ಮೈಸೂರು ಅರಮನೆ ಆವರಣ ಮತ್ತೆ ಧ್ವನಿ-ಬೆಳಕು ಹೊಂಬಣ್ಣದಲ್ಲಿ ಜಗಮಗ; ತುಂಬಿ ಹರಿಯುತಿವೆ ಚುಂಚನಕಟ್ಟೆ, ಧನುಷ್ಕೋಟಿ ಜಲಪಾತ

ಮೈಸೂರು ಅರಮನೆಯಲ್ಲಿ ಪ್ರತೀ ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ದೀಪಾಲಂಕಾರ ಕಾರ್ಯಕ್ರಮವಿರಲಿದೆ ರಾತ್ರಿ 7ರಿಂದ 8ರ ವರೆಗೆ ಮತ್ತೆ ಮೈಸೂರು ಅರಮನೆ ಜಗಮಗಿಸಲಿದೆ. ಇನ್ನುಳಿದ ದಿನಗಳಂದೂ ಸಹ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಇರುತ್ತದೆ. ಆದರೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7ರಿಂದ 8 ಹಾಗೂ ಶನಿವಾರ 7 ರಿಂದ 9.15ರ ವರಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತದೆ. 

ಮೈಸೂರು ಅರಮನೆ ಆವರಣ ಮತ್ತೆ ಧ್ವನಿ-ಬೆಳಕು ಹೊಂಬಣ್ಣದಲ್ಲಿ ಜಗಮಗ; ತುಂಬಿ ಹರಿಯುತಿವೆ ಚುಂಚನಕಟ್ಟೆ, ಧನುಷ್ಕೋಟಿ ಜಲಪಾತ
ಮೈಸೂರು ಅರಮನೆ ಆವರಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 24, 2021 | 11:38 AM

ಮೈಸೂರು: ಐತಿಹಾಸಿಕ ಮೈಸೂರು ಅರಮನೆಗೆ ನಾಳೆಯಿಂದ ದೀಪಾಲಂಕಾರ ಮರುಕಳಿಸಲಿದೆ. ಸಂಜೆಯ ವೇಳೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮವು ಕೊರೊನಾ ಹಿನ್ನೆಲೆ ಸ್ಥಗಿತವಾಗಿತ್ತು. ಇದೀಗ ನಾಳೆಯಿಂದ ಮತ್ತೆ ಕಾರ್ಯಕ್ರಮ ಪುನಾರಂಭವಾಗಲಿದೆ.

ಪ್ರವಾಸೋದ್ಯಮ ಹಿತದೃಷ್ಟಿಯಿಂದ ದೀಪಾಲಂಕಾರ ( sound and light program) ಪುನರಾರಂಭವಾಗಿದೆ. ನಾಳೆಯಿಂದ ಮೈಸೂರು ಅರಮನೆ ದೀಪಾಲಂಕಾರ ಪುನರಾರಂಭವಾಗಲಿದ್ದು, ಹೊಂಬಣ್ಣದಲ್ಲಿ ಜಗಮಗಿಸಲಿದೆ.  ಕೊರೊನಾ ನಿಯಂತ್ರಣ ಕ್ರಮವಾಗಿ ಜಾರಿಯಲ್ಲಿದ್ದ ಲಾಕ್​ಡೌನ್​ ಈಗ ಸಂಪೂರ್ಣವಾಗಿ ತೆಗೆದುಹಾಕಲಾಗಿದ್ದು, ಅನ್​ಲಾಕ್‌ ಬಳಿಕ ಅರಮನೆ ಆಡಳಿತ ಮಂಡಳಿ (Mysuru Palace Board) ಮತ್ತೆ ಆರಂಭ ಮಾಡುತ್ತಿದೆ.

ಪ್ರತೀ ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ದೀಪಾಲಂಕಾರ:

ಮೈಸೂರು ಅರಮನೆಯಲ್ಲಿ ಪ್ರತೀ ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ದೀಪಾಲಂಕಾರ ಕಾರ್ಯಕ್ರಮವಿರಲಿದೆ (mysore palace). ರಾತ್ರಿ 7ರಿಂದ 8ರ ವರೆಗೆ ಮತ್ತೆ ಮೈಸೂರು ಅರಮನೆ ಜಗಮಗಿಸಲಿದೆ. ಇನ್ನುಳಿದ ದಿನಗಳಂದೂ ಸಹ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಇರುತ್ತದೆ. ಆದರೆ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7ರಿಂದ 8 ಹಾಗೂ ಶನಿವಾರ 7 ರಿಂದ 9.15ರ ವರಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯುತ್ತದೆ.

ಚುಂಚನಕಟ್ಟೆ ಜಲಪಾತ, ಧನುಷ್ಕೋಟಿ ಜಲಪಾತ ತುಂಬಿ ಹರಿಯುತ್ತಿವೆ

ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾಗಿದ್ದು, ಕೆ ಆರ್ ನಗರ ತಾಲ್ಲೂಕಿನ ಚುಂಚನಕಟ್ಟೆ ಜಲಪಾತ, ಧನುಷ್ಕೋಟಿ ಜಲಪಾತ ತುಂಬಿ ಹರಿಯುತ್ತಿವೆ. ರಾಜ್ಯದ ಪ್ರಮುಖ ಜಲಪಾತಗಳಲ್ಲಿ ಒಂದಾಗಿರುವ ಚುಂಚನಕಟ್ಟೆ ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಹಿನ್ನೆಲೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿತ್ತು. ವರ್ಷಕ್ಕೊಮ್ಮೆ ನಡೆಯುತ್ತಿದ್ದ ಜಲಪಾತೋತ್ಸವವೂ ಸಹ ರದ್ದಾಗಿತ್ತು.

Mysuru Palace: ನಾಳೆಯಿಂದಲೇ ಮೈಸೂರು ಅರಮನೆ ಕಣ್ತುಂಬಿಕೊಳ್ಳಲು ಪ್ರವಾಸಿಗರಿಗೆ ಅವಕಾಶ (Historical mysore palace to resume with sound and light program after unlock Mysuru Palace Board)

Published On - 9:12 am, Sat, 24 July 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್