ಆರ್​ಎಸ್​ಎಸ್ ​ಆಳ ಮತ್ತು ಅಗಲ: ಹಕ್ಕುಸ್ವಾಮ್ಯವಿಲ್ಲದ ಕೃತಿ ರಚಿಸಿದ ದೇವನೂರು ಮಹಾದೇವ್

ದೇವನೂರು ಮಹದೇವ್ ದೃಷ್ಟಿಯಲ್ಲಿ ಆರ್​ಎಸ್​ಎಸ್​ ಬಗ್ಗೆ ಕೃತಿ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೃತಿಯ ಪಿಡಿಎಫ್ ಪ್ರತಿ ವೈರಲ್ ಆಗಿದೆ.

ಆರ್​ಎಸ್​ಎಸ್ ​ಆಳ ಮತ್ತು ಅಗಲ: ಹಕ್ಕುಸ್ವಾಮ್ಯವಿಲ್ಲದ ಕೃತಿ ರಚಿಸಿದ ದೇವನೂರು ಮಹಾದೇವ್
ಸಾಹಿತಿ ದೇವನೂರು ಮಹಾದೇವ್
TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Jul 09, 2022 | 12:34 PM

ಮೈಸೂರು: ಹಕ್ಕುಸ್ವಾಮ್ಯವಿಲ್ಲದ ಆರ್​ಎಸ್​ಎಸ್ (RSS) ​ ಆಳ ಮತ್ತು ಅಗಲ ಹೆಸರಿನ ಕೃತಿಯನ್ನು ಸಾಹಿತಿ ದೇವನೂರು ಮಹಾದೇವ ರಚಿಸಿದ್ದು, ಈಗ ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. 74 ಪುಟಗಳ ಕೃತಿ ಯಾರು ಬೇಕಾದರೂ ಪುಸ್ತಕ ರೂಪದಲ್ಲಿ ಪ್ರಕಟಿಸಿ. ಯಾರ ಹೆಸರಿನಲ್ಲಿ ಬೇಕಾದರೂ ಪ್ರಕಟಿಸಿ. ಆದರೆ ಪ್ರಕಟಿಸುವ ಮುನ್ನ 100 ರೂಪಾಯಿ ನೀಡಿ ನೋಂದಾಯಸಿಕೊಳ್ಳಿ ಎಂದು ಕೃತಿಯಲ್ಲಿ ಸಾಹಿತಿ ದೇವನೂರು ಮಹಾದೇವ್ ಮನವಿ ಮಾಡಿದ್ದಾರೆ. ದೇವನೂರು ಮಹದೇವ್ ದೃಷ್ಟಿಯಲ್ಲಿ ಆರ್​ಎಸ್​ಎಸ್​ ಬಗ್ಗೆ ಕೃತಿ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಕೃತಿಯ ಪಿಡಿಎಫ್ ಪ್ರತಿ ವೈರಲ್ ಆಗಿದೆ. ಆರ್​ಆರ್​ಎಸ್​ನ ಗೋಲ್ವಾಲ್ಕರ್, ಹೆಡ್ಗೆವಾರ್​ ಚಿಂತನ ಗಂಗಾ ಸಾವರ್ಕರ್ ಭಾಷಣಗಳು ಜೊತೆಗೆ ಮನುಷ್ಯ ವಿರೋಧಿ ಮನುಸ್ಮೃತಿ, ಮತ್ತು ಭಗವದ್ಗೀತೆಗಳಲ್ಲಿ ದೇಶದ ಕುರಿತು ಹಿಂದುತ್ವದ ಕುರಿತು ಏನೇನೆಲ್ಲಾ ಹೇಳಲಾಗಿದೆ.

ಇದನ್ನೂ ಓದಿ: ಪಠ್ಯಪುಸ್ತಕದಿಂದ ದೇವನೂರು ಮಹಾದೇವ ಬರಹ ಬದಲಿಸಲು ಆಗುವುದಿಲ್ಲ: ಬಿಸಿ ನಾಗೇಶ್

ಇವುಗಳಲ್ಲಿ ಯಾವುದನ್ನು ಆರ್​ಎಸ್​ಎಸ್​ ತನ್ನ ಸಿದ್ದಾಂತದಲ್ಲಿ ಅಳವಡಿಸಿಕೊಂಡು ಭಾರತದಲ್ಲಿ ಕೆಲಸ ಮಾಡುತ್ತಿದೆ. ಈ ಸಿದ್ದಾಂತದಿಂದ ಬಹುತ್ವ ಭಾರತಕ್ಕೆ‌ ಮತ್ತು ನಾವೆಲ್ಲ ಒಪ್ಪಿ ಬದುಕುತ್ತಿರುವ ಭಾರತದ ಸಂವಿಧಾನದ ಆಶಯಗಳಿಗೆ ಹೇಗೆ ದಕ್ಕೆಯುಂಟಾಗುತ್ತದೆ ಎಂಬ ಕುರಿತು ಅತ್ಯಂತ ಸರಳವಾಗಿ ವಿವರಿಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಪಠ್ಯ ಪುಸ್ತಕ ವಿವಾದ: ಪಠ್ಯದಲ್ಲಿ ನನ್ನ ಕಥನದ ಭಾಗ ಸೇರಿಸಬೇಡಿ, ಸೇರಿದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದ ದೇವನೂರ ಮಹಾದೇವ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada