ಶೃಂಗೇರಿ ಶ್ರೀಗಳಿಗೆ ಅರಮನೆಗೆ ಪೂರ್ಣಕುಂಭ ಸ್ವಾಗತ, ದೀರ್ಘದಂಡ ನಮಸ್ಕಾರದೊಂದಿಗೆ ಪಾದಪೂಜೆ ಮಾಡಿದ ಯದುವೀರ ದಂಪತಿ
ಮೆರವಣಿಗೆಯಲ್ಲಿ ಅರಮನೆ ನಾದಸ್ವಾರ, ವೇದ ಮಂತ್ರ ಘೋಷಗಳು ಮೊಳಗಿದವು. ಮೈಸೂರು ರಾಜವಂಶಸ್ಥರಿಂದ ಸ್ವಾಮೀಜಿಗೆ ಪೂರ್ಣಕುಂಭ ಸ್ವಾಗತ ಮಾಡಲಾಗಿದ್ದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಸ್ವಾಮೀಜಿಗೆ ದೀರ್ಘದಂಡ ನಮಸ್ಕಾರ ಮಾಡಿದ್ರು.
ಮೈಸೂರು: ಮೈಸೂರು ಅರಮನೆಗೆ ಶೃಂಗೇರಿಯ ಕಿರಿಯ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ(Vidhushekara Bharathi Swamiji) ಆಗಮಿಸಿದ್ದಾರೆ. ಅರಮನೆ ಆವರಣಕ್ಕೆ ಆಗಮಿಸಿದ ವಿಧುಶೇಖರ ಭಾರತಿ ಸ್ವಾಮೀಜಿ ಅವರಿಗೆ ಮೈಸೂರು ಅರಮನೆಯಿಂದ ಸಾಂಪ್ರದಾಯಿಕ ಸ್ವಾಗತ ಕೋರಲಾಗಿದೆ. ಜಯಮಾರ್ತಾಂಡ ದ್ವಾರದಿಂದ ಕಲ್ಯಾಣ ಮಂಟಪದವರೆಗೆ ಬೆಳ್ಳಿ ಪಲ್ಲಕ್ಕಿಯಲ್ಲಿ ಸ್ವಾಮೀಜಿಯವರಿಗೆ ಮೆರವಣಿಗೆ ಮಾಡಲಾಗಿದೆ.
ಜೀವನದಲ್ಲಿ ಆಧುನಿಕತೆ ಎಷ್ಟೇ ಹಾಸುಹೊಕ್ಕಿದ್ದರು. ಜಗತ್ತೇ ಬದಲಾದರೂ ಅರಮನೆಯ ಆಚರಣೆ ಪರಂಪರೆ ಬದಲಾಗುವುದಿಲ್ಲ ಇದಕ್ಕೆ ಸಾಕ್ಷಿ ಮೈಸೂರು ಅರಮನೆಯಲ್ಲಿ ನಡೆದ ಅರ್ಥಪೂರ್ಣ ಗುರುಪೂಜಾ ಕಾರ್ಯಕ್ರಮ. ಇವತ್ತು ಮೈಸೂರು ಅರಮನೆಯಲ್ಲಿ ಹಬ್ಬದ ವಾತಾವರಣ ಮನೆಮಾಡಿತ್ತು. ಇದಕ್ಕೆ ಕಾರಣ ಶೃಂಗೇರಿ ಶಾರದಾಪೀಠದ ಕಿರಿಯ ಸ್ವಾಮಿಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ. ಹೌದು ಶ್ರೀಗಳು ಮೈಸೂರಿಗೆ ಆಗಮಿಸಿದ್ದರು. ಶ್ರೀಗಳ ಆಗಮನಕ್ಕಾಗಿ ಅರಮನೆಯಲ್ಲಿ ರಾಜ ಮನೆತನದಿಂದ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಯ್ತು.
ಅರಮನೆ ಜಯ ಮಾರ್ತಾಂಡ ದ್ವಾರದ ಬಳಿ ಗುರುಗಳ ಸ್ವಾಗತಕ್ಕೆ ಎಲ್ಲಾ ಸಿದ್ದತೆ ಮಾಡಲಾಗಿತ್ತು. ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ಅರಮನೆಗೆ ಕರೆದುಕೊಂಡು ಬರಲಾಯ್ತು. ವೇದ ಘೋಷಗಳ ಮೊಳಗುತ್ತಿದ್ದವು. ಅರಮನೆ ಕಲ್ಯಾಣಮಂಟಪದ ಬಳಿ ಯದುವಂಶದ ಪ್ರಮೋದ ದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಪತ್ನಿ ತ್ರಿಷಿಕಾ ಕುಮಾರಿ ಪುತ್ರ ಆದ್ಯವೀರ ಗುರುಗಳನ್ನು ಸ್ವಾಗತಿಸಿದರು. ಎಲ್ಲರೂ ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಸ್ವಾಗತಿಸಿದರು.
ತದನಂತರ ಗುರುಗಳು ಮೈಸೂರು ಅರಮನೆಯ ಕಲ್ಯಾಣ ಮಂಟಪಕ್ಕೆ ತೆರಳಿದರು ಅಲ್ಲಿ ವಿಶೇಷ ಪೂಜೆಗೆ ಎಲ್ಲ ವಸ್ತುಗಳನ್ನು ಮಾಡಿಕೊಳ್ಳಲಾಗಿತ್ತು ಸುಮಾರು 45 ನಿಮಿಷಗಳ ಕಾಲಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಗಳಿಗೆ ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಲಾಯ್ತು. ರಾಜ ಮನೆತನದವರು ಗುರುಗಳಿಗೆ ಗುರು ಮನೆಯ ಕಾಣಿಕೆ ನೀಡಿ ಗೌರವಿಸಿದರು. ಈ ವೇಳೆ ಯದುವಂಶದ ಕುಡಿ ಆದ್ಯವೀರ ತಾಯಿಯ ಬಳಿಯೇ ಕುಳಿತು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದದ್ದು ಎಲ್ಲರ ಗಮನಸೆಳೆಯಿತು.
ವರದಿ: ರಾಮ್, ಟಿವಿ9 ಮೈಸೂರು
Published On - 8:52 pm, Tue, 10 May 22