ಮೈಸೂರು: ಹಕ್ಕುಸ್ವಾಮ್ಯವಿಲ್ಲದ ಆರ್ಎಸ್ಎಸ್ (RSS) ಆಳ ಮತ್ತು ಅಗಲ ಹೆಸರಿನ ಕೃತಿಯನ್ನು ಸಾಹಿತಿ ದೇವನೂರು ಮಹಾದೇವ ರಚಿಸಿದ್ದು, ಈಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. 74 ಪುಟಗಳ ಕೃತಿ ಯಾರು ಬೇಕಾದರೂ ಪುಸ್ತಕ ರೂಪದಲ್ಲಿ ಪ್ರಕಟಿಸಿ. ಯಾರ ಹೆಸರಿನಲ್ಲಿ ಬೇಕಾದರೂ ಪ್ರಕಟಿಸಿ. ಆದರೆ ಪ್ರಕಟಿಸುವ ಮುನ್ನ 100 ರೂಪಾಯಿ ನೀಡಿ ನೋಂದಾಯಸಿಕೊಳ್ಳಿ ಎಂದು ಕೃತಿಯಲ್ಲಿ ಸಾಹಿತಿ ದೇವನೂರು ಮಹಾದೇವ್ ಮನವಿ ಮಾಡಿದ್ದಾರೆ. ದೇವನೂರು ಮಹದೇವ್ ದೃಷ್ಟಿಯಲ್ಲಿ ಆರ್ಎಸ್ಎಸ್ ಬಗ್ಗೆ ಕೃತಿ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೃತಿಯ ಪಿಡಿಎಫ್ ಪ್ರತಿ ವೈರಲ್ ಆಗಿದೆ. ಆರ್ಆರ್ಎಸ್ನ ಗೋಲ್ವಾಲ್ಕರ್, ಹೆಡ್ಗೆವಾರ್ ಚಿಂತನ ಗಂಗಾ ಸಾವರ್ಕರ್ ಭಾಷಣಗಳು ಜೊತೆಗೆ ಮನುಷ್ಯ ವಿರೋಧಿ ಮನುಸ್ಮೃತಿ, ಮತ್ತು ಭಗವದ್ಗೀತೆಗಳಲ್ಲಿ ದೇಶದ ಕುರಿತು ಹಿಂದುತ್ವದ ಕುರಿತು ಏನೇನೆಲ್ಲಾ ಹೇಳಲಾಗಿದೆ.
ಇದನ್ನೂ ಓದಿ: ಪಠ್ಯಪುಸ್ತಕದಿಂದ ದೇವನೂರು ಮಹಾದೇವ ಬರಹ ಬದಲಿಸಲು ಆಗುವುದಿಲ್ಲ: ಬಿಸಿ ನಾಗೇಶ್
ಇವುಗಳಲ್ಲಿ ಯಾವುದನ್ನು ಆರ್ಎಸ್ಎಸ್ ತನ್ನ ಸಿದ್ದಾಂತದಲ್ಲಿ ಅಳವಡಿಸಿಕೊಂಡು ಭಾರತದಲ್ಲಿ ಕೆಲಸ ಮಾಡುತ್ತಿದೆ. ಈ ಸಿದ್ದಾಂತದಿಂದ ಬಹುತ್ವ ಭಾರತಕ್ಕೆ ಮತ್ತು ನಾವೆಲ್ಲ ಒಪ್ಪಿ ಬದುಕುತ್ತಿರುವ ಭಾರತದ ಸಂವಿಧಾನದ ಆಶಯಗಳಿಗೆ ಹೇಗೆ ದಕ್ಕೆಯುಂಟಾಗುತ್ತದೆ ಎಂಬ ಕುರಿತು ಅತ್ಯಂತ ಸರಳವಾಗಿ ವಿವರಿಸಲಾಗಿದೆ ಎನ್ನಲಾಗುತ್ತಿದೆ.
Published On - 11:12 am, Sat, 9 July 22