AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ: ಜಂಬೂ ಸವಾರಿಯಲ್ಲಿ ಭಾಗಿಯಾಗುವ ಆನೆಗಳ ವಯಸ್ಸು, ತೂಕ, ಎತ್ತರ ವಿವರಗಳು ಇಲ್ಲಿದೆ

ಐತಿಹಾಸಿಕ ಮೈಸೂರು ದಸರಾ ಉತ್ಸವಕ್ಕೆ ಅರಮನೆ ಸಜ್ಜಾಗುತ್ತಿದೆ. ಜಂಬೂ ಸವಾರಿಯಲ್ಲಿ ಭಾಗಿಯಾಗಲು ಮೊದಲ ಹಂತವಾಗಿ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯು ಸೇರಿದಂತೆ ಅನೇಕ ಆನೆಗಳು ಮೈಸೂರಿಗೆ ಆಗಮಿಸಿವೆ. ಹಾಗಿದ್ದರೆ ಯಾವೆಲ್ಲ ಆನೆಗಳು ಈ ಬಾರಿ ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ? ಅವುಗಳ ವಯಸ್ಸು, ತೂಕ ಇತ್ಯಾದಿ ಮಾಹಿತಿ ಇಲ್ಲಿದೆ.

ಮೈಸೂರು ದಸರಾ: ಜಂಬೂ ಸವಾರಿಯಲ್ಲಿ ಭಾಗಿಯಾಗುವ ಆನೆಗಳ ವಯಸ್ಸು, ತೂಕ, ಎತ್ತರ ವಿವರಗಳು ಇಲ್ಲಿದೆ
ಆನೆ ಅಭಿಮನ್ಯು ನೇತೃತ್ವದಲ್ಲಿ ಸಾಗಲಿರುವ ಮೈಸೂರು ಜಂಬೂ ಸವಾರಿ
ರಾಮ್​, ಮೈಸೂರು
| Updated By: Rakesh Nayak Manchi|

Updated on:Sep 02, 2023 | 9:54 AM

Share

ಮೈಸೂರು, ಸೆ.2: ಐತಿಹಾಸಿಕ ಮೈಸೂರು ದಸರಾ (Mysuru Dasara 2023) ಉತ್ಸವಕ್ಕೆ ಅರಮನೆ ಸಜ್ಜಾಗುತ್ತಿದೆ. ಜಂಬೂ ಸವಾರಿಯಲ್ಲಿ ಭಾಗಿಯಾಗಲು ಮೊದಲ ಹಂತವಾಗಿ ಅಂಬಾರಿ ಹೊತ್ತು ಸಾಗಲಿರುವ ಅಭಿಮನ್ಯು ಸೇರಿದಂತೆ ಅನೇಕ ಆನೆಗಳು ಮೈಸೂರಿಗೆ ಆಗಮಿಸಿವೆ. ಹಾಗಿದ್ದರೆ ಯಾವೆಲ್ಲ ಆನೆಗಳು ಈ ಬಾರಿ ಜಂಬೂ ಸವಾರಿಯಲ್ಲಿ ಭಾಗಿಯಾಗಲಿವೆ? ಅವುಗಳ ವಯಸ್ಸು, ತೂಕ ಇತ್ಯಾದಿ ಮಾಹಿತಿ ಇಲ್ಲಿದೆ.

ಪ್ರತಿ ಬಾರಿಯಂತೆ ಈ ಬಾರಿಯೂ ದಸರಾ ಮಹೋತ್ಸವಕ್ಕೆ 14 ಆನೆಗಳು ಆಗಮಿಸಲಿವೆ. ನೆನ್ನೆಯಷ್ಟೇ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳ ತಂಡಕ್ಕೆ ಸಂಪ್ರದಾಯಿಕ ಪೂಜೆ ನೆರವೇರಿಸಲಾಗಿದ್ದು, ಮೈಸೂರಿನ ಅರಣ್ಯ ಭವನದಲ್ಲಿ ಆನೆಗಳನ್ನು ನೋಡಿಕೊಳ್ಳಲಾಗುತ್ತಿದೆ.

ದಸರಾ ಜಂಬೂಸವಾರಿಯಲ್ಲಿ ಭಾಗಿಯಾಗಲಿರುವ ಆನೆಗಳ ವಿವರಗಳು

  • ಅಭಿಮನ್ಯು 57ವರ್ಷ, ಮತ್ತಿಗೋಡು ಆನೆ ಶಿಬಿರ, 274ಮೀ ಎತ್ತರ, 4700ರಿಂದ 5000 ಕೆ.ಜಿ.
  • ವಿಜಯ 63 ವರ್ಷ, ದುಬಾರೆ ಆನೆ ಶಿಬಿರ, 244ಮೀ ಎತ್ತರ, 3250 ರಿಂದ 3500 ಕೆ.ಜಿ.
  • ವರಲಕ್ಷ್ಮಿ 67 ವರ್ಷ, ಭೀಮನಕಟ್ಟೆ ಆನೆ ಶಿಬಿರ, 236ಮೀ ಎತ್ತರ, 3300ರಿಂದ 3500 ಕೆ.ಜಿ.
  • ಅರ್ಜುನ 65 ವರ್ಷ, ಬಳ್ಳೆ ಆನೆ ಶಿಬಿರ, 288ಮೀ ಎತ್ತರ, 5800 ರಿಂದ 6000 ಕೆ.ಜಿ.
  • ಧನಂಜಯ 43 ವರ್ಷ, ದುಬಾರೆ ಆನೆ ಶಿಬಿರ, 280ಮೀ ಎತ್ತರ, 4000 ರಿಂದ 4200 ಕೆ.ಜಿ.
  • ಮಹೇಂದ್ರ 40 ವರ್ಷ, ಮತ್ತಿಗೋಡು ಆನೆ ಶಿಬಿರ, 275ಮೀ ಎತ್ತರ, 3800ರಿಂದ 4000 ಕೆ.ಜಿ.

ಇದನ್ನೂ ಓದಿ: ಹಾಸನ: ಚಿಕಿತ್ಸೆ ನೀಡಲು ಸೆರೆ ಹಿಡಿಯುತ್ತಿದ್ದಾಗ ಆನೆ ದಾಳಿ, ಮಲೆನಾಡ ಶಾರ್ಪ್ ಶೂಟರ್ ಸಾವು

  • ಭೀಮ 23ವರ್ಷ, ಮತ್ತಿಗೋಡು ಆನೆ ಶಿಬಿರ, 285ಮೀ ಎತ್ತರ, 3800 ರಿಂದ 4000 ಕೆ.ಜಿ
  • ಗೋಪಿ 41ವರ್ಷ, ದುಬಾರೆ ಆನೆ ಶಿಬಿರ 286ಮೀ ಎತ್ತರ, 3700 ರಿಂದ 3800 ಕೆ.ಜಿ.
  • ಪ್ರಶಾಂತ್ 50 ವರ್ಷ, ದುಬಾರೆ ಆನೆ ಶಿಬಿರ 300 ಮೀ ಎತ್ತರ, 4000 ರಿಂದ 4200 ಕೆ.ಜಿ.
  • ಸುಗ್ರೀವ 41 ವರ್ಷ, ದುಬಾರೆ ಆನೆ ಶಿಬಿರ, 277ಮೀ ಎತ್ತರ, 4000 ರಿಂದ 4100 ಕೆ.ಜಿ.
  • ಕಂಜನ್ 24 ವರ್ಷ, ದುಬಾರೆ ಆನೆ ಶಿಬಿರ, 262ಮೀ ಎತ್ತರ, 3700 ರಿಂದ 3900 ಕೆ.ಜಿ.
  • ರೋಹಿತ್ 21 ವರ್ಷ, ರಾಮಾಪುರ ಆನೆ ಶಿಬಿರ, 270ಮೀ ಎತ್ತರ, 2900 ರಿಂದ 3000 ಕೆ.ಜಿ.
  • ಲಕ್ಷ್ಮಿ 52ವರ್ಷ, ದೊಡ್ಡಹರವೆ ಆನೆ ಶಿಬಿರ, 252ಮೀ ಎತ್ತರ, 3000 ರಿಂದ 3200 ಕೆ.ಜಿ.
  • ಹಿರಣ್ಯ 46 ವರ್ಷ, ರಾಮಾಪುರ ಆನೆ ಶಿಬಿರ, 250ಮೀ ಎತ್ತರ, 3000 ರಿಂದ 3200 ಕೆ.ಜಿ

ಅರ್ಜುನ ಆನೆ ಈ ಬಾರಿಯ ದಸರಾ ಮಹೋತ್ಸವದ ಹಿರಿಯ ವಯಸ್ಸಿನ ಆನೆಯಾಗಿದೆ. ರೋಹಿತ್ ಅತ್ಯಂತ್ಯ ಕಿರಿಯ ವಯಸ್ಸಿನ ಆನೆ ಹಾಗೂ ಮೊದಲ ಬಾರಿಗೆ ದಸರಾದಲ್ಲಿ ಭಾಗಿಯಾಗುತ್ತಿದ್ದಾನೆ. ಕಂಜನ್, ಲಕ್ಷ್ಮಿ, ಹಿರಣ್ಯ ಆನೆಗಳಿಗೂ ಇದು ಮೊದಲ ದಸರಾ ಮಹೋತ್ಸವವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 am, Sat, 2 September 23

ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್