ನೀರು ಕುಡಿಯುತ್ತಿದ್ದ ಕಾಡೆಮ್ಮೆ ಮೇಲೆ ದಾಳಿ ಮಾಡಿದ ಹುಲಿ; ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆ
ನೀರು ಕುಡಿಯುತ್ತಿದ್ದ ಕಾಡೆಮ್ಮೆ ಮೇಲೆ ಹುಲಿ ದಾಳಿ ಮಾಡಿದೆ. ಹುಲಿ ಹತ್ತಿರ ಬಂದ ತಕ್ಷಣ ಅಲ್ಲಿಂದ ಕಾಡೆಮ್ಮೆ ಓಡಿ ಹೋಗಿದ್ದು, ಹುಲಿಯ ಬೇಟೆಯ ದೃಶ್ಯ ಕಂಡು ಪ್ರವಾಸಿಗರು ಅಚ್ಚರಿಗೊಂಡಿದ್ದಾರೆ.
ಮೈಸೂರು: ಕಾಡು ಎಮ್ಮೆಯನ್ನು ಹುಲಿ (Tiger) ಅಟ್ಟಿಸಿಕೊಂಡು ಹೋದ ಅಪರೂಪದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೈಸೂರು ಜಿಲ್ಲೆಯ ನಾಗರಹೊಳೆ ಅರಣ್ಯ ಪ್ರದೇಶದಲ್ಲಿನ ಹುಣಸೂರು ಬಳಿ ಸಫಾರಿಗೆ (Safari) ಹೋಗಿದ್ದ ಪ್ರವಾಸಿಗರು ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ನೀರು ಕುಡಿಯುತ್ತಿದ್ದ ಕಾಡೆಮ್ಮೆ ಮೇಲೆ ಹುಲಿ ದಾಳಿ ಮಾಡಿದೆ. ಹುಲಿ ಹತ್ತಿರ ಬಂದ ತಕ್ಷಣ ಅಲ್ಲಿಂದ ಕಾಡೆಮ್ಮೆ ಓಡಿ ಹೋಗಿದ್ದು, ಹುಲಿಯ ಬೇಟೆಯ ದೃಶ್ಯ ಕಂಡು ಪ್ರವಾಸಿಗರು (Tourist) ಅಚ್ಚರಿಗೊಂಡಿದ್ದಾರೆ.
ಗದಗ: ಹಮ್ಮಗಿ ಬ್ಯಾರೇಜ್ ಬಳಿ ಬೃಹತ್ ಗಾತ್ರದ ಮೊಸಳೆ ಪತ್ತೆ
ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಮ್ಮಗಿ ಗ್ರಾಮದ ಬ್ಯಾರೇಜ್ ಬಳಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ತುಂಗಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಹಮ್ಮಗಿ ಬ್ಯಾರೇಜ್ ಬಳಿ ಮೊಸಳೆ ಕಾಣಿಸಿಕೊಂಡಿದೆ. ಮೊಸಳೆಯನ್ನು ಕಂಡ ಗ್ರಾಮಸ್ಥರು ಬ್ಯಾರೇಜ್ ನೀರಿಗೆ ಓಡಿಸಿದ್ದಾರೆ. ಸುಮಾರು ಒಂದು ಕ್ವಿಂಟಲ್ ಗಾತ್ರದ ಮೊಸಳೆ ನೋಡಿ ಜನ ಕಂಗಾಲಾಗಿದ್ದಾರೆ. ಎರಡು ದಿನಗಳ ಹಿಂದೆ ಇದೇ ಜಾಗದಲ್ಲಿ ಮೊಸಳೆ ಮರಿ ಪ್ರತ್ಯಕ್ಷವಾಗಿತ್ತು. ಈಗ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ಇಷ್ಟಾದರೂ ಮೊಸಳೆ ಪ್ರತ್ಯಕ್ಷ ಬಗ್ಗೆ ಮಾಹಿತಿ ಇಲ್ಲ ಎಂದು ಮುಂಡರಗಿ ಆರ್ಎಫ್ಓ ತಂಡ ತಿಳಿಸಿದೆ.
ಮೈಸೂರು: ಸೋಲಾರ್ ತಂತಿಗೆ ಸಿಲುಕಿ ರಾತ್ರಿಯಿಡೀ ನರಳಾಡಿದ ಚಿರತೆ; ಅರಣ್ಯಾಧಿಕಾರಿಗಳಿಂದ ರಕ್ಷಣೆ
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಜಾಲಹಳ್ಳಿ ಗ್ರಾಮದ ಬಳಿ ಜಮೀನಿಗೆ ಅಳವಡಿಸಲಾದ ಸೋಲಾರ್ ತಂತಿಗೆ ಸಿಲುಕಿ ರಾತ್ರಿಯಿಡೀ ಚಿರತೆ ನರಳಾಡಿದೆ. ಬಳಿಕ ವಿಷಯ ತಿಳಿದ ಅರಣ್ಯಾಧಿಕಾರಿಗಳು ಚಿರತೆಯನ್ನು ರಕ್ಷಿಸಿದ್ದಾರೆ. ಸದ್ಯ ಚಿರತೆಗೆ ಪ್ರಾಥಮಿಕ ಚಿಕಿತ್ಸೆ ನೀಡಿರುವ ಅರಣ್ಯಕ್ಕೆ ಇಳಾಖೆ ಅಧಿಕಾರಿಗಳು ಬಳಿಕ ಅರಣ್ಯಕ್ಕೆ ಬಿಡಲಿದ್ದಾರೆ. ಹೆಡಿಯಾಲ ಅರಣ್ಯ ಇಲಾಖೆ ಎಸಿಎಫ್ ರವಿಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಬಾಳೆ ತೋಟಕ್ಕೆ ಕಾಡುಪ್ರಾಣಿಗಳ ದಾಳಿಯಿಂದ ರಕ್ಷಿಸಲು ಅಳವಡಿಸಿದ್ದ ಸೋಲಾರ್ ತಂತಿಗೆ ಚಿರತೆ ಸಿಲುಕಿಕೊಂಡಿತ್ತು. ಚಿರತೆಗೆ ಅರವಳಿಕೆ ಚುಚ್ಚುಮದ್ದು ನೀಡಿ ರಕ್ಷಣೆ ಮಾಡಲಾಗಿದೆ.
ಇದನ್ನೂ ಓದಿ: Tiger attack: ಹುಲಿ ದಾಳಿಗೆ ರೈತ ಬಲಿ, ಕಾಡಾನೆ ದಾಳಿಯಿಂದ ವೃದ್ಧನಿಗೆ ಗಂಭೀರ ಗಾಯ
Published On - 3:30 pm, Sun, 23 January 22