ಮೈಸೂರು: ರಾಜಕೀಯ ದ್ವೇಷ ಮರೆತು ಮಾಜಿ ಸಿಎಂ ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪ ಮತ್ತು ಹೆಚ್.ವಿಶ್ವನಾಥ್ ಒಂದೇ ವೇದಿಕೆ ಹಂಚಿಕೊಂಡಿದ್ದಾರೆ. ಕೆ.ಆರ್.ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮೂವರೂ ಭಾಗಿಯಾಗಿದ್ದಾರೆ.
ಸಿದ್ದರಾಮಯ್ಯ ಅಕ್ಕಪಕ್ಕ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ಹೆಚ್.ವಿಶ್ವನಾಥ್ ಕುಳಿತಿದ್ದರು. ಮೂವರು ಅತ್ಯಂತ ಆತ್ಮೀಯವಾಗಿ ಕಾರ್ಯಕ್ರದ ವೇದಿಕೆಯಲ್ಲಿ ಮಾತನಾಡಿಕೊಂಡಿದ್ದಾರೆ. ಈ ವೇಳೆ ತಮಗೆ ನೀಡಿದ ಬಿಸ್ಕೆಟ್ ಅನ್ನು ಈಶ್ವರಪ್ಪ, ವಿಶ್ವನಾಥ್ಗೂ ಸಿದ್ದರಾಮಯ್ಯ ನೀಡಿದರು. ರಾಯಣ್ಣ ಪ್ರತಿಮೆ ಅನಾವರಣ ನಂತರ ಸಿದ್ದರಾಮಯ್ಯ, ಈಶ್ವರಪ್ಪ ಒಂದೇ ಕಾರಿನಲ್ಲಿ ತೆರಳಿದ್ದಾರೆ. ಇವರು ಕಾರ್ಯಕ್ರಮಕ್ಕೂ ಸಹ ಒಂದೇ ಕಾರಿನಲ್ಲಿ ಆಗಮಿಸಿದ್ದರು.
ಸಿದ್ದರಾಮಯ್ಯಗೆ ಸೆಲ್ಫಿ ಕಾಟ:
ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಜೊತೆ ಸೆಲ್ಫಿಗಾಗಿ ಸುಮಾರು 20ಕ್ಕೂ ಹೆಚ್ಚು ಯುವತಿಯರು ಮುಗಿಬಿದ್ದಿದ್ದಾರೆ. ಈ ವೇಳೆ ಅಭಿಮಾನಿಗಳ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಸೆಲ್ಫಿಗೆ ಸಖತ್ ಪೋಸ್ ನೀಡಿದ್ದಾರೆ.
Published On - 3:45 pm, Sun, 19 January 20