ಮೈಸೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ; ಒಂದೇ ದಿನ ಬರೊಬ್ಬರಿ 3.43 ಲಕ್ಷ ರೂ. ದಂಡ ಸಂಗ್ರಹ
ಮೈಸೂರು ಪೊಲೀಸರಿಂದ ಮುಂದುವರಿದ ವಿಶೇಷ ಕಾರ್ಯಾಚರಣೆ. ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆ 695 ಪ್ರಕರಣ ದಾಖಲಿಸಿ, ನಿಯಮ ಉಲ್ಲಂಘಿಸಿದ ಸವಾರರಿಂದ 3.43 ಲಕ್ಷ ರೂ. ದಂಡ ಸಂಗ್ರಹ ಮಾಡುವ ಮೂಲಕ 41 ವಾಹನಗಳನ್ನು ವಶಕ್ಕೆ ಪಡೆದ ಮಂಡಿ ಠಾಣೆ ಪೊಲೀಸರು.
ಮೈಸೂರು: ನಗರದಲ್ಲಿ ನಿನ್ನೆ(ಡಿ.1) ಸ್ವತಃ ರಸ್ತೆಗಿಳಿದಿದ್ದ ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಅವರು ವಿಶೇಷ ಕಾರ್ಯಾಚರಣೆ ಮಾಡುವ ಮೂಲಕ ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಒಂದೇ ದಿನದಲ್ಲಿ 695 ಪ್ರಕರಣ ದಾಖಲು ಮಾಡಿ 41 ವಾಹನಗಳನ್ನು ವಶಕ್ಕೆ ಪಡೆಯುವ ಮೂಲಕ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ಬರೊಬ್ಬರಿ 3.43 ಲಕ್ಷ ರೂ. ದಂಡ ಸಂಗ್ರಹ ಮಾಡಿದ್ದಾರೆ ಮಂಡಿ ಠಾಣೆ ಪೊಲೀಸರು.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ