ಮೈಸೂರು: ಹೆಣ್ಣು ಮಕ್ಕಳು ಅನ್ಯಜಾತಿಯವರನ್ನ ಮದುವೆಯಾದ ಕಾರಣಕ್ಕೆ ತಾಯಿಯ ಅಂತ್ಯಕ್ರಿಯೆ ಅರ್ಧಕ್ಕೆ ಬಿಟ್ಟ ಸಂಬಂಧಿಕರು

| Updated By: ವಿವೇಕ ಬಿರಾದಾರ

Updated on: Sep 03, 2023 | 10:08 AM

ಹೆಣ್ಣು ಮಕ್ಕಳು ಪ್ರೀತಿಸಿ ಅನ್ಯಜಾತಿಯವರನ್ನು ಮದುವೆಯಾಗಿದ್ದಕ್ಕೆ ತಾಯಿಯ ಅಂತಿಮ ದರ್ಶನ ಪಡೆಯದಂತೆ ಮತ್ತು ಅಂತ್ಯಕ್ರಿಯೆ ನೆರವೇರಿಸದಂತೆ ಸಂಬಂಧಿಕರು ಮತ್ತು ಸ್ವಜಾತಿ ಮುಖಂಡರು ತಾಕೀತು ಮಾಡಿದ್ದಲ್ಲದೇ, ಅಂತ್ರಕ್ರಿಯೆ ಅರ್ಧಕ್ಕೆ ಬಿಟ್ಟು ಬಂದ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ನಾಗನಹಳ್ಳಿಯಲ್ಲಿ ನಡೆದಿದೆ.

ಮೈಸೂರು: ಹೆಣ್ಣು ಮಕ್ಕಳು ಅನ್ಯಜಾತಿಯವರನ್ನ ಮದುವೆಯಾದ ಕಾರಣಕ್ಕೆ ತಾಯಿಯ ಅಂತ್ಯಕ್ರಿಯೆ ಅರ್ಧಕ್ಕೆ ಬಿಟ್ಟ ಸಂಬಂಧಿಕರು
ಮೃತ ಕಳಸಮ್ಮ (ಎಡಚಿತ್ರ) ಅಂತ್ಯಕ್ರಿಯೆ ನೆರವೇರಿಸಿದ ಮಕ್ಕಳು (ಬಲಚಿತ್ರ)
Follow us on

ಮೈಸೂರು: ಈ 21ನೇ ಶತಮಾನದಲ್ಲೂ ಜಾತಿ ವ್ಯವಸ್ತೆ ಇನ್ನೂ ಜಾಗೃತವಾಗಿದೆ. ಜಾತಿಗಾಗಿ (Cast) ಬಡಿದಾಟ, ಹೊಡೆದಾಟ ಮುಂದುವೆರದಿದೆ. ನಾ ಮೇಲು ನೀನು ಕೀಳು ಎಂಬ ತಾರತಮ್ಯ ಜೀವಂತವಾಗಿದ್ದು, ಅದೆಷ್ಟೋ ಜನರು ಈ ಶೋಷಣೆಯಲ್ಲಿ ಸಿಲುಕಿ ನಲಗಿ ಹೋಗಿದ್ದಾರೆ. ಈ ಪ್ರಕರಣದಲ್ಲೂ ಕೂಡ ಜಾತಿ ಎಂಬ ವಿಷ ಮತ್ತನ್ನು ತಲೆಗೆ ಏರಿಸಿಕೊಂಡು ಮಾನವೀಯತೆಯನ್ನೇ ಮರೆತಿದ್ದಾರೆ. ಹೌದು ಆಕೆಯ ಹೆಣ್ಣು ಮಕ್ಕಳು ಪ್ರೀತಿಸಿ ಅನ್ಯಜಾತಿಯವರನ್ನು (Intercaste) ಮದುವೆಯಾಗಿದ್ದಾರೆ ಎಂಬ ಒಂದೇ ಕಾರಣಕ್ಕೆ ಸಂಬಂಧಿಕರು ಮಹಿಳೆಯೊಬ್ಬಳ ಅಂತ್ಯಕ್ರಿಯೆ (Funeral) ನಡೆಸದಿರುವ ಅಮಾನವೀಯ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ನಾಗನಹಳ್ಳಿಯಲ್ಲಿ ನಡೆದಿದೆ.

ಮೃತ ಕಳಸಮ್ಮರ ಇಬ್ಬರು ಹೆಣ್ಣುಮಕ್ಕಳು ಪ್ರೀತಿಸಿ ಮದುವೆಯಾಗಿದ್ದರು. ಇದೇ ಕಾರಣಕ್ಕೆ ತಾಯಿಯ ಅಂತಿಮ ದರ್ಶನ ಪಡೆಯದಂತೆ ಮತ್ತು ಅಂತ್ಯಕ್ರಿಯೆ ನಡೆಸದಂತೆ ಈ ಹೆಣ್ಣುಮಕ್ಕಳಿಗೆ ಸಂಬಂಧಿಕರು ಮತ್ತು ಸ್ವಜಾತಿ ಮುಖಂಡರು ತಾಕೀತು ಮಾಡಿದ್ದರು. ಆದರೂ ಕೂಡ ಮಕ್ಕಳು ತಾಯಿಯ ಅಂತ್ಯಕ್ರಿಯೆ ನಡೆಸಲು ಮುಂದಾದಾಗ ಸಂಬಂಧಿಕರು ಅಂತ್ಯಸಂಸ್ಕಾರ ಪ್ರಕ್ರಿಯೆಯನ್ನು ಅರ್ಧಕ್ಕೆ ಬಿಟ್ಟು ಬಂದಿದ್ದಾರೆ. ಕೊನೆಗೆ ಗ್ರಾಮಸ್ಥರ ಸಹಾಯದಿಂದ ಮಕ್ಕಳು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಮರ್ಯಾದಾ ಹತ್ಯೆ; ಅನ್ಯಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ಹೆತ್ತವರು

ಅಲ್ಲದೇ 11ನೇ ದಿನದ ಕಾರ್ಯಕ್ಕೂ ಸ್ವಜಾತಿಯವರು ಭಾಗಿಯಾಗದಂತೆ ಸಂಬಂಧಿಕರು ಹಾಗೂ ಸ್ವಜಾತಿಯ ಮುಖಂಡರು ಕಟ್ಟಪ್ಟಣೆ ಹಾಕಿದ್ದರು. ಈ‌ ಬಗ್ಗೆ ಹೆಣ್ಣುಮಕ್ಕಳು ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ