International Beer Day : ಬಿಯರ್ ದಿನದ ಆಚರಣೆ ಯಾಕೆ? ಬಿಯರ್​​ನಿಂದ ಆಗುವ ಅನುಕೂಲ, ಅನಾನುಕೂಲ ಇಲ್ಲಿದೆ

ದುಃಖದ ಸಂಗತಿಯಾಗಿರಲಿ ಅಥವಾ ಸಂತೋಷದ ಕ್ಷಣಗಳಾಗಿರಲಿ ಈ ಸಂದರ್ಭದಲ್ಲಿ ಅನೇಕರಿಗೆ ನೆನಪಾಗುವುದು ಬಿಯರ್. ಇದೇ ಕಾರಣಕ್ಕೆ ಚಹಾ ಮತ್ತು ಕಾಫಿಯ ನಂತರದ ಬಿಯರ್ ಪ್ರಪಂಚದ ಮೂರನೇ ಜನಪ್ರಿಯ ಪಾನೀಯವೆಂದು ಪರಿಗಣಿಸಲಾಗಿದೆ. ಅನೇಕ ಜನರ ನೆಚ್ಚಿನ ಪಾನೀಯವಾಗಿರುವ ಬಿಯರ್​​ನ ಅಂತರಾಷ್ಟ್ರೀಯ ದಿನವಿಂದು. ಈ ದಿನವನ್ನು ಏಕೆ ಆಚರಿಸಲಾಗುತ್ತದೆ ಮತ್ತು ಬಿಯರ್ ಕುರಿತ ಇನ್ನಷ್ಟು ಸಂಗತಿಗಳನ್ನು ತಿಳಿಯಿರಿ

International Beer Day : ಬಿಯರ್ ದಿನದ ಆಚರಣೆ ಯಾಕೆ? ಬಿಯರ್​​ನಿಂದ ಆಗುವ ಅನುಕೂಲ, ಅನಾನುಕೂಲ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 04, 2023 | 11:04 AM

ಬಿಯರ್ ಜನಪ್ರಿಯ ಆಲ್ಕೋಹಾಲ್​​​ಯುಕ್ತ ಪಾನೀಯವಾಗಿದೆ. ಇಂದಿನ ಯುವಜನತೆ ಬಿಯರ್ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಯಾವುದೇ ಪಾರ್ಟಿಗಳಾಗಿರಲಿ ಬಿಯರ್ ಇಲ್ಲದೆ ಅದು ಅಪೂರ್ಣವಾಗಿರುತ್ತದೆ. ಇದರಲ್ಲಿ ಸೀಮಿತ ಪ್ರಮಾಣದ ಆಲ್ಕೋಹಾಲ್ ಅಂಶ ಇರುವುದರಿಂದ ಬಿಯರ್​​ನ್ನು ಇತರ ಆಲ್ಕೋಹಾಲ್ ಪಾನೀಯಗಳಿಗಿಂತ ಕಡಿಮೆ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಇಂದು ಪ್ರಪಂಚದ ಎಲ್ಲಾ ಬಿಯರ್ ಪ್ರಿಯರಿಗೆ ಸಂಭ್ರಮದ ದಿನವಾಗಿದೆ. ಏಕೆಂದರೆ ಇಂದು ಅಂದರೆ ಆಗಸ್ಟ್ 4 ರಂದು ಅಂತರಾಷ್ಟ್ರೀಯ ಬಿಯರ್ ದಿನವನ್ನು (International Beer Day) ಆಚರಿಸಲಾಗುತ್ತಿದೆ. ಬಿಯರ್ ದಿನವನ್ನು ಏಕೆ ಆಚರಿಸಲಾಗುತ್ತದೆ, ಅದು ಹೇಗೆ ಪ್ರಾರಂಭವಾಯಿತು ಎಂಬ ಕುತೂಹಲದ ಸಂಗತಿಗಳನ್ನು ತಿಳಿಯಿರಿ.

ಬಿಯರ್ ದಿನದ ಆಚರಣೆ ಹೇಗೆ ಪ್ರಾರಂಭವಾಯಿತು?

ಅಮೇರಿಕಾದ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್​​​ನ ಜೆಸಿ ಅವ್ಶಲೋವ್ನ್ ಎಂಬ ವ್ಯಕ್ತಿ ಬಿಯರ್ ದಿನದ ಆಚರಣೆಯ ಹುಟ್ಟಿಗೆ ಕಾರಣ. ಅಮೇರಿಕಾದಲ್ಲಿ ಸ್ಥಳೀಯ ಕಾರ್ಯಕ್ರಮವಾಗಿ ಬಿಯರ್ ದಿನ ಹುಟ್ಟಿಕೊಂಡಿತು. ಮೊದಲು ಈ ಕಾರ್ಯಕ್ರಮವನ್ನು ಸ್ಥಳೀಯ ಮಟ್ಟದಲ್ಲಿ ಮಾತ್ರ ಆಚರಿಸಲಾಗುತ್ತಿತು. ಕ್ರಮೇಣ ಅದರ ಮನ್ನಣೆ ಹೆಚ್ಚಾಯಿತು. ಮತ್ತು ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲ್ಪಟ್ಟಿತು. 2007 ರಿಂದ 2012 ರ ವರೆಗೆ ಈ ದಿನವನ್ನು ಆಗಸ್ಟ್ 5 ರಂದು ಆಚರಿಸಲಾಯಿತು. 2012 ರ ನಂತರ, ಆಗಸ್ಟ್ ತಿಂಗಳ ಮೊದಲ ಶುಕ್ರವಾರದಂದು ಬಿಯರ್ ದಿನವನ್ನು ಆಚರಿಸಲು ನಿರ್ಧರಿಸಲಾಯಿತು.

ಅಂತರಾಷ್ಟ್ರೀಯ ಬಿಯರ್ ದಿನವನ್ನು ಹೇಗೆ ಆಚರಿಸಲಾಗುತ್ತದೆ?

ಪಾಶ್ಚಿಮಾತ್ಯ ದೇಶಗಳಲ್ಲಿ ಬಿಯರ್ ದಿನವನ್ನು ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಜನರು ಪಬ್​​​ಗಳಿಗೆ ಹೋಗುವ ಮೂಲಕ ಮತ್ತು ಸ್ನೇಹಿತರು, ಕುಟುಂಬ ಸದಸ್ಯರೊಂದಿಗೆ ಬಿಯರ್ ಕುಡಿಯುವ ಮೂಲಕ ಅಥವಾ ಮನೆಯಲ್ಲಿಯೇ ಪಾರ್ಟಿ ಮಾಡುವ ಮೂಲಕ ಬಿಯರ್ ದಿನವನ್ನು ಆಚರಿಸುತ್ತಾರೆ.

ಬಿಯರ್​​ನ ಪ್ರಯೋಜನಗಳು

ಹೆಲ್ತ್ ಲೈನ್​​​ನ ವರದಿಯ ಪ್ರಕಾರ, 355 ಮಿಲಿ ಕ್ಯಾನ್ ಬಿಯರ್ ನಲ್ಲಿ 153 ಕ್ಯಾಲೋರಿಗಳಿವೆ. ಇದು ಕೆಲವು ಖನಿಜಗಳು ಮತ್ತು ವಿಟಮಿನ್​​​ಗಳನ್ನು ಸಹ ಒಳಗೊಂಡಿದೆ. ಬಿಯರ್​​​ನ್ನು ಧಾನ್ಯಗಳು ಮತ್ತು ಯೀಸ್ಟ್​​ನಿಂದ ತಯಾರಿಸಲಾಗುತ್ತದೆ. ಬಿಯರ್​​ನ ಮಿತವಾದ ಸೇವನೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ. ಇದರಲ್ಲಿ ಆಲ್ಕೋಹಾಲ್ ಅಂಶವಿದ್ದು, ಸ್ವಲ್ಪ ಮಟ್ಟಿಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಬಿಯರ್ ಕುಡಿಯುವುದು ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಮಿತವಾಗಿ ಬಿಯರ್ ಸೇವಿಸುವುದರಿಂದ ಪುರುಷರು ಮತ್ತು ಮಹಿಳೆಯರ ಮೂಲೆಗಳು ಬಲಗೊಳ್ಳುತ್ತವೆ. ಮತ್ತು ಇದು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ಹೊರತಾಗಿ ಅತಿಯಾದ ಬಿಯರ್ ಸೇವನೆಯು ಬುದ್ಧಿಮಾಂದ್ಯತೆಯ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ:  ಪ್ರಮುಖ ಭಾರತೀಯ ಬಿಯರ್ ಕಂಪನಿಗಳ ಕುರಿತು ಮಾಹಿತಿ ಇಲ್ಲಿದೆ

ಬಿಯರ್​​​ನ ಅನಾನುಕೂಲಗಳು:

• ಬಿಯರ್ ಕುಡಿಯುವ ಜನರಲ್ಲಿ ಖಿನ್ನತೆಯ ಅಪಾಯವು, ಬಿಯರ್ ಕುಡಿಯದ ಜನರಿಗಿಂತ ಹಲವು ಪಟ್ಟು ಹೆಚ್ಚು.

• ಹೆಚ್ಚು ಬಿಯರ್ ಕುಡಿಯುವುದರಿಂದ ಸಿರೋಸಿಸ್ ನಂತಹ ಲಿವರ್ ಸಂಬಂಧಿ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ.

• ಒಂದು ಕ್ಯಾನ್ ಬಿಯರ್​​​ನಲ್ಲಿ 153 ಕ್ಯಾಲೋರಿಗಳಿವೆ. ಇದನ್ನು ಪ್ರತಿದಿನ ಸೇವಿಸಿದರೆ ನಿಮ್ಮ ತೂಕ ಹೆಚ್ಚಾಗುತ್ತದೆ.

• ಆಲ್ಕೋಹಾಯುಕ್ತ ಪಾನೀಯಗಳನ್ನು ಕುಡಿಯುವುದರಿಂದ ಗಂಟಲು ಮತ್ತು ಬಾಯಿ ಕ್ಯಾನ್ಸರ್ ಸೇರಿದಂತೆ ಅನೇಕ ರೀತಿಯ ಕ್ಯಾನ್ಸರ್ ಅಪಾಯಗಳು ಹೆಚ್ಚಾಗುತ್ತವೆ.

• ಬಿಯರ್ ಸೇವನೆಯು ಅಧಿಕ ರಕ್ತದೊತ್ತಡ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​​ ಮಾಡಿ: 

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್