ಕೆಲಸಕ್ಕಾಗಿ ಆನ್ಲೈನ್ ಮೊರೆ ಹೋದವನಿಗೆ 48 ಲಕ್ಷ ಹಣ ದೋಖಾ; ಬೆಂಗಳೂರು ಮೂಲದ ಮೂವರು ಆರೋಪಿಗಳು ಅರೆಸ್ಟ್

ಮಹಾಮಾರಿ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದ ಮೈಸೂರಿನ ಸಾತಗಳ್ಳಿ ನಿವಾಸಿ, ಮೆಕಾನಿಕಲ್ ಇಂಜಿನಿಯರ್ ಗೆ ಸಂಬಂಧಪಟ್ಟ ಕೆಲಸ ಹುಡುಕಲು ಯತ್ನಿಸುತ್ತಿದ್ದರು. ಈ ವೇಳೆ ಬೇಗ ಕೆಲಸ ಹುಡುಕುವ ಸಲುವಾಗಿ ಆನ್ ಲೈನ್ ಮೊರೆ ಹೋಗಿದ್ದಾರೆ.

ಕೆಲಸಕ್ಕಾಗಿ ಆನ್ಲೈನ್ ಮೊರೆ ಹೋದವನಿಗೆ 48 ಲಕ್ಷ ಹಣ ದೋಖಾ; ಬೆಂಗಳೂರು ಮೂಲದ ಮೂವರು ಆರೋಪಿಗಳು ಅರೆಸ್ಟ್
ಮೈಸೂರು ಪೊಲೀಸರು
Follow us
TV9 Web
| Updated By: ಆಯೇಷಾ ಬಾನು

Updated on: Jul 08, 2022 | 4:47 PM

ಮೈಸೂರು: ಜಿಲ್ಲೆಯಲ್ಲಿ ಮತ್ತೊಂದು ಆನ್ಲೈನ್ ದೋಖಾ(Online Fraud) ಬಯಲಾಗಿದೆ. ಕೆಲಸ ಪಡೆಯುವ ಪ್ರಯತ್ನದಲ್ಲಿ ಯುವಕ 48 ಲಕ್ಷ ಹಣ ಕಳೆದುಕೊಂಡಿದ್ದಾರೆ. ಬರೋಬ್ಬರಿ 48,80,200ರೂ ಹಣ ಪಡೆದು ವಂಚಿಸಿದ್ದ ಬೆಂಗಳೂರಿನ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 24 ಲಕ್ಷ ನಗದು, 7 ಕೀಪ್ಯಾಡ್ ಮೊಬೈಲ್, 4ಸ್ಮಾರ್ಟ್ ಫೋನ್, 11ಸಿಮ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ.

ಮಹಾಮಾರಿ ಕೊರೊನಾದಿಂದ ಕೆಲಸ ಕಳೆದುಕೊಂಡಿದ್ದ ಮೈಸೂರಿನ ಸಾತಗಳ್ಳಿ ನಿವಾಸಿ, ಮೆಕಾನಿಕಲ್ ಇಂಜಿನಿಯರ್ ಗೆ ಸಂಬಂಧಪಟ್ಟ ಕೆಲಸ ಹುಡುಕಲು ಯತ್ನಿಸುತ್ತಿದ್ದರು. ಈ ವೇಳೆ ಬೇಗ ಕೆಲಸ ಹುಡುಕುವ ಸಲುವಾಗಿ ಆನ್ ಲೈನ್ ಮೊರೆ ಹೋಗಿದ್ದಾರೆ. ಗೂಗಲ್ನಲ್ಲಿ ಎಮಿನೆಂಟ್ ಮೈಂಡ್ ವಿ ಸೋರ್ಸ್ ಹೆಸರಿನ ಕಂಪನಿ ಸಂಪರ್ಕಿಸಿದ್ದಾರೆ. ಆಗ ಆರೋಪಿಗಳು ಮೊದಲ ಬಾರಿ 1ಸಾವಿರ ರೂ ಹಣ ಪಡೆದಿದ್ದಾರೆ. ಬಳಿಕ ಹಂತ ಹಂತವಾಗಿ ಲಕ್ಷಾಂತರರೂ ಹಣ ಪಡೆದಿದ್ದಾರೆ. ಕೆಲಸ ಬೇಡ ಹಣ ವಾಪಸ್ಸು ಕೊಡಿ ಎಂದಾಗ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಗ ಅನುಮಾನ ಬಂದು ಅನಿವಾರ್ಯವಾಗಿ ಮೈಸೂರಿನ ಸೆನ್ ಪೊಲೀಸ್ ಠಾಣೆಗೆ ಯುವಕ ದೂರು ನೀಡಿದ್ದಾನೆ.

ದೂರು ಆಧರಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಇನ್ನಷ್ಟು ಜನರಿಗೆ ಮೋಸ ಮಾಡಿರುವ ಸಾಧ್ಯತೆ ಇದ್ದು ಮೈಸೂರು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಎಸ್ಪಿ ಆರ್ ಚೇತನ್ ಮಾಹಿತಿ ನೀಡಿದ್ದಾರೆ.

ನಕಲಿ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳಿ? ನಕಲಿ ಕಾಲ್​ಸೆಂಟರ್​​​ ಜಾಲ ಪತ್ತೆಯಾಯ್ತು ಸಿಲಿಕಾನ್ ಸಿಟಿ​ ಬೆಂಗಳೂರಿನಲ್ಲಿ! ಬೆಂಗಳೂರು: ಈಗಂತೂ ನಕಲಿ ಯಾವ ಕ್ಷೇತ್ರದಲ್ಲಿ ಇಲ್ಲ ಹೇಳೀ!? ಎಂದು ಪ್ರಶ್ನಿಸಿಕೊಂಡರೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ನಕಲಿ ರಾರಾಜಿಸುತ್ತಿದೆ ಎನ್ನಬಹುದು. ತಾಜಾ ಆಗಿ, ಬೆಂಗಳೂರಿನಲ್ಲಿ ನಕಲಿ ಕಾಲ್​ಸೆಂಟರ್​​​ ಜಾಲ ಪತ್ತೆಯಾಗಿದೆ. ಅದೂ ಸಿಲಿಕಾನ್ ಸಿಟಿ​ಯಲ್ಲಿ ಇಂತಹ ನಕಲಿ ಜಾಲ ಪತ್ತೆಯಾಗಿರುವುದು ಸಖೇದಾಶ್ಚರ್ಯ ಜೊತೆಗೆ, ಆತಂಕದ ವಿಷಯವೂ ಆಗಿದೆ. ಭಾರತದಲ್ಲಿ ಒಂದೆರಡು ಕಡೆ ಇಂತಹ ನಕಲಿ ಕಾಲ್​ಸೆಂಟರ್​​​ ಗಳು ತಲೆ ಎತ್ತಿದ್ದವಾದರೂ, ಬೆಂಗಳೂರಿನಲ್ಲಿ ಇಂತಹ ನಕಲಿ ಜಾಲ ಆಪರೇಟ್ ಮಾಡ್ತಾ ಇದ್ದಿದ್ದು ಇದೇ ಮೊದಲು ಎನ್ನಬಹುದು.

43 ಕಂಪ್ಯೂಟರ್ ಇಟ್ಟುಕೊಂಡು, ಅಮೆರಿಕದ ಸೇವೆಗೆ ನಕಲಿ ಕಾಲ್​ಸೆಂಟರ್ ಬೆಂಗಳೂರಿನಲ್ಲಿ ಈ ಬೃಹತ್ ನಕಲಿ ಕಾಲ್ ​ಸೆಂಟರ್​​​ ಜಾಲ ಪತ್ತೆಯಾಗಿರುವುದು ವೈಟ್​​ಫೀಲ್ಡ್​, ಮಹದೇವಪುರದಲ್ಲಿ. ಸಿಲಿಕಾನ್ ಸಿಟಿ​ಗೆ ಐಟಿ ಕ್ಷೇತ್ರ ಕಾಲಿಟ್ಟಾಗ ಬೆಂಗಳೂರಿನ ಹೆಗ್ಗುರುತಾಗಿದ್ದ ಟೆಕ್​​ಪಾರ್ಕ್ ಒಳಗಡೆ ಇತ್ತೀಚೆಗೆ ಈ ನಕಲಿ ಕಂಪನಿ ಕಾರ್ಯಾಚಾರಣೆ ನಡೆಸುತ್ತಿತ್ತು. ಇದೀಗ ನಕಲಿ ಕಂಪನಿ ತೆರೆದುಕೂತಿದ್ದ ಅಷ್ಟೂ ಆರೋಪಿಗಳನ್ನು ಬಂಧಿಸಲಾಗಿದೆ. ಗುಜರಾತ್ ಮೂಲದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 243 ಕಂಪ್ಯೂಟರ್ ವಶಕ್ಕೆ ಪಡೆದಿದ್ದಾರೆ.

ವೈಟ್​​ಫೀಲ್ಡ್​, ಮಹದೇವಪುರ ಪೊಲೀಸರ ಜಂಟಿ ಕಾರ್ಯಾಚರಣೆ ಫಲವಾಗಿ ಇದೀಗ ಈ ಜಾಲ ಛಿದ್ರವಾಗಿದೆ. ಅಮೆರಿಕ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಹಣ ಪಡೆದು ವಂಚನೆ ಎಸಗಲಾಗಿದೆ. ಬ್ಯಾಂಕ್​​ ಖಾತೆಯಲ್ಲಿ ಸಮಸ್ಯೆ ಎಂದು ಹೇಳಿ ಹಣ ಪಡೆದು ವಂಚನೆ ನಡೆದಿದೆ. ಅಮೆಜಾನ್​​​ ಅಕೌಂಟ್​ ಮತ್ತು ಶಾಪಿಂಗ್​​ ಮಾಡ್ತಿದ್ದವರ ಡೇಟಾ ಬಳಸಿ ಕೃತ್ಯವೆಸಗಲಾಗಿದೆ.

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್