ಧಿಡೀರ್ ಕುಸಿದ ಶಿವನ ಮೂರ್ತಿಯ ಗೋಪುರ: ಅಪಾಯದಿಂದ ಪಾರಾದ ಯುವಬ್ರಿಗೇಡ್ ಸ್ವಯಂಸೇವಕರು

| Updated By: ಗಂಗಾಧರ​ ಬ. ಸಾಬೋಜಿ

Updated on: May 10, 2022 | 10:48 AM

ಸುಮಾರು 20 ಕ್ಕೂ ಹೆಚ್ಚು ಯುವಕರ ತಂಡ ಎರಡು ದಿನಗಳಿಂದ ಸ್ವಚ್ಛತಾ ಕಾರ್ಯ ಮಾಡಿದ್ದು, ಗೋಪುರದ ಭಾಗದಲ್ಲೇ ಸ್ವಚ್ಛತಾ ಕಾರ್ಯ ಮುಗಿಸಿ ವಿಶ್ರಾಂತಿ ಪಡೆಯುವಾಗ ಗೋಪುರ ಕುಸಿದುಬಿದ್ದಿದೆ. ಗೋಪುರ ಬಿದ್ದ ಪರಿಣಾಮ ಶಿವನ ಮೂರ್ತಿ ಭಗ್ನಗೊಳಿಸಲಾಗಿದೆ. 

ಧಿಡೀರ್ ಕುಸಿದ ಶಿವನ ಮೂರ್ತಿಯ ಗೋಪುರ: ಅಪಾಯದಿಂದ ಪಾರಾದ ಯುವಬ್ರಿಗೇಡ್ ಸ್ವಯಂಸೇವಕರು
ಧಿಡೀರ್ ಕುಸಿದ ಶಿವನ ಮೂರ್ತಿಯ ಗೋಪುರ
Follow us on

ಮೈಸೂರು: ಪುರಾತನ ಕಲ್ಯಾಣಿಯಲ್ಲಿ ನಿರ್ಮಿಸಲಾಗಿದ್ದ ಶಿವನಮೂರ್ತಿಯ ಗೋಪುರ ಧಿಡೀರ್ ಕುಸಿದಿದ್ದು, ಭಾರಿ ಅನಾಹುತದಿಂದ ಯುವಬ್ರಿಗೇಡ್ ಸ್ವಯಂಸೇವಕರು ಅಪಾಯದಿಂದ ಪಾರಾಗಿರುವಂತಹ ಘಟನೆ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಹೂಳುವ ಸ್ಮಶಾನದಲ್ಲಿ ನಡೆದಿದೆ. ಕಲ್ಯಾಣಿಯನ್ನ ದುರಸ್ಥಿ ಮಾಡುವ ವೇಳೆ ಅವಘಡ ಸಂಭವಿಸಿದ್ದು, ಪ್ರವೇಶದ್ವಾರದಲ್ಲಿರುವ ಪುರಾತನ ಕಲ್ಯಾಣಿಯಾಗಿದ್ದು, ಸುಮಾರು ಮೂವತ್ತು ವರ್ಷಗಳ ಹಿಂದೆ ಕಲ್ಯಾಣಿಯ ಮಧ್ಯಭಾಗದಲ್ಲಿ ಶಿವನಮೂರ್ತಿಯ ಗೋಪುರ ನಿರ್ಮಾಣ ಮಾಡಲಾಗಿದೆ. ಸೂಕ್ತ ನಿರ್ವಹಣೆ ಇಲ್ಲದೆ ಹಾಳಗಿದ್ದ ಕಲ್ಯಾಣಿ ಗೋಪುರ ಶಿಥಿಲಗೊಂಡಿದೆ. ಸುಮಾರು 20 ಕ್ಕೂ ಹೆಚ್ಚು ಯುವಕರ ತಂಡ ಎರಡು ದಿನಗಳಿಂದ ಸ್ವಚ್ಛತಾ ಕಾರ್ಯ ಮಾಡಿದ್ದು, ಗೋಪುರದ ಭಾಗದಲ್ಲೇ ಸ್ವಚ್ಛತಾ ಕಾರ್ಯ ಮುಗಿಸಿ ವಿಶ್ರಾಂತಿ ಪಡೆಯುವಾಗ ಗೋಪುರ ಕುಸಿದುಬಿದ್ದಿದೆ. ಗೋಪುರ ಬಿದ್ದ ಪರಿಣಾಮ ಶಿವನ ಮೂರ್ತಿ ಭಗ್ನಗೊಳಿಸಲಾಗಿದೆ.

ಗಾಳಿ ಸಹಿತ ಮಳೆಗೆ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿ ಕುಸಿತ:

ಬೆಂಗಳೂರು: ಏಪ್ರಿಲ್ 08 ಸುರಿದ ಗಾಳಿ ಸಹಿತ ಮಳೆಗೆ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿ ಕುಸಿದುಬಿದ್ದಿದೆ. ಬೊಮ್ಮನಹಳ್ಳಿ ವಾರ್ಡ್ ವ್ಯಾಪ್ತಿಯ ಎಚ್ಎಸ್ಆರ್ ಲೇಔಟ್ನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನ ಗ್ಯಾಲರಿಯ ಮೇಲ್ಛಾವಣಿ ಕುಸಿದುಬಿದ್ದಿದೆ. ಹೀಗಾಗಿ ಆಪ್ ಕಾರ್ಯಕರ್ತರು ಸ್ಟೇಡಿಯಂ ಪರಿಸ್ಥಿತಿ ನೋಡಲು ಸ್ಥಳಕ್ಕೆ ಬಂದಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂ ಕಟ್ಟುವಾಗ ಕಳಪೆ ಕಾಮಗಾರಿ ಆಗಿದೆ ಎಂದು ಆರೋಪ ಮಾಡಿದ್ದಾರೆ. ಸ್ಟೇಡಿಯಂ ಕಟ್ಟಿ ಮೂರು ತಿಂಗಳು ಕಳೆದಿಲ್ಲ ಆಗಲೇ ಈ ರೀತಿಯಾಗಿ ಗಾಳಿಗೆ ಕುಸಿದು ಬಿದ್ದಿದೆ ಎಂದು ಆಪ್ ಪಕ್ಷ ಆರೋಪ ಮಾಡಿದೆ. ಆಗ ಅಲ್ಲಿದ್ದ ಸ್ಥಳೀಯರು ನೋಡಿ ಆಪ್ ಕಾರ್ಯಕರ್ತರ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಎರಡು ಗ್ಯಾಂಗ್ ನಡುವೆ ನೀನಾ ನಾನಾ ಎನ್ನುವ ಮಟ್ಟಿಗೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಮಧ್ಯ ಪ್ರವೇಶಿಸಿದ ಬಳಿಕವಷ್ಟೇ ಪರಿಸ್ಥಿತಿ ಕಂಟ್ರೋಲ್ಗೆ ಬಂದಿದೆ.

ಸುಮಾರು 50 ಕೋಟಿ ರು ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ 3.5 ಕೋಟಿ ರು ವೆಚ್ಚದ ಕಾಮಗಾರಿಯನ್ನು ಮಾರ್ಚ್ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಿದ್ದರು. ಆದ್ರೆ ನಿನ್ನೆ ಸಂಜೆ ಬೀಸಿದ ಬಿರುಗಾಳಿ ಮಳೆಗೆ ಕ್ರೀಡಾಂಗಣದ ಗ್ಯಾಲರಿ ಒಂದು ಭಾಗ ಧರೆಗುರುಳಿದ್ದರೆ, ಇನ್ನೊಂದು ಭಾಗ ಮುರಿದು ಬಿದ್ದಿದೆ. ಈ ಸ್ಟೇಡಿಯಂನ ವ್ಯಾಪ್ತಿಯಲ್ಲಿರುವ ಒಳಾಂಗಣ ಸ್ಟೇಡಿಯಂ ಸುಮಾರು ನಾಲ್ಕು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಬಿಬಿಎಂಪಿ ವತಿಯಿಂದ ನಿರ್ಮಾಣಗೊಳ್ಳುತ್ತಿರುವ ಕ್ರೀಡಾಂಗಣ ಮಳೆಗೆ ಹಾನಿಗೊಂಡಿದ್ದು, ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.