ಮೈಸೂರು: ಜಿಲ್ಲೆಯ ನಂಜನಗೂಡು RTO ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ತೆರಿಗೆ ಪಾವತಿಸದ ಪಂಚಲಿಂಗೇಶ್ವರ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ 6 ಐಷಾರಾಮಿ ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ. ಬಸ್‌ಗಳನ್ನು ನಂಜನಗೂಡು ಸಂಚಾರಿ ಠಾಣೆ ಟ್ರಾಫಿಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. 5 ವರ್ಷಗಳಿಂದ ತೆರಿಗೆ ಪಾವತಿಸದೆ ವಂಚಿಸಿದ ಆರೋಪ ಕೇಳಿ ಬಂದಿದೆ.
ಸೀಜ್ ಆದ ಬಸ್ಗಳು ನಂಜನಗೂಡು ಪಟ್ಟಣದ ಕೈಗಾರಿಕಾ ಪ್ರದೇಶದ ಜುಬಿಲಿಯಂಟ್ ಕಾರ್ಖಾನೆಯ ಕಾರ್ಮಿಕರ ಸೇವೆಗಾಗಿ ಬಳಸುತ್ತಿದ್ದ ಬಸ್ಸುಗಳು. ಕಳೆದ 5 ವರ್ಷಗಳಿಂದಲೂ ಜುಬಿಲಿಯಂಟ್ ಕಾರ್ಖಾನೆಯ ಕಾರ್ಮಿಕರನ್ನ ಸಾಗಿಸಲು ಬಳಸಲಾಗುತ್ತಿತ್ತು. 5 ವರ್ಷಗಳಿಂದಲೂ ಸರ್ಕಾರಕ್ಕೆ ತೆರಿಗೆ ಹಣ ಮತ್ತು ವಿಮೆ ಪಾವತಿಸಿರಲಿಲ್ಲ. ಈ ಕುರಿತಂತೆ ಮೈಸೂರಿನ ಆರ್ಟಿಒ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ದೂರಿನ ಆಧಾರದ ಮೇಲೆ ದಾಖಲೆ ಪರಿಶೀಲನೆ ಮಾಡಿದಾಗ ತೆರಿಗೆ ಹಾಗೂ ವಿಮೆ ಪಾವತಿಸದಿರುವುದು ಖಚಿತವಾಗಿದೆ.
ಒಟ್ಟು 14 ಬಸ್ಸುಗಳನ್ನ ಮಾಲೀಕ ಬಳಸುತ್ತಿದ್ದ. ಜುಬಿಲಿಯಂಟ್ ಕಾರ್ಖಾನೆಯ ಕಾರ್ಮಿಕರ ಜೀವದ ಜೊತೆ ಚೆಲ್ಲಾಟ ವಾಡಿರುವ ಎಸ್ಪಿಎಲ್ ಏಜೆನ್ಸಿಯ ಬಸ್ ಮಾಲೀಕನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮಟನ್ ತರಲು ನಡೆದು ಹೋಗುತ್ತಿದ್ದ ವೃದ್ಧೆಯ ಕೊರಳಿಂದ ಚಿನ್ನದ ಸರ ಎಗರಿಸಿದ ಖದೀಮರು
Published On - 9:54 am, Thu, 29 July 21