ಸುತ್ತೂರಿನಲ್ಲಿ ಕಳೆಗಟ್ಟಿದ ಸಂಭ್ರಮ: ಜಾತ್ರೆಯಾದ್ರೂ ಸಿಗುತ್ತೆ ವಿಜ್ಞಾನ, ಕೃಷಿ, ಶೈಕ್ಷಣಿಕ ಮಾಹಿತಿ

|

Updated on: Jan 22, 2020 | 11:55 AM

ಮೈಸೂರು: ರಾಶಿ ರಾಶಿಯಾಗಿ ಹಾಕಿರುವ ತರಕಾರಿ. ಆಡುಗೆ ಮಾಡುವುದರಲ್ಲಿ ಬ್ಯುಸಿಯಾಗಿರುವ ಆಡುಗೆ ಭಟ್ಟರು. ಕಣ್ಣಿಗೆ ಹಬ್ಬ ನೀಡುತ್ತಿರುವ ವಿವಿಧ ಕಲಾತಂಡಗಳ ವೈಭವ. ಎಲ್ಲೆಡೆ ಮನೆ ಮಾಡಿರುವ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಯ ಸಂಭ್ರಮ ಸಡಗರ. ಆರು ದಿನಗಳ ಕಾಲ ನಡೆಯುವ ಜಾತ್ರೆ: ಸುತ್ತೂರು ಕ್ಷೇತ್ರದಲ್ಲಿ ಪ್ರತಿವರ್ಷ ಸಡಗರ ಸಂಭ್ರಮದಿಂದ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ಬಾರಿ ಆರು ದಿನಗಳ ಕಾಲ ಜಾತ್ರೆ ನಡೆಯಲಿದೆ. ನಿನ್ನೆಯಿಂದ ಆರಂಭವಾದ ಜಾತ್ರೆ ಮಹೋತ್ಸವ ಈ ತಿಂಗಳ 26ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆ […]

ಸುತ್ತೂರಿನಲ್ಲಿ ಕಳೆಗಟ್ಟಿದ ಸಂಭ್ರಮ: ಜಾತ್ರೆಯಾದ್ರೂ ಸಿಗುತ್ತೆ ವಿಜ್ಞಾನ, ಕೃಷಿ, ಶೈಕ್ಷಣಿಕ ಮಾಹಿತಿ
Follow us on

ಮೈಸೂರು: ರಾಶಿ ರಾಶಿಯಾಗಿ ಹಾಕಿರುವ ತರಕಾರಿ. ಆಡುಗೆ ಮಾಡುವುದರಲ್ಲಿ ಬ್ಯುಸಿಯಾಗಿರುವ ಆಡುಗೆ ಭಟ್ಟರು. ಕಣ್ಣಿಗೆ ಹಬ್ಬ ನೀಡುತ್ತಿರುವ ವಿವಿಧ ಕಲಾತಂಡಗಳ ವೈಭವ. ಎಲ್ಲೆಡೆ ಮನೆ ಮಾಡಿರುವ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಯ ಸಂಭ್ರಮ ಸಡಗರ.

ಆರು ದಿನಗಳ ಕಾಲ ನಡೆಯುವ ಜಾತ್ರೆ:
ಸುತ್ತೂರು ಕ್ಷೇತ್ರದಲ್ಲಿ ಪ್ರತಿವರ್ಷ ಸಡಗರ ಸಂಭ್ರಮದಿಂದ ಜಾತ್ರಾ ಮಹೋತ್ಸವವನ್ನು ಆಚರಿಸಲಾಗುತ್ತದೆ. ಈ ಬಾರಿ ಆರು ದಿನಗಳ ಕಾಲ ಜಾತ್ರೆ ನಡೆಯಲಿದೆ. ನಿನ್ನೆಯಿಂದ ಆರಂಭವಾದ ಜಾತ್ರೆ ಮಹೋತ್ಸವ ಈ ತಿಂಗಳ 26ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಜಾತ್ರೆ ಎಂದರೆ ಸಾಮಾನ್ಯವಾಗಿ ಪೂಜೆ ಪುನಸ್ಕಾರ, ಮೆರವಣಿಗೆ, ರಥೋತ್ಸವ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಸುತ್ತೂರು ಜಾತ್ರೆಯಲ್ಲಿ ಮಾತ್ರ ಇದೆಲ್ಲವನ್ನು ಮೀರಿದ ಕೃಷಿ, ವಿಜ್ಞಾನ, ಶೈಕ್ಷಣಿಕ, ಆರೋಗ್ಯ ಮೇಳಗಳು ನಡೆಯುವುದನ್ನು ಕಾಣಬಹುದಾಗಿದೆ.

ಜಾತ್ರೆಯಲ್ಲಿ ದೇಸಿ ಆಟಗಳ ಸ್ಪರ್ಧೆ:
ಜಾತ್ರೆಗೆ ದೇಶದ ವಿವಿಧ ಭಾಗಗಳಿಂದ 10 ಲಕ್ಷಕ್ಕೂ ಹೆಚ್ಚು ಜನರು ಆಗಮಿಸುವ ನೀರಿಕ್ಷೆ ಇದೆ. ಮಹೋತ್ಸವವಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಅನ್ನ ಸಂತರ್ಪಣೆ ನಡೆಯುತ್ತಿದೆ. ಪ್ರತಿದಿನ ಅಂದಾಜು ಒಂದು ಲಕ್ಷ ಮಂದಿಗೆ ಅಡುಗೆ ತಯಾರಿಸಲಾಗುತ್ತಿದೆ. ಇದಕ್ಕಾಗಿ ನುರಿತ 300ಕ್ಕೂ ಹೆಚ್ಚು ಅಡುಗೆ ಭಟ್ಟರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರಿಂದ ಕತೃ ಗದ್ದುಗೆ ಅನುಜ್ಞೆ, ಮಹಾ ಸಂಕಲ್ಪಪೂರ್ವಕ ಮಹಾ ರುದ್ರಾಭಿಷೇಕದೊಂದಿಗೆ ಪೂಜಾ ಉತ್ಸವ ಆರಂಭವಾಗಿದೆ. ಮೊದಲ ದಿನವಾದ ನಿನ್ನೆ ಸೋಬಾನೆ ಪದ, ದೇಸಿ ಆಟಗಳ ಸ್ಪರ್ಧೆ, ವಿವಿಧ ಕಲಾ‌ತಂಡಗಳ ಕಲಾ‌ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.











Published On - 11:53 am, Wed, 22 January 20