ನಂಜನಗೂಡು ಶ್ರೀಕಂಠೇಶ್ವರನ ಹುಂಡಿ ಹಣ ಏಣಿಕೆ; ಎರಡು ತಿಂಗಳಲ್ಲಿ 2 ಕೋಟಿ ರೂ. ಹಣ ಸಂಗ್ರಹ

| Updated By: preethi shettigar

Updated on: Feb 26, 2022 | 2:00 PM

ವಿದೇಶಿ ಭಕ್ತರಿಂದ ನಂಜುಂಡನಿಗೆ ಕಾಣಿಕೆ ಅರ್ಪಣೆ ಮಾಡಲಾಗಿದ್ದು, 15 ವಿದೇಶಿ ಕರೆನ್ಸಿ ಹುಂಡಿಯಲ್ಲಿ ಸಂಗ್ರಹವಾಗಿದೆ. ಒಟ್ಟಾರೆ ಕೊರೊನಾ ಮುಕ್ತವಾದ ನಂತರ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನಲೆ, ಹುಂಡಿ ಕಾಣಿಕೆಯಲ್ಲೂ ಹೆಚ್ಚು ಹಣ ಸಂಗ್ರಹವಾಗಿದೆ.

ನಂಜನಗೂಡು ಶ್ರೀಕಂಠೇಶ್ವರನ ಹುಂಡಿ ಹಣ ಏಣಿಕೆ; ಎರಡು ತಿಂಗಳಲ್ಲಿ 2 ಕೋಟಿ ರೂ. ಹಣ ಸಂಗ್ರಹ
ನಂಜನಗೂಡು ಶ್ರೀಕಂಠೇಶ್ವರನ ಹುಂಡಿ ಹಣ ಏಣಿಕೆ ಕಾರ್ಯ
Follow us on

ಮೈಸೂರು: ದಕ್ಷಿಣಕಾಶಿ ನಂಜನಗೂಡಿನ ಶ್ರೀಕಂಠೇಶ್ವರನ(Nanjanagudu Srikanteshwara) ಹುಂಡಿ ಹಣ ಏಣಿಕೆ ಕಾರ್ಯ ನೆರವೇರಿದ್ದು, ಎರಡು ತಿಂಗಳಲ್ಲಿ 2 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಭಕ್ತರಿಂದ ಭಾರಿ ಕಾಣಿಕೆ ಬಂದಿದ್ದು, 2,04,08,923 ಕೋಟಿಗೂ ಹೆಚ್ಚು ಹಣ(Money) ಸಂಗ್ರಹವಾಗಿದೆ. 25 ಹುಂಡಿಯಲ್ಲಿ 2,04,08,923 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ. ಬ್ಯಾಂಕ್ ಸಿಬ್ಬಂದಿ ಸೇರಿದಂತೆ ಸುಮಾರು 40 ಕ್ಕೂ ಹೆಚ್ಚು ಜನರು ಹುಂಡಿ ಹಣ ಎಣಿಕೆ(Hundi collection) ಮಾಡಿದ್ದಾರೆ. 120 ಗ್ರಾಂ ಚಿನ್ನ, 5 ಕೆಜಿ 600 ಗ್ರಾಂ ಬೆಳ್ಳಿ ಹುಂಡಿಯಲ್ಲಿ ಸಂಗ್ರವಾಗಿದ್ದು, ನಿಷೇಧಿತ ನೋಟುಗಳ ಕಾಣಿಕೆ ಮುಂದುವರೆದಿದೆ.

ಒಟ್ಟು 28,500 ರೂ. ಮೌಲ್ಯದ ನಿಷೇಧಿತ ನೋಟುಗಳ ಕಾಣಿಕೆ ಸಂಗ್ರಹಬವಾಗಿದೆ. 1000 ರೂ. ಮುಖಬೆಲೆಯ 5 ನೋಟುಗಳು 500 ರೂ. ಮುಖಬೆಲೆಯ 47 ನೋಟುಗಳು ಸಂಗ್ರವಾಗಿದೆ. ಇನ್ನೂ ವಿದೇಶಿ ಭಕ್ತರಿಂದ ನಂಜುಂಡನಿಗೆ ಕಾಣಿಕೆ ಅರ್ಪಣೆ ಮಾಡಲಾಗಿದ್ದು, 15 ವಿದೇಶಿ ಕರೆನ್ಸಿ ಹುಂಡಿಯಲ್ಲಿ ಸಂಗ್ರಹವಾಗಿದೆ. ಒಟ್ಟಾರೆ ಕೊರೊನಾ ಮುಕ್ತವಾದ ನಂತರ ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನಲೆ, ಹುಂಡಿ ಕಾಣಿಕೆಯಲ್ಲೂ ಹೆಚ್ಚು ಹಣ ಸಂಗ್ರಹವಾಗಿದೆ.

ರಾಯಚೂರು: ಶ್ರೀ ಅಂಬಾದೇವಿ ದೇವಸ್ಥಾನದ ಹುಂಡಿ ಹಣ ಏಣಿಕೆ; ಮೂರೇ ತಿಂಗಳಲ್ಲಿ 38 ಲಕ್ಷ ರೂಪಾಯಿ ಹಣ ಜಮೆ

ಶ್ರೀ ಅಂಬಾದೇವಿ ದೇವಸ್ಥಾನದ ಹುಂಡಿ ಹಣ ಏಣಿಕೆ ಕಾರ್ಯ ನಡೆದಿದೆ. ಮೂರೇ ತಿಂಗಳಲ್ಲಿ ಶ್ರೀ ಅಂಬಾದೇವಿ ದೇವಸ್ಥಾನದ ಹುಂಡಿಯಲ್ಲಿ 38 ಲಕ್ಷ ರೂಪಾಯಿ ಹಣ ಜಮೆಯಾಗಿದೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿರುವ ಶ್ರೀ ಅಂಬಾದೇವಿ ದೇವಸ್ಥಾನದ ಆಡಳಿತ ವರ್ಗ ಹಾಗೂ ಅಧಿಕಾರಿಗಳ ನೇತೃತ್ವದಲ್ಲಿ ಹುಂಡಿ ಹಣ ಏಣಿಕೆ ಮಾಡಲಾಗಿದೆ. 2021 ನವೆಂಬರ್​ನಿಂದ 2022 ಫೆಬ್ರವರಿ 23 ರ ವರೆಗಿನ ಹುಂಡಿ‌ ಹಣ ಏಣಿಕೆ ಮಾಡಲಾಗಿದೆ. ಮೂರು ತಿಂಗಳಲ್ಲಿ ಒಟ್ಟು 38,12,236 ರೂಪಾಯಿ ಹಣ ಹುಂಡಿಗಳಲ್ಲಿ ಜಮೆಯಾಗಿದೆ.

ಇದನ್ನೂ ಓದಿ:

Doddaballapur: ದೊಡ್ಡಬಳ್ಳಾಪುರದಲ್ಲಿ ದೇವಾಲಯಕ್ಕೆ ಬೀಗ ಹಾಕಿ ಪೂಜಾರಿ ಪರಾರಿ! ಕಾರಣವೇನು?

Lord Ganesha: ಈ ಗಣಪತಿ ದೇವಾಲಯಗಳಿಗೆ ಭೇಟಿ ನೀಡಿ ಗಣೇಶನ ದರ್ಶನ ಮಾಡಿದ್ರೆ ನಿಮ್ಮ ದುಃಖ ನಿವಾರಣೆಯಾಗಿ ಇಷ್ಟಾರ್ಥಗಳು ಈಡೇರುತ್ತವೆ

Published On - 9:12 am, Sat, 26 February 22