Art Of Yoga: ಉದಾನವಾಯು ಎಂದರೇನು? ಮಾನವನ ದೇಹಕ್ಕೆ ಇದರಿಂದಾಗುವ ಪ್ರಯೋಜನಗಳೇನು?

UdanaVayu:ಉದಾನವೆಂದರೆ ಮೇಲಕ್ಕೆ ಚಲಿಸುವ ಸ್ಥಿತಿ ಎಂದರ್ಥ, ಇದು ಗಂಟಲು ಹಾಗೂ ತಲೆಯನ್ನು ನಿಯಂತ್ರಿಸುತ್ತದೆ. ಧ್ವನಿ ಉಪಕರಣದ ಮೂಲಕ ಧ್ವನಿ ಉತ್ಪಾದನೆಯು ಉದಾನವಾಯುವಿನ ಕಾರ್ಯಭಾರವಾಗಿದೆ, ಉದಾ. ಮಾತಾಡುವುದು, ಹಾಡುವುದು, ನಗುವುದು ಮತ್ತು ಅಳುವುದು. ಹಾಗೆಯೇ ಸ್ನಾಯು, ಕಿವಿ, ಕಣ್ಣುಗಳು ಹೀಗೆ ಹಲವು ಇಂದ್ರಿಯಗಳನ್ನು ಕೂಡ ನಿಯಂತ್ರಿಸುತ್ತದೆ.

Art Of Yoga: ಉದಾನವಾಯು ಎಂದರೇನು? ಮಾನವನ ದೇಹಕ್ಕೆ ಇದರಿಂದಾಗುವ ಪ್ರಯೋಜನಗಳೇನು?
UdanaVayu
Follow us
TV9 Web
| Updated By: ನಯನಾ ರಾಜೀವ್

Updated on: May 21, 2022 | 3:33 PM

ಉದಾನವಾಯು

ಸ್ಥಳ: ಗಂಟಲು ಅಥವಾ ತಲೆ

ತತ್ವ:ಸ್ವಚ್ಛ ಆಕಾಶ

ಚಕ್ರ: ವಿಶುದ್ಧ, ಆಜ್ಞಾ

ಸಕ್ರಿಯಗೊಳಿಸುವುದು ಹೇಗೆ: ಉಜ್ಜಯಿ, ಭ್ರಮರಿ, ವಿಪರೀತ ಕರಣಿ

ಉದಾನವೆಂದರೆ ಮೇಲಕ್ಕೆ ಚಲಿಸುವ ಸ್ಥಿತಿ ಎಂದರ್ಥ, ಇದು ಗಂಟಲು ಹಾಗೂ ತಲೆಯನ್ನು ನಿಯಂತ್ರಿಸುತ್ತದೆ. ಧ್ವನಿ ಉಪಕರಣದ ಮೂಲಕ ಧ್ವನಿ ಉತ್ಪಾದನೆಯು ಉದಾನವಾಯುವಿನ ಕಾರ್ಯಭಾರವಾಗಿದೆ, ಉದಾ. ಮಾತಾಡುವುದು, ಹಾಡುವುದು, ನಗುವುದು ಮತ್ತು ಅಳುವುದು. ಹಾಗೆಯೇ ಸ್ನಾಯು, ಕಿವಿ, ಕಣ್ಣುಗಳು ಹೀಗೆ ಹಲವು ಇಂದ್ರಿಯಗಳನ್ನು ಕೂಡ ನಿಯಂತ್ರಿಸುತ್ತದೆ.

ಜೊತೆಗೆ ಇದು ಜೀವಿಯ ಉದ್ದೇಶಕ್ಕೆ ಅನುಗುಣವಾದ ಧ್ವನಿಗಳನ್ನು ಉತ್ಪಾದಿಸಲು ಅಗತ್ಯವಾದ ಜಾಗೃತ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಉದಾನವು ಉನ್ನತ ಕೇಂದ್ರಗಳಿಗೆ ದೇಹದ ಸಂಪೂರ್ಣ ನಿಯಂತ್ರಣವನ್ನು ನೀಡುತ್ತದೆ.

ಅಭಿವ್ಯಕ್ತಿಶೀಲ ವಾಯುವಾಗಿ, ಉದಾನವು ಗಂಟಲಿನ ಕೇಂದ್ರವನ್ನು ನಿಯಂತ್ರಿಸುತ್ತದೆ. ಸಂವಹನ ಮತ್ತು ಅಭಿವ್ಯಕ್ತಿಯು ನಿರ್ದಿಷ್ಟವಾಗಿ ಈ ವಾಯುದಿಂದ ಪ್ರಭಾವಿತವಾಗಿರುತ್ತದೆ. ಉದಾನವು ಸಮತೋಲಿತವಾದಾಗ, ನಾವು ಆತ್ಮವಿಶ್ವಾಸ, ದೃಢತೆ ಮತ್ತು ನಮ್ಮನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ.

ಮತ್ತಷ್ಟು ಓದಿ

ಉದಾನವು ಸಮತೋಲನ ಕಳೆದುಕೊಂಡಾಗ ಪರಿಣಾಮಕಾರಿಯಾಗಿ ಸಂವಹನ ಮಾಡಲು ನಮಗೆ ಕಷ್ಟವಾಗುತ್ತದೆ. ಪದಗಳ ನಷ್ಟ, ಅಥವಾ ಅನುಚಿತವಾದ ಮಾತು ನಮ್ಮ ಸಂಭಾಷಣೆಗಳನ್ನು ಹೊರಹಾಕುತ್ತದೆ. ಹಾಗೆಯೇ ದೇಹವು ಸಮತೋಲನ ಕಳೆದುಕೊಳ್ಳುತ್ತದೆ. ಉಸಿರಾಟದ ತೊಂದರೆಯುಂಟಾಗಬಹುದು.

ಒಂದೊಮ್ಮೆ ನೀವು ಪಾರ್ಕ್​ಗಳಿಗೆ ಹೋದರೆ ಅಲ್ಲಿ ಒಂದು ಹತ್ತಾರು ಮಂದಿಯನ್ನು ಗಮನಿಸಿದಾಗ ಕೆಲವೊಬ್ಬರು ಒಂದೇ ಕೈಗಳನ್ನು ಬೀಸಿ ವಾಕಿಂಗ್ ಮಾಡುತ್ತಿರುತ್ತಾರೆ,ಕೆಲವರು ಎರಡೂ ಕೈಗಳನ್ನು ಬೀಸುತ್ತಾ ನಡೆಯುತ್ತಿರುತ್ತಾರೆ, ಕೆಲವರು ಒಂದು ಕಡೆಗೆ ವಾಲಿರುತ್ತಾರೆ, ಒಂದು ಕಡೆ ಸ್ಟಿಫ್ ಆಗಿರುತ್ತಾರೆ, ದೇಹದ ಒಂದೇ ಕಡೆಗೆ ಹೆಚ್ಚು ಭಾರ ಹಾಕುತ್ತಿರುತ್ತಾರೆ.

ಈ ಪಂಚ ಮಹಾ ಪ್ರಾಣಗಳು ಯೋಗಾಭ್ಯಾಸದ ಆಧಾರವಾಗಿರುವ ಸೂಕ್ಷ್ಮ ಶಕ್ತಿಗಳನ್ನು ಬೆಂಬಲಿಸಲು ಎಲ್ಲವೂ ಒಟ್ಟಾಗಿ ಕೆಲಸ ಮಾಡುತ್ತವೆ. ಈ ಐದು ವಾಯುಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ಮೂಲಕ, ನಾವು ಯೋಗಾಭ್ಯಾಸದ ಅನುಭವವನ್ನು ಆಳವಾಗಿಸಲು ಸಾಧ್ಯವಾಗುತ್ತದೆ.

ಮತ್ತಷ್ಟು ಓದಿ

ಯೋಗವು ನಮ್ಮ ಕಾಲ್ಬೆರಳುಗಳನ್ನು ಸ್ಪರ್ಶಿಸುವುದು ಮತ್ತು ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುವುದಕ್ಕಿಂತಲೂ ಹೆಚ್ಚಿನದು ಎಂಬುದು ಸ್ಪಷ್ಟವಾಗುತ್ತದೆ. ಈ ಎಲ್ಲವನ್ನು ಒಳಗೊಳ್ಳುವ ಅಭ್ಯಾಸವು ಹಲವು ಹಂತಗಳಲ್ಲಿ ಅಸ್ತಿತ್ವದಲ್ಲಿದೆ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, ಸತ್ಯವೆನ್ನುವ ಯೋಗ ಕೇಂದ್ರವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ.

ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ. ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಚಕ್ರ ಹಾಗೂ ಯೋಗದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. astroyoga.co.in ಭೇಟಿ ನೀಡಿ, ಉಚಿತವಾಗಿ ನಿಮ್ಮ ಚಕ್ರಗಳ ಬಗ್ಗೆ ತಿಳಿದುಕೊಳ್ಳಿ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?