸ, ಮಹತ್ವ, ವಿಧಗಳ ಬಗ್ಗೆ ಮಾಹಿತಿ

International Tea Day 2022: ಅಂತಾರಾಷ್ಟ್ರೀಯ ಚಹಾ ದಿನದ ಇತಿಹಾಸ, ಮಹತ್ವ, ವಿಧಗಳ ಬಗ್ಗೆ ಮಾಹಿತಿ
International Tea Day 2022

International Tea Day 2022:ಇಂದು ಅಂತಾರಾಷ್ಟ್ರೀಯ ಚಹಾ ದಿನ(International Tea Day), ಸಾಕಷ್ಟು ಮಂದಿ ಜೀವನದಲ್ಲಿ ವ್ಯಕ್ತಿಯತೆಯೇ ಚಹಾಗೂ ಕೂಡ ಪ್ರಾಮುಖ್ಯತೆ ನೀಡಿದ್ದಾರೆ. ಚಹಾ ಕುಡಿಯದೇ ದಿನಚರಿಯೇ ಆರಂಭವಾಗದು.

TV9kannada Web Team

| Edited By: Nayana Rajeev

May 21, 2022 | 11:37 AM

ಇಂದು ಅಂತಾರಾಷ್ಟ್ರೀಯ ಚಹಾ ದಿನ(International Tea Day), ಸಾಕಷ್ಟು ಮಂದಿ ಜೀವನದಲ್ಲಿ ವ್ಯಕ್ತಿಯತೆಯೇ ಚಹಾಗೂ ಕೂಡ ಪ್ರಾಮುಖ್ಯತೆ ನೀಡಿದ್ದಾರೆ. ಚಹಾ ಕುಡಿಯದೇ ದಿನಚರಿಯೇ ಆರಂಭವಾಗದು. ಒಂದೇ ಒಂದು ದಿನ ಚಹಾ ಕುಡಿಯದಿದ್ದರೂ ಏನೋ ಕಳೆದುಕೊಂಡಂತೆ ಭಾಸವಾಗುತ್ತಿರುತ್ತದೆ. ಕೆಲವರಿಗೆ ತಲೆನೋವು ಕೂಡಾ ಬರುತ್ತದೆ. ಒತ್ತಡ ನಿವಾರಣೆಗೆ, ದಣಿವು ನಿವಾರಿಸಲು, ದೇಹಕ್ಕೆ ಚೈತನ್ಯ ನೀಡುವುದಕ್ಕೂ ಚಹಾ ಸಹಕಾರಿ. ತಲೆ ನೋವು, ಒತ್ತಡ, ಟೆನ್ಷನ್ ಕಡಿಮೆ ಮಾಡಿ ಫ್ರೆಶ್‌ನೆಸ್ ಬೇಕು ಅನಿಸುವ ಪ್ರತಿಯೊಬ್ಬರಿಗೂ ಚಹಾ ಒಂದು ಮಾತ್ರೆ ಇದ್ದಂತೆ.

ಮೇ 21, 2021 ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತಿದೆ. ಚಹಾ ಸೇವನೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ದಿನವನ್ನು ಮುಖ್ಯವಾಗಿ ಆಚರಿಸಲಾಗುತ್ತದೆ.

ಚಹಾವು ಔಷಧೀಯ ಮೌಲ್ಯವನ್ನು ಹೊಂದಿದ್ದು ಮತ್ತು ಜನರಿಗೆ ಆರೋಗ್ಯ ಪ್ರಯೋಜನಗಳನ್ನು ತರುವ ಸಾಮರ್ಥ್ಯವನ್ನು ಹೊಂದಿದೆ ಎಂದು ಯುಎನ್ ಹೇಳಿದೆ. 2019 ರಲ್ಲಿ, ವಿಶ್ವಸಂಸ್ಥೆ (ಯುಎನ್) ವಿಶ್ವದ ಅತ್ಯಂತ ಹಳೆಯ ಪಾನೀಯಗಳ ಮಹತ್ವವನ್ನು ಗುರುತಿಸಿದೆ.

ಚಹಾವು ಉದ್ಯೋಗ, ರಫ್ತು ಗಳಿಕೆ ಮತ್ತು ಆಹಾರ ಭದ್ರತೆಗೆ ಕೊಡುಗೆ ನೀಡುತ್ತದೆ ಎಂದು ಯುಎನ್ ಟ್ವೀಟ್ ಮಾಡಿದೆ. ಚಹಾದ ಔಷಧೀಯ ಅಂಶವನ್ನು ಯುಎನ್ ಗುರುತಿಸಿದೆ ಮಾತ್ರವಲ್ಲ, ಪಾನೀಯವನ್ನು ತನ್ನ ಸುಸ್ಥಿರ ಅಭಿವೃದ್ಧಿ ಗುರಿ ಕಾರ್ಯಕ್ರಮದ ಪ್ರಮುಖ ಅಂಶವೆಂದು ಪರಿಗಣಿಸಿದೆ. ಪ್ರಪಂಚದಾದ್ಯಂತ ಹಸಿವು ಮತ್ತು ಬಡತನವನ್ನು ನಿರ್ಮೂಲನೆ ಮಾಡುವಲ್ಲಿ ಚಹಾ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ.

ಅಂತಾರಾಷ್ಟ್ರೀಯ ಚಹಾ ದಿನವನ್ನು ಯುಎನ್‌ನ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) ಆಚರಿಸುತ್ತದೆ. ಇದಕ್ಕೂ ಮುನ್ನ, ಚಹಾ ಉತ್ಪಾದಿಸುವ ರಾಷ್ಟ್ರಗಳಾದ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಇಂಡೋನೇಷ್ಯಾ, ಕೀನ್ಯಾ, ಮಲಾವಿ, ಮಲೇಷ್ಯಾ, ಉಗಾಂಡಾ, ಭಾರತ ಮತ್ತು ಟಾಂಜಾನಿಯಾಗಳಲ್ಲಿ ಡಿಸೆಂಬರ್ 15 ಅನ್ನು ಅಂತರರಾಷ್ಟ್ರೀಯ ಚಹಾ ದಿನವಾಗಿ ಆಚರಿಸಲಾಗುತ್ತಿತ್ತು.

ಅಂತಾರಾಷ್ಟ್ರೀಯ ಚಹಾ ದಿನದ ಇತಿಹಾಸ 2005ರಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಚಹಾ ದಿನವನ್ನು ಭಾರತದಲ್ಲಿ ಆಚರಿಸಲಾಯಿತು. 2015 ರಲ್ಲಿ ಭಾರತ ಸರ್ಕಾರ ಜಾಗತಿಕವಾಗಿ ಈ ದಿನವನ್ನು ವಿಸ್ತರಿಸಲು ಪ್ರಸ್ತಾಪಿಸಿತು. ಈ ದಿನವನ್ನು ಮೇ ತಿಂಗಳಲ್ಲಿ ಆಚರಿಸಲಾಗುತ್ತದೆ. ಏಕೆಂದರೆ ವರ್ಷದ ಈ ಸಮಯದಲ್ಲಿ ಹೆಚ್ಚಿನ ದೇಶಗಳಲ್ಲಿ ಚಹಾ ಉತ್ಪಾದನೆಯು ಪ್ರಾರಂಭವಾಗುತ್ತದೆ.

ಭಾರತದಲ್ಲಿ ಲಭ್ಯವಿರುವ ಚಹಾಗಳು -ಕಾಶ್ಮೀರಿ ನೂನ್ ಚಹಾ -ಗುಜರಾತಿ ಉಕಾಡೋ -ಇರಾನಿ ಚಹಾ -ಬಂಗಾಳದ ಲಾಬೂ ಚಹಾ -ಮಂಗಳೂರಿನ ಕಸಾಯ್

ಚಹಾ ಕುಡಿಯುವುದರಿಂದ ಸಿಗುವ ಲಾಭಗಳು: ಚಹಾದಲ್ಲಿ ಆಂಟಿಆಕ್ಸಿಡೆಂಟ್‌ಗಳು, ಆಂಟಿ ಕ್ಯಾಟೆಚಿನ್‌ಗಳು ಮತ್ತು ಪಾಲಿಫಿನಾಲ್‌ ಅಂಶಗಳಿವೆ. ಇದು ನಮ್ಮ ದೇಹದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಗ್ರೀನ್ ಟೀ ದೇಹದಲ್ಲಿ ರೋಗ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಕೊಲೊರೆಕ್ಟಲ್ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಸಹಕಾರಿಯಾಗಿದೆ.

ಅಪಧಮನಿಗಳ ಅಡಚಣೆಯನ್ನು ತಡೆಯಲು, ಕೊಬ್ಬನ್ನು ಕಡಿಮೆ ಮಾಡಲು, ಮೆದುಳಿನ ಮೇಲೆ ಆಕ್ಸಿಡೇಟಿವ್ ಒತ್ತಡದ ಕಡಿಮೆ ಮಾಡಲು, ಆಲ್ಜೈಮರ್ ಮತ್ತು ಪಾರ್ಕಿನ್ಸನ್​ನಂತಹ ಮೆದುಳಿನ ಕಾಯಿಲೆಗಳ ಅಪಾಯವನ್ನು ಕಡಿಮೆಗೊಳಿಸಲು ಚಹಾ ಪರಿಣಾಮಕಾರಿ. ಹಾಗೆಯೇ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುವಲ್ಲಿ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು ಗ್ರೀನ್ ಟೀ ಸಹಾಯ ಮಾಡುತ್ತದೆ.

ಬ್ಲ್ಯಾಕ್ ಟೀಯಲ್ಲಿ ಅತಿ ಹೆಚ್ಚು ಕೆಫಿನ್ ಅಂಶವಿದೆ. ಇದು ಶ್ವಾಸಕೋಶವನ್ನು ಹಾನಿಯಾಗೊಳಗಾದಂತೆ ರಕ್ಷಿಸುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ. ಹಾಗೆಯೇ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಇದು ಕಾಫಿಗಿಂತ ಕಡಿಮೆ ಕೆಫಿನ್ ಅಂಶ ಹೊಂದಿರುತ್ತದೆ.

ಇದನ್ನು ಕುಡಿಯುವುದರಿಂದ ನಿಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕಿನ ವಿರುದ್ಧ ಹೋರಾಡಲು ಸಾಕಷ್ಟು ಸಹಾಯ ಮಾಡುತ್ತದೆ. ಚಹಾ ಕುಡಿಯುವುದರಿಂದ ಶೀತ ಮತ್ತು ಇನ್ನಿತರ ಸಾಮಾನ್ಯ ಸಮಸ್ಯೆಗಳು ದೂರವಾಗುತ್ತವೆ

ಲಕ್ಷಾಂತರ ಕುಟುಂಬಗಳು ಬದುಕುತ್ತಿರುವುದೇ ಚಹಾದಿಂದ ಲಕ್ಷಾಂತರ ಕುಟುಂಬಗಳು ಚಹಾ ನಂಬಿಕೊಂಡೇ ಜೀವನ ಸಾಗಿಸುತ್ತಿದ್ದಾರೆ. ಚಹಾ ಉದ್ಯಮವು ಕೆಲವು ಬಡ ದೇಶಗಳಿಗೆ ರಫ್ತು ಆದಾಯದ ಮುಖ್ಯ ಮೂಲವಾಗಿದೆ. ಹಾಗೆಯೇ ಅನೇಕರಿಗೆ ಉದ್ಯೋಗವನ್ನು ಒದಗಿಸುತ್ತದೆ. ಅಷ್ಟೇ ಅಲ್ಲ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಗ್ರಾಮೀಣಾಭಿವೃದ್ಧಿ, ಬಡತನ ನಿವಾರಣೆ ಮತ್ತು ಆಹಾರ ಸುರಕ್ಷತೆಯಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada