ಸೀಮೆಸುಣ್ಣ ಮುರಿದಿದ್ದಕ್ಕೆ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ, ವಿದ್ಯಾರ್ಥಿ ಅಮೃತ್​ ಕೈ ಕಟ್

ಕ್ಷುಲ್ಲಕ ಕಾರಣಕ್ಕೆ ಶಿಕ್ಷಕ, ವಿದ್ಯಾರ್ಥಿಯನ್ನು ಥಳಿಸಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಶಾಂತಿಪುರದಲ್ಲಿ ನಡೆದಿದೆ.

ಸೀಮೆಸುಣ್ಣ ಮುರಿದಿದ್ದಕ್ಕೆ ವಿದ್ಯಾರ್ಥಿಯನ್ನು ಥಳಿಸಿದ ಶಿಕ್ಷಕ, ವಿದ್ಯಾರ್ಥಿ ಅಮೃತ್​ ಕೈ ಕಟ್
ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಹಲ್ಲೆ
Edited By:

Updated on: Nov 26, 2022 | 8:29 AM

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಶಿಕ್ಷಕ (Teacher), ವಿದ್ಯಾರ್ಥಿಯನ್ನು (Student) ಥಳಿಸಿರುವ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ (HD Kote) ತಾಲೂಕಿನ ಶಾಂತಿಪುರದಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾರ್ಥಿ ಅಮೃತ್ ಕೈಗೆ ಗಂಭೀರ ಗಾಯವಾಗಿದೆ. ಅಮೃತ್​ ಕೊಠಡಿಯಲ್ಲಿ ಸೀಮೆಸುಣ್ಣ ಮುರಿದು ಆಟವಾಡುತ್ತಿದ್ದ ಎಂಬ ಕಾರಣಕ್ಕೆ ಶಿಕ್ಷಕ ಸಿದ್ದರಾಜು ಸ್ಟೀಲ್ ಸ್ಕೇಲ್​​ನಿಂದ ಹೊಡೆದಿದ್ದಾನೆ. ಇದರಿಂದ ವಿದ್ಯಾರ್ಥಿ ಅಮೃತ್​ ಕೈ ಕಟ್​ ಆಗಿದೆ. ಇದನ್ನು ಕಂಡ ಶಿಕ್ಷಕ ಸಿದ್ದರಾಜು, ಅಮೃತ್​ ಪೋಷಕರಿಗೆ ಕಟರ್​ನಿಂದ ಕೈಕಟ್ ಮಾಡಿಕೊಂಡಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ತಾಲೂಕು ಶಿಕ್ಷಣಾಧಿಕಾರಿ ಉದಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್.ಡಿ.ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್  ಮಾಡಿ

Published On - 8:24 am, Sat, 26 November 22