ಕಬಿನಿ ಜಲಾಶಯದಿಂದ ಹೊರ ಹರಿವಿನ ಪ್ರಮಾಣ ಹೆಚ್ಚಳ; ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಪುಣ್ಯ ಸ್ನಾನ, ಮುಡಿ ಸೇವೆಗೆ ತಾತ್ಕಾಲಿಕ ನಿರ್ಬಂಧ

| Updated By: sandhya thejappa

Updated on: Jul 24, 2021 | 12:59 PM

ಭಾರಿ ಮಳೆಗೆ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಿದ್ದು, ನಂಜನಗೂಡು ಜನರಿಗೆ ಪ್ರವಾಹದ ಆತಂಕ ಶುರುವಾಗಿದೆ. ಕಳೆದ ಬಾರಿ ತೋಪಿನ ಬೀದಿ, ಒಕ್ಕಲಗೇರಿ, ಹಳ್ಳದಕೇರಿ, ಗೌರಿಘಟ್ಟ ಬೀದಿ ಬಡಾವಣೆಗಳಿಗೆ ನೀರು ನುಗ್ಗಿತ್ತು.

ಕಬಿನಿ ಜಲಾಶಯದಿಂದ ಹೊರ ಹರಿವಿನ ಪ್ರಮಾಣ ಹೆಚ್ಚಳ; ಶ್ರೀಕಂಠೇಶ್ವರ ಸನ್ನಿಧಿಯಲ್ಲಿ ಪುಣ್ಯ ಸ್ನಾನ, ಮುಡಿ ಸೇವೆಗೆ ತಾತ್ಕಾಲಿಕ ನಿರ್ಬಂಧ
ಶ್ರೀಕಂಠೇಶ್ವರ ಸನ್ನಿಧಿಯ ಸ್ನಾನಘಟ್ಟ
Follow us on

ಮೈಸೂರು: ಕಬಿನಿ ಜಲಾಶಯದಲ್ಲಿ ಹೊರ ಹರಿವಿನ ಪ್ರಮಾಣ ಹೆಚ್ಚಳವಾದ ಹಿನ್ನೆಲೆ ಶ್ರೀಕಂಠೇಶ್ವರನ ದೇಗುಲದಲ್ಲಿ ಪುಣ್ಯ ಸ್ನಾನ ಮತ್ತು ಮುಡಿ ಸೇವೆ ಬಂದ್ ಮಾಡಲಾಗಿದೆ. ದೇವಸ್ಥಾನದ ಸ್ನಾನಘಟ್ಟದ ಮೆಟ್ಟಿಲುಗಳು ಮುಳುಗಡೆಯಾಗಿದ್ದು, ಪುಣ್ಯ ಸ್ನಾನ ನಿಷೇಧಿಸಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ. ದೇವರ ದರ್ಶನ, ಪೂಜೆ ಪುನಸ್ಕಾರಕ್ಕೆ ಎಂದಿನಂತೆ ಅವಕಾಶ ನೀಡಲಾಗಿದೆ. ಕಪಿಲಾ ನದಿ ದಡದ ನಿವಾಸಿಗಳು ಎಚ್ಚರದಿಂದಿರಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಭಾರಿ ಮಳೆಗೆ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಿದ್ದು, ನಂಜನಗೂಡು ಜನರಿಗೆ ಪ್ರವಾಹದ ಆತಂಕ ಶುರುವಾಗಿದೆ. ಕಳೆದ ಬಾರಿ ತೋಪಿನ ಬೀದಿ, ಒಕ್ಕಲಗೇರಿ, ಹಳ್ಳದಕೇರಿ, ಗೌರಿಘಟ್ಟ ಬೀದಿ ಬಡಾವಣೆಗಳಿಗೆ ನೀರು ನುಗ್ಗಿತ್ತು. ಹಾಗಾಗಿ ಕಪಿಲಾ ನದಿಯ ಅಂಚಿನಲ್ಲಿರುವ ಬಡಾವಣೆಗಳ ಜನರು ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ತಿಳಿಸಿದೆ.

ಕಬಿನಿ ಜಲಾಶಯ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಜಲಾಶಯದ ಇಂದಿನ ಒಳಹರಿವು 26,100 ಕ್ಯೂಸೆಕ್ಗೆ ಹೆಚ್ಚಳವಾಗಿದೆ. ಜಲಾಶಯದ ಹೊರಹರಿವು 30,000 ಕ್ಯೂಸೆಕ್ ಇದೆ. ಜಲಾಶಯ 84 ಅಡಿ ಗರಿಷ್ಠ ಸಾಮರ್ಥ್ಯದಿಂದ ಕೂಡಿದ್ದು, ಇಂದಿನ ನೀರಿನ ಮಟ್ಟ 80.40 ಅಡಿ ಇದೆ. ಮತ್ತಷ್ಟು ಹೊರ ಹರಿವು ಹೆಚ್ಚಾದರೆ ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಿದೆ.

ಇನ್ನು ಕೆಆರ್ ನಗರ ತಾಲೂಕಿನ ಧನುಷ್ಕೋಟಿ ಜಲಪಾತ ತುಂಬಿ ಹರಿಯುತ್ತಿದೆ. ರಾಜ್ಯದ ಪ್ರಮುಖ ಜಲಪಾತಗಳಲ್ಲಿ ಒಂದಾಗಿರುವ ಚುಂಚನಕಟ್ಟೆ ಜಲಪಾತ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೊರೊನಾ ಲಾಕ್ಡೌನ್ ಹಿನ್ನೆಲೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ವರ್ಷಕ್ಕೊಮ್ಮೆ ನಡೆಯುತ್ತಿದ್ದ ಜಲಪಾತೋತ್ಸವವು ರದ್ದಾಗಿತ್ತು. ಅದರೆ ಕೊರೊನಾ ತೆರವುಗೊಳಿಸಿದ ಕಾರಣ ಜಲಪಾತದತ್ತ ಪ್ರವಾಸಿಗರು ಆಗಮಿಸುತ್ತಿದ್ದಾರೆ.

ಧನುಷ್ಕೋಟಿ ಜಲಪಾತ

ಚುಂಚನಕಟ್ಟೆ ಜಲಪಾತ

ಇದನ್ನೂ ಓದಿ

ದಾವಣಗೆರೆ: ಡ್ಯಾಂನಿಂದ ಹರಿದು ಬರುತ್ತಿರುವ ನೀರಿನಲ್ಲಿ ಮೀನು ಹಿಡಿಯುವ ಹುಚ್ಚು ಸಾಹಸಕ್ಕೆ ಇಳಿದು ಕೊಚ್ಚಿ ಹೋಗುತ್ತಿದ್ದ ಯುವಕ; ಅಪಾಯದಿಂದ ಪಾರು

ಬೆಂಗಳೂರಿನಿಂದ ಜೋಗ ಜಲಪಾತ ವೀಕ್ಷಿಸಲು ಬರುವವರಿಗೆ ವಿಶೇಷ ಬಸ್​ ವ್ಯವಸ್ಥೆ ಕಲ್ಪಿಸಿದ ಕೆಎಸ್​ಆರ್​ಟಿಸಿ

(Punya snana and Head Tonsure restricted at srikanteshwara temple nanjangud due to rains)