ಕಿಂಗ್​ಫಿಶರ್​ ಬಿಯರ್​​ನಲ್ಲಿ ಅಪಾಯಕಾರಿ ಅಂಶ, ನಂಜನಗೂಡಿನಲ್ಲಿ 25 ಕೋಟಿ ರೂ. ಮೌಲ್ಯದ ಬಿಯರ್ ಜಪ್ತಿ

| Updated By: ಗಣಪತಿ ಶರ್ಮ

Updated on: Aug 16, 2023 | 5:58 PM

ಕಿಂಗ್​ಫಿಶರ್​ ಬಿಯರ್​ನಲ್ಲಿ ಅಪಾಯಕಾರಿ ಅಂಶ ಸೆಡಿಮೆಂಟ್ ಪತ್ತೆಯಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ಘಟಕದಲ್ಲಿ‌ ತಯಾರಿಸಲಾಗಿದ್ದ ಬಿಯರ್​ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಈ ಹಿನ್ನೆಯಲ್ಲಿ 5 ಕೋಟಿ ರೂ. ಮೌಲ್ಯದ ಕಿಂಗ್​ಫಿಶರ್ ಬಿಯರ್​ ಜಪ್ತಿ ಮಾಡಲಾಗಿದೆ. ಆದರೆ, ಬಿಯರ್​ನಲ್ಲಿ ಅಪಾಯಕಾರಿ ಅಂಶ ಇಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಕಿಂಗ್​ಫಿಶರ್​ ಬಿಯರ್​​ನಲ್ಲಿ ಅಪಾಯಕಾರಿ ಅಂಶ, ನಂಜನಗೂಡಿನಲ್ಲಿ 25 ಕೋಟಿ ರೂ. ಮೌಲ್ಯದ ಬಿಯರ್ ಜಪ್ತಿ
ಕಿಂಗ್​ಫಿಶರ್ ಬಿಯರ್
Follow us on

ಬೆಂಗಳೂರು, (ಆಗಸ್ಟ್ 16): ಎಣ್ಣೆ ಹೊಡೆಯಲ್ಲ. ಬರೀ ಬಿಯರ್(beer)​​ ಮಾತ್ರ ಕುಡಿಯುತ್ತೇನೆ. ಬಿಯರ್​ ಆರೋಗ್ಯ ಒಳ್ಳೆಯದು ಎಂದು ಬಿಯರ್​ ಮೆಂಟೇನ್​ ಮಾಡುತ್ತೇನೆ ಎನ್ನುವವರು ಇದ್ದಾರೆ. ಅಲ್ಲದೇ ಬಿಯರ್ ಉತ್ತಮ ಪ್ರಯೋಜಕಾರಿ ಅಂಶಗಳನ್ನು ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದು ಉಂಟು. ಆದ್ರೆ, ಇದೀಗ ಮೈಸೂರಿನ ನಂಜನಗೂಡಿನಲ್ಲಿ ತಯಾರಾಗುವ ಕಿಂಗ್​ಫಿಶರ್​ ಸ್ಟ್ರಾಂಗ್​​  ಬಿಯರ್​​ನಲ್ಲಿ(kingfisher beer) ಅಪಯಕಾರಿ ಅಂಶ ಪತ್ತೆಯಾಗಿದೆ. ಹೌದು…ಕಿಂಗ್​ಫಿಶರ್​ ಬಿಯರ್​ನಲ್ಲಿ ಅಪಾಯಕಾರಿ ಅಂಶ ಸೆಡಿಮೆಂಟ್ ಪತ್ತೆಯಾಗಿದೆ. ಹೀಗಾಗಿ ನಂಜನಗೂಡಿನಿಂದ ಸರಬರಾಜು ಆಗುವುದನ್ನು ಅಬಕಾರಿ ಅಧಿಕಾರಿಗಳು ತಡೆಹಿಡಿದಿದ್ದಾರೆ.

ಕಿಂಗ್​ಫಿಶರ್​ ಬಿಯರ್​ನಲ್ಲಿ ಅಪಾಯಕಾರಿ ಅಂಶ ಸೆಡಿಮೆಂಟ್ ಪತ್ತೆಯಾಗಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ಘಟಕದಲ್ಲಿ‌ ತಯಾರಿಸಲಾಗಿದ್ದ ಬಿಯರ್​ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಈ ಹಿನ್ನೆಯಲ್ಲಿ 5 ಕೋಟಿ ರೂ. ಮೌಲ್ಯದ ಕಿಂಗ್​ಫಿಶರ್ ಬಿಯರ್​ ಜಪ್ತಿ ಮಾಡಲಾಗಿದೆ. ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್, ನಂಜನಗೂಡಿನ ಘಟಕದಲ್ಲಿ‌ ತಯಾರಿಸಲಾಗಿದ್ದ ಕಿಂಗ್​ಫಿಶರ್​ ಸ್ಟ್ರಾಂಗ್​ನಲ್ಲಿ ಸೆಡಿಮೆಂಟ್ ಅಂಶ ಪತ್ತೆಯಾಗಿದೆ. ಹೀಗಾಗಿ ಒಟ್ಟು‌ 78,678 ಬಿಯರ್ ಬಾಕ್ಸ್​ಗಳನ್ನು ತಡೆಹಿಡಿಯಲಾಗಿದೆ. ಗುಣಮಟ್ಟದ ಬಿಯರ್ ತಯಾರಿಸದ ಹಿನ್ನೆಲೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ರಿಟೈಲ್​ನಲ್ಲೂ ಸೇಲ್ ಆಗದಂತೆ ತಡೆಹಿಡಿಯಲಾಗಿದೆ. ಮನುಷ್ಯರು ಕುಡಿಯಲು ಯೋಗ್ಯವಲ್ಲ ಎಂದು ಇನ್​ಹೌಸ್ ಕೆಮಿಸ್ಟ್ ವರದಿ ನೀಡಿದೆ. ಈ ಆಧರಿಸಿ ಕ್ರಮ ಕಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: International Beer Day : ಬಿಯರ್ ದಿನದ ಆಚರಣೆ ಯಾಕೆ? ಬಿಯರ್​​ನಿಂದ ಆಗುವ ಅನುಕೂಲ, ಅನಾನುಕೂಲ ಇಲ್ಲಿದೆ

ಆರೋಪ ನಿರಾಕರಿಸಿದ ಕಿಂಗ್​ಫಿಶರ್​

ಜುಲೈ 15ರಂದು ನಂಜನಗೂಡಿನಲ್ಲಿ ಕೆಲವೇ ಕೆಲವು ಬಿಯರ್​ ಬಾಟಲ್​ಗಳಲ್ಲಿ ಸಣ್ಣ ಪ್ರಮಾಣದ ಮಬ್ಬು ಕಾಣಿಸಿಕೊಂಡಿತ್ತಷ್ಟೇ. ಇದರಿಂದ ಆರೋಗ್ಯಕ್ಕೆ ಅಪಾಯವಿಲ್ಲ. ನಾವು ಅಧಿಕಾರಿಗಳೊಂದಿಗೆ ಸಹಕರಿಸುವ ಮೂಲಕ, ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ಪಾರದರ್ಶಕತೆ ಮತ್ತು ಸಹಕಾರಕ್ಕೆ ಆದ್ಯತೆ ನೀಡುವ ಮೂಲಕ ಸಮಸ್ಯೆಯನ್ನು ಪರಿಹರಿಸುತ್ತಿದ್ದೇವೆ. ನಮ್ಮ ಎಲ್ಲಾ ಉತ್ಪನ್ನಗಳು ನಿಗದಿತ ನಿಯಂತ್ರಕ ಮಾರ್ಗಸೂಚಿಗಳಿಗೆ ಬದ್ಧವಾಗಿರುತ್ತವೆ ಮತ್ತು ಉತ್ತಮ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತವೆ ಎಂದು ಯುನೈಟೆಡ್ ಬ್ರಿವರೀಸ್ ಲಿಮಿಟೆಡ್‌ನ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:36 pm, Wed, 16 August 23