ಮೈಸೂರು: ರಾಜ್ಯದಲ್ಲಿ ವೈದ್ಯರ ಕೊರತೆ ನೀಗಿಸಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಹಲವು ವರ್ಷಗಳಿಂದ ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ಇತ್ತು. ವೈದ್ಯ ಕ್ಷೇತ್ರಗಳಲ್ಲಿ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮವಹಿಸಲಾಗಿದೆ ಎಂದು ಮೈಸೂರಿನಲ್ಲಿ ಸಚಿವ ಡಾ.ಸುಧಾಕರ್(Dr. K Sudhaka) ತಿಳಿಸಿದರು. ಎರಡು ದಿನಗಳ ಮೈಸೂರು ಪ್ರವಾಸದಲ್ಲಿರುವ ಆರೋಗ್ಯ ಸಚಿವ ಡಾ.ಸುಧಾಕರ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದು ಸುದ್ದಿಗೋಷ್ಠಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯ ಸಭೆ ನಡೆಸಿದ್ದೇನೆ. ಪ್ರಧಾನಿ ಕನಸು ಕ್ಷಯ ಮುಕ್ತ ಭಾರತಕ್ಕೆ ಒತ್ತು ನೀಡುವಂತೆ ಸೂಚನೆ ನೀಡಿದ್ದೇನೆ. ಆಯುಷ್ಮಾನ್ ಭಾರತ್ ಯೋಜನೆ ಕರ್ನಾಟಕದಲ್ಲಿ 4 ಕೋಟಿ 80 ಲಕ್ಷ ಫಲಾನುಭವಿಗಳಿದ್ದಾರೆ. ಡಿಸೆಂಬರ್ ಅಂತ್ಯದಲ್ಲಿ ಇವರೆಲ್ಲರಿಗೂ ಕಾರ್ಡ್ ತಲುಪಿಸುವ ಗುರಿ ಇದೆ. ತಾಯಿ ಮತ್ತು ಮಕ್ಕಳ ಕಾರ್ಯಕ್ರಮ ದೇಶಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಕಡಿಮೆ ಇದೆ. ಕೇರಳ ತಮಿಳುನಾಡಿಗಿಂತ ಉತ್ತಮ ಸರಾಸರಿಯಲ್ಲಿ ಗುರಿ ಮುಟ್ಟಲು ಸೂಚಿಸಲಾಗಿದೆ. ಪೌಷ್ಠಿಕಾಂಶದ ಆಹಾರದ ಕೊರತೆಯಿಂದ ಅನಿಮಿಯಾ ನಿವಾರಣೆಗೆ ಆಂದೋಲನದ ಮೂಲಕ ಜಾಗೃತಿ ಮೂಡಿಸಲಾಗುವುದು. ಶಾಲೆಗಳಲ್ಲಿ ಕ್ಯಾಂಪ್ ಮಾಡಿ ಕಾರ್ಯಕ್ರಮ ಮಾಡುತ್ತೇವೆ. ಈ ಮೂಲಕ ಮಕ್ಕಳ ಸರ್ವಾಂಗಿಣ ಅಭಿವೃದ್ದಿಗೆ ಒತ್ತು ನೀಡಲಾಗುತ್ತೆ ಎಂದರು.
ರಾಜ್ಯದಲ್ಲಿ ವೈದ್ಯರ ಕೊರತೆ ನೀಗಿಸಲು ಇಲಾಖೆಯಿಂದ ಕ್ರಮ ಕೈಗೊಳ್ಳಲಾಗಿದೆ. ಹಲವು ವರ್ಷಗಳಿಂದ ರಾಜ್ಯದಲ್ಲಿ ತಜ್ಞ ವೈದ್ಯರ ಕೊರತೆ ಇತ್ತು. ವೈದ್ಯ ಕ್ಷೇತ್ರಗಳಲ್ಲಿ ಎಲ್ಲ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಂಡಿದ್ದೇವೆ. ನರ್ಸ್, ಒಟಿ ತಂತ್ರಜ್ಞರು ಸೇರಿ ಇತರೆ ಸಿಬ್ಬಂದಿ ನೇಮಕಕ್ಕೆ ನಿರ್ಧಾರ ಮಾಡಲಾಗಿದೆ. ಜಿಲ್ಲಾವಾರು ಔಷಧಿಗಳ ಪೂರೈಕೆಗೂ ಇಲಾಖೆಯಿಂದ ಅಗತ್ಯ ಕ್ರಮ, ವೈದ್ಯಕೀಯ ಕಾಲೇಜುಗಳ ಕಾರ್ಯಕ್ಷಮತೆ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತೆ. ಇದನ್ನೂ ಓದಿ: ಪೊಲೀಸ್ ಇನ್ಸ್ಪೆಕ್ಟರ್ ಹೃದಯಾಘಾತ ಪ್ರಕರಣ: ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ
ಮಹಿಳಾ ಸ್ವಸ್ಥ ಕೇಂದ್ರಗಳನ್ನು ತೆರೆಯಲು ಚಿಂತನೆ
438 ನಮ್ಮ ಕ್ಲಿನಿಕ್ ನಗರ ಪ್ರದೇಶದಲ್ಲಿ ಲೋಕಾರ್ಪಣೆಯಾಗಿದೆ. ಕೊಳಚೆ ಪ್ರದೇಶ ಬಡತನ ರೇಖೆಗಿಂತ ಕಡಿಮೆ ಇರುವವರು, ಮಧ್ಯಮ ವರ್ಗದವರು ವಾಸವಾಗಿರುವ ಕಡೆ ನಮ್ಮ ಕ್ಲಿನಿಕ್ ಮಾಡಲಾಗುತ್ತೆ. ನವೆಂಬರ್‌ನಲ್ಲಿ ಈ ಎಲ್ಲಾ ಕ್ಲಿನಿಕ್‌ಗಳು ಕೆಲಸ ಮಾಡಲಿವೆ. ಮಹಿಳಾ ಸ್ವಸ್ಥ ಕೇಂದ್ರಗಳನ್ನು ತೆರೆಯಲು ಚಿಂತನೆ ನಡೆದಿದೆ. ಮಹಿಳೆಯರ ಆರೋಗ್ಯ ಸಂಬಂಧ ತಜ್ಞರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಸಚಿವ ಡಾ ಸುಧಾಕರ್ ಮಾಹಿತಿ ನೀಡಿದರು.
ಶೇಕಡ 10 ರಿಂದ 15 ವೈದ್ಯರು ತಡವಾಗಿ ಬರುವುದು. ಸರಿಯಾಗಿ ಕೆಲಸ ಮಾಡದೇ ಇರುವುದು ಗಮನಕ್ಕೆ ಬಂದಿದೆ. ಖಾಸಗಿಯಾಗಿ ಪ್ರಾಕ್ಟೀಸ್ ಮಾಡಲು ನಮ್ಮ ವಿರೋಧವಿಲ್ಲ. ಆದರೆ ಸರ್ಕಾರಿ ಆಸ್ಪತ್ರೆ ಕೆಲಸ ಮುಗಿದ ನಂತರ ಮಾಡಲಿ. ಕೆಲಸ ಬಿಟ್ಟು ಹೋಗುವ ಆತಂಕ. ಅದು ಆ ಕಾಲ, ಈಗ ಕಾಲ ಬದಲಾಗಿದೆ. ತಜ್ಞರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ನೋಟಿಫಿಕೇಶನ್ ನೀಡಿದರೆ 15 ದಿನದಲ್ಲಿ ಹೊಸದಾಗಿ ನೇಮಕ ಮಾಡಬಹುದು. ಸದ್ಯ ಬಯೋಮೆಟ್ರಿಕ್ ಕಡ್ಡಾಯ ಮಾಡಲು ನಿರ್ಧರಿಸಿದ್ದೇವೆ. ಮುಂದಿನ ದಿನಗಳಲ್ಲಿ ಜಿಯೋ ಟ್ಯಾಗಿಂಗ್ ಸಹ ಜಾರಿ ಆಗಲಿದೆ. ವೈದ್ಯರು ಬಡವರ ಸಮಸ್ಯೆಗೆ ಸ್ಪಂದಿಸದಿದ್ದರೆ ಕ್ರಮ ಕೈಗೊಳ್ತೇವೆ ಎಂದು ಆರೋಗ್ಯ ಇಲಾಖೆ ಸಚಿವ ಡಾ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.
Published On - 2:07 pm, Fri, 28 October 22