ಬೇವಿನ ಸೊಪ್ಪು ತರಲು ಬಂದ 11 ವರ್ಷದ ಬಾಲಕನನ್ನು ಗೇಟ್​ಗೆ ಕಟ್ಟಿ ಕ್ರೌರ್ಯ; ಎಸ್​ಐ ವಿರುದ್ಧವೇ ಗಂಭೀರ ಆರೋಪ

| Updated By: ganapathi bhat

Updated on: Jul 30, 2021 | 6:07 PM

ಬಾಲಕನ ಸ್ಥಿತಿ ಕಂಡು ಕರ್ನಾಟಕ ಮಾನವ ಹಕ್ಕು ಜನಜಾಗೃತಿ ವೇದಿಕೆ ಸದಸ್ಯರು ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಪ್ರಶ್ನೆ ಮಾಡಿದ ಬಳಿಕ ಎಸ್‌ಐ, ಬಾಲಕನನ್ನು ಬಿಟ್ಟು ಕಳಿಸಿದ್ದಾರೆ. ಎಸ್‌ಐ ಬಾಲಕನ ಮೇಲೆ ದೌರ್ಜನ್ಯವೆಸಗುವ ದೃಶ್ಯ ಇದೀಗ ವೈರಲ್ ಆಗಿದೆ.

ಬೇವಿನ ಸೊಪ್ಪು ತರಲು ಬಂದ 11 ವರ್ಷದ ಬಾಲಕನನ್ನು ಗೇಟ್​ಗೆ ಕಟ್ಟಿ ಕ್ರೌರ್ಯ; ಎಸ್​ಐ ವಿರುದ್ಧವೇ ಗಂಭೀರ ಆರೋಪ
ಬಾಲಕನ ಕಟ್ಟಿ ಹಾಕಿರುವುದು
Follow us on

ಮೈಸೂರು: ಸಬ್ ಇನ್​ಸ್ಪೆಕ್ಟರ್ ಒಬ್ಬರು ಅಪ್ರಾಪ್ತ ಬಾಲಕನನ್ನು ಥಳಿಸಿ ಗೇಟ್‌ಗೆ ಕಟ್ಟಿಹಾಕಿದ್ದ ಘಟನೆ ನಗರದ ಗಾಯತ್ರಿಪುರಂನ ಕ್ವಾರ್ಟರ್ಸ್‌ನಲ್ಲಿ ನಡೆದಿದೆ. 11 ವರ್ಷದ ಬಾಲಕನನ್ನು ಎಸ್‌ಐ ಒಬ್ಬರು ಥಳಿಸಿ ಗೇಟ್‌ಗೆ ಕಟ್ಟಿಹಾಕಿದ್ದಾರೆ. ಬಾಲಕನನ್ನು 40 ನಿಮಿಷ ಗೇಟ್‌ಗೆ ಕಟ್ಟಿಹಾಕಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ, ಬಾಲಕನ ಸ್ಥಿತಿ ಕಂಡು ಕರ್ನಾಟಕ ಮಾನವ ಹಕ್ಕು ಜನಜಾಗೃತಿ ವೇದಿಕೆ ಸದಸ್ಯರು ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಪ್ರಶ್ನೆ ಮಾಡಿದ ಬಳಿಕ ಎಸ್‌ಐ, ಬಾಲಕನನ್ನು ಬಿಟ್ಟು ಕಳಿಸಿದ್ದಾರೆ. ಎಸ್‌ಐ ಬಾಲಕನ ಮೇಲೆ ದೌರ್ಜನ್ಯವೆಸಗುವ ದೃಶ್ಯ ಇದೀಗ ವೈರಲ್ ಆಗಿದೆ.

ದೇವರ ಪೂಜೆಗಾಗಿ ಬೇವಿನ ಸೊಪ್ಪು ತರಲು 11 ವರ್ಷದ ಬಾಲಕ, ಪೊಲೀಸ್ ಅಧಿಕಾರಿಯ ಮನೆಯ ಪಕ್ಕದ ಖಾಲಿ ಸೈಟ್ ನಲ್ಲಿದ್ದ ಬೇವಿನ ಮರದ ಬಳಿ ಬಂದಿದ್ದ. ಸೊಪ್ಪು ಕೀಳುವ ವೇಳೆ ಮಗುವನ್ನು ಕೆಳಗಿಸಿ ಮಗುವಿಗೆ ಥಳಿಸಿದ ಆರೋಪ ಎಸ್​ಐ ಮೇಲೆ ಕೇಳಿಬಂದಿದೆ. ಅಷ್ಟೇ ಅಲ್ಲದೆ, ನಂತರ ಬಾಲಕನನ್ನು ತನ್ನ ಮನೆಯ ಗೇಟಿಗೆ ದಾರದಿಂದ ಕಟ್ಟಿ ಕ್ರೌರ್ಯ ಮೆರೆದಿದ್ದಾನೆ ಎಂದೂ ಹೇಳಲಾಗಿದೆ.

ದೂರು ನೀಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸ್
ದೂರು ನೀಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಅಡಿಯಲ್ಲಿ ಜುಲೈ 28 ರಂದು ಮಂಗಳೂರಿನ ಪೊಲೀಸ್ ಠಾಣೆ ಹೆಡ್​ ಕಾನ್ಸ್​​ಟೇಬಲ್​ ಬಂಧನವಾಗಿತ್ತು. ಮಹಿಳಾ ಠಾಣೆಯಲ್ಲಿ ಪ್ರಕರಣ​ ದಾಖಲಿಸಿಕೊಂಡು, ಪೋಕ್ಸೊ ಕಾಯ್ದೆಯಡಿ ಹೆಡ್​​ಕಾನ್ಸ್​​ಟೇಬಲ್​ ಬಂಧನ ಮಾಡಲಾಗಿತ್ತು. ಮಂಗಳೂರಿನ ಕಂಕನಾಡಿ ಠಾಣೆ ಹೆಡ್​ ಕಾನ್ಸ್​​ಟೇಬಲ್​ ಸುನಿಲ್ ಎಂಬಾತನನ್ನು ಮಹಿಳಾ ಠಾಣೆಯಲ್ಲಿ ಪ್ರಕರಣ​ ದಾಖಲಿಸಿಕೊಂಡು ಬಂಧಿಸಲಾಗಿತ್ತು.

ಜನವರಿಯಲ್ಲಿ ಪೋಷಕರೊಂದಿಗೆ 17 ವರ್ಷದ ಬಾಲಕಿ ಠಾಣೆಗೆ ಭೇಟಿ ನೀಡಿದ್ದಳು. ಆಟೋ ಚಾಲಕ ಚುಡಾಯಿಸುತ್ತಾನೆ ಎಂದು ಅವರು ದೂರು ನೀಡಿದ್ದರು. ಈ ಪ್ರಕರಣದ ತನಿಖೆಯ ಕಾರಣ ಎಂದು ಹೆಡ್​ಕಾನ್ಸ್​ಟೇಬಲ್ ಬಾಲಕಿಯ ಫೋನ್ ​ನಂಬರ್ ಪಡೆದಿದ್ದ. ಬಳಿಕ ಬಾಲಕಿಗೆ ಅಶ್ಲೀಲವಾಗಿ ಮೆಸೇಜ್ ಮಾಡ್ತಿದ್ದ ಎಂದು ತಿಳಿದುಬಂದಿತ್ತು.

ಇದನ್ನೂ ಓದಿ: ಮಂಗಳೂರು: ದೂರು ನೀಡಲು ಬಂದಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ; ಪೊಲೀಸ್ ಹೆಡ್ ಕಾನ್​ಸ್ಟೇಬಲ್ ಬಂಧನ

ರೋಹಿಣಿ ಸಿಂಧೂರಿ ಸಿಂಗಂ ಅಲ್ಲ, ಮೈಸೂರು ಜನರನ್ನ ಮಂಗ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ: ಸಾ.ರಾ. ಮಹೇಶ್

( SI Police punished small kid for plucking neem leaves in Mysuru)

Published On - 6:00 pm, Fri, 30 July 21