ಮುಂದಿನ ವಾರದಿಂದ ಮೈಸೂರು- ಉದಯಪುರ ನಡುವೆ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಮತ್ತೆ ಆರಂಭ

ಸೋಮವಾರದಿಂದ (ಜುಲೈ 11) ಉದಯಪುರ ಸಿಟಿ ಹಾಗೂ ಗುರುವಾರದಿಂದ (ಜುಲೈ 14) ಮೈಸೂರು ನಿಲ್ದಾಣದಿಂದ ಜಾರಿಗೆ ಬರುವಂತೆ ಉದಯಪುರ ಸಿಟಿ - ಮೈಸೂರು - ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸೇವೆಯನ್ನು ವಾಯವ್ಯ ರೈಲ್ವೆ ವಲಯವು ಮತ್ತೆ ಆರಂಭಿಸಲಿದೆ. ಈ ರೈಲುಗಳು ಕೆಳಗೆ ತಿಳಿಸಿದ ವೇಳಾಪಟ್ಟಿಯೊಂದಿಗೆ ಸಂಚರಿಸುತ್ತವೆ

ಮುಂದಿನ ವಾರದಿಂದ ಮೈಸೂರು- ಉದಯಪುರ ನಡುವೆ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಮತ್ತೆ ಆರಂಭ
ಮುಂದಿನ ವಾರದಿಂದ ಮೈಸೂರು- ಉದಯಪುರ ನಡುವೆ ಹಮ್ ಸಫರ್ ವೀಕ್ಲಿ ಎಕ್ಸ್ ಪ್ರೆಸ್ ಮತ್ತೆ ಆರಂಭ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 09, 2022 | 7:48 PM

ಬರುವ ಸೋಮವಾರದಿಂದ (ಜುಲೈ 11) ಉದಯಪುರ ಸಿಟಿ ಹಾಗೂ ಗುರುವಾರದಿಂದ (ಜುಲೈ 14) ಮೈಸೂರು ನಿಲ್ದಾಣದಿಂದ ಜಾರಿಗೆ ಬರುವಂತೆ ಉದಯಪುರ ಸಿಟಿ – ಮೈಸೂರು – ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು (ರೈಲು ಸಂಖ್ಯೆ 19667/19668) (Humsafar Weekly Express) ಸೇವೆಯನ್ನು ವಾಯವ್ಯ ರೈಲ್ವೆ ವಲಯವು ಮತ್ತೆ ಆರಂಭಿಸಲಿದೆ. ಈ ರೈಲುಗಳು ಕೆಳಗೆ ತಿಳಿಸಿದ ನಿಲುಗಡೆಗಳು ಹಾಗೂ ವೇಳಾಪಟ್ಟಿಯೊಂದಿಗೆ ಸಂಚರಿಸುತ್ತವೆ (South West Railway Hubli Division).

ಪ್ರಯಾಣಿಕರು ರೈಲ್ವೆ ನಿಲ್ದಾಣದಲ್ಲಿ ಹಾಗೂ ರೈಲುಗಳಲ್ಲಿ ತಮ್ಮ ಮತ್ತು ಇತರರ ಸುರಕ್ಷತೆಗಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ.

1. ಉದಯಪುರ ಸಿಟಿ – ಮೈಸೂರು ಹಮ್ ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (19667) ಜುಲೈ 11 ರಿಂದ ಪ್ರತಿ ಸೋಮವಾರದಂದು ರಾತ್ರಿ 09:15 ಕ್ಕೆ ಉದಯಪುರ ಸಿಟಿ ನಿಲ್ದಾಣದಿಂದ ಹೊರಟು, ಪ್ರತಿ ಬುಧವಾರದಂದು ಸಂಜೆ 04.35 ಕ್ಕೆ ಮೈಸೂರು ನಿಲ್ದಾಣಕ್ಕೆ ಆಗಮಿಸಲಿದೆ.

2. ಮೈಸೂರು – ಉದಯಪುರ ಸಿಟಿ ಹಮ್ ಸಫರ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು (19668) ಜುಲೈ 14 ರಿಂದ ಪ್ರತಿ ಗುರುವಾರರಂದು ಬೆಳಿಗ್ಗೆ 10:00 ಗಂಟೆಗೆ ಮೈಸೂರು ನಿಲ್ದಾಣದಿಂದ ಹೊರಟು, ಪ್ರತಿ ಶನಿವಾರದಂದು ನಸುಕಿನಜಾವ 03:35 ಕ್ಕೆ ಉದಯಪುರ ಸಿಟಿ ನಿಲ್ದಾಣವನ್ನು ತಲುಪಲಿದೆ.

ಈ ರೈಲು (19667) ಮಾರ್ಗ ಮಧ್ಯದಲ್ಲಿ ಚಿತ್ತೌಡಗಢ (11:05/11:15 PM), ಮಂದಸೌರ್ (01:10/01:12 AM), ರತ್ಲಾಮ್ (03:10/03:20 AM), ವಡೋದರಾ (07:35/07:45 AM), ಸೂರತ್ (09:37/09:42 AM), ವಸಯಿ ರೋಡ (12:25/12:30 PM), ಪುಣೆ (04:35/04:40 PM), ಮೀರಜ್ (11:40/11:45 PM), ಬೆಳಗಾವಿ (01:58/02:00 AM), ಎಸ್.ಎಸ್.ಎಸ್ ಹುಬ್ಬಳ್ಳಿ (04:55/05:05 AM), ದಾವಣಗೆರೆ (07:28/07:30 AM), ಕೆ.ಎಸ್.ಆರ್ ಬೆಂಗಳೂರು (01:30/01:35 PM) ಮತ್ತು ಮಂಡ್ಯ (03:00/03:02 PM) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಹಿಂದಿರುಗುವ ದಿಕ್ಕಿನಲ್ಲಿ, ಈ ರೈಲು (19668) ಮಾರ್ಗ ಮಧ್ಯದಲ್ಲಿ ಮಂಡ್ಯ (10:34/10:35 AM), ಕೆ.ಎಸ್.ಆರ್ ಬೆಂಗಳೂರು (12:10/12:20 PM), ದಾವಣಗೆರೆ (04:40/04:42 PM), ಎಸ್.ಎಸ್.ಎಸ್ ಹುಬ್ಬಳ್ಳಿ (08:00/08:10 PM), ಬೆಳಗಾವಿ (10:50/10:52 PM), ಮೀರಜ್ (02:30/02:35 AM), ಪುಣೆ (08:25/08:30 AM), ವಸಯಿ ರೋಡ (12:35/12:45 PM), ಸೂರತ್ (03:22/03:27 PM), ವಡೋದರಾ (05:05/05:15 PM), ರತ್ಲಾಮ್ (08:45/08:55 PM), ಮಂದಸೌರ್ (10:25/10:27 PM) ಮತ್ತು ಚಿತ್ತೌಡಗಢ (01:10/01:20 AM) ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಈ ಎರಡು ರೈಲುಗಳು, ಹದಿನಾರು- 3ನೇ ದರ್ಜೆಯ ಹವಾ ನಿಯಂತ್ರಿತ ಬೋಗಿಗಳು, ಒಂದು- ದ್ವಿತೀಯ ದರ್ಜೆಯ ಸ್ಲೀಪರ್ ಬೋಗಿ, ಒಂದು- ಹವಾ ನಿಯಂತ್ರಿತ ಅಡುಗೆ ಬೋಗಿ (ಪ್ಯಾಂಟ್ರಿ ಕಾರ್) ಹಾಗೂ ಎರಡು-ಸಾಮಾನ್ಯ ದ್ವಿತೀಯ ದರ್ಜೆಯ ಲಗೇಜ್ ಕಮ್ ಬ್ರೇಕ್-ವ್ಯಾನ್/ ಜನರೇಟರ್ ಗಳು ಸೇರಿ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ ಎಂದು ನೈಋತ್ಯ ರೈಲ್ವೆ, ಹುಬ್ಬಳ್ಳಿ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್