ದ್ವಿಚಕ್ರ ವಾಹನ ಕದಿಯುತ್ತಿದ್ದ ಇಬ್ಬರ ಬಂಧನ: 5 ಲಕ್ಷ ರೂ. ಮೌಲ್ಯದ 9 ದ್ವಿಚಕ್ರ ವಾಹನಗಳು ವಶ

ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದ ಆರೋಪಿ ವಿರುದ್ಧ ಎಫ್​​ಐಆರ್​ ದಾಖಲು ಮಾಡಲಾಗಿದೆ. ಜು.3ರಂದು ಸೈಕಲ್​ ಜಾಥಾ ಹಾಗೈ ಮ್ಯಾರಥಾನ್​ ಬಂದಿದ್ದ ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದ.

ದ್ವಿಚಕ್ರ ವಾಹನ ಕದಿಯುತ್ತಿದ್ದ ಇಬ್ಬರ ಬಂಧನ: 5 ಲಕ್ಷ ರೂ. ಮೌಲ್ಯದ 9 ದ್ವಿಚಕ್ರ ವಾಹನಗಳು ವಶ
ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 06, 2022 | 8:46 AM

ಮೈಸೂರು: ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 5 ಲಕ್ಷ ರೂಪಾಯಿ ಮೌಲ್ಯದ 9 ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆದಿದ್ದಾರೆ. ನಗರದ ಕೃಷ್ಣರಾಜ ಠಾಣಾ ಪೊಲೀಸರ ಕಾರ್ಯಾಚರಣೆ ಮಾಡಿ, ನಜರ್‌ ಬಾದ್ 6, ದೇವರಾಜ 1, ಲಷ್ಕರ್ ಠಾಣೆಯ 1, ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಪತ್ತೆಯಾಗಿದೆ. ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹರ್ಷಾ ಹತ್ಯೆ ಆರೋಪಿಗಳಿಂದ ಜೈಲಿನಲ್ಲಿ ಮೊಬೈಲ್ ಬಳಕೆ; ಅಧಿಕಾರಿಗಳಿಂದ ಪರಿಶೀಲನೆ

ಬೆಂಗಳೂರು: ಹರ್ಷಾ ಹತ್ಯೆ ಆರೋಪಿಗಳಿಂದ ಜೈಲಿನಲ್ಲಿ ಮೊಬೈಲ್ ಬಳಕೆ ಪ್ರಕರಣ ಹಿನ್ನೆಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದೆ. ನೂತನ ಚೀಫ್ ಸೂಪರಿಂಟೆಂಡೆಂಟ್ ಪಿ.ಎಸ್.ರಮೇಶ್ ನೇತೃತ್ವದಲ್ಲಿ ಪರಿಶೀಲನೆ ಮಾಡಿದ್ದು, 900 ವಿಚಾರಣಾಧೀನ, 330 ಹೈ ಸೆಕ್ಯೂರಿಟಿ ಖೈದಿಗಳಿರುವ ಸೆಲ್ ತಪಾಸಣೆ ಮಾಡಲಾಗಿದೆ. ಜೈಲಿನಲ್ಲಿ ಮೆಮೊರಿ ಕಾರ್ಡ್ಸ್, ಸಿಮ್ ಕಾರ್ಡ್ಸ್, ಪೆನ್ ಡ್ರೈವ್ಸ್, ಅಲ್ಯೂಮಿನಿಯಂ ಪಾತ್ರೆ ಬಳಸಿ ತಯಾರಿಸಿದ 4 ಚಾಕು ವೈರ್​ಗಳನ್ನು ಜಪ್ತಿ ಮಾಡಲಾಗಿದೆ. ಹರ್ಷಾ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಠಾಣೆಯಲ್ಲಿ‌ 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ; ನಮ್ ಅಣ್ಣಂಗೆ ಇಷ್ಟು ಫ್ಯಾನ್ಸ್ ಇದಾರೆ ಅಂತಾ ಇವಾಗ ಗೊತ್ತಾಯ್ತು; ಶಾಸಕ ಜಮೀರ್ ಅಹ್ಮದ್ ಸಹೋದರ ಹೇಳಿಕೆ

ಯುವತಿಯರ ಜೊತೆ ಅನುಚಿತ ವರ್ತನೆ: ಎಫ್​​ಐಆರ್​ ದಾಖಲು

ಬೆಂಗಳೂರು: ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದ ಆರೋಪಿ ವಿರುದ್ಧ ಎಫ್​​ಐಆರ್​ ದಾಖಲು ಮಾಡಲಾಗಿದೆ. ಜು.3ರಂದು ಸೈಕಲ್​ ಜಾಥಾ ಹಾಗೈ ಮ್ಯಾರಥಾನ್​ ಬಂದಿದ್ದ ಯುವತಿಯರ ಜೊತೆ ಅನುಚಿತವಾಗಿ ವರ್ತಿಸಿದ್ದ. ಸದಾಶಿವನಗರ ಮತ್ತು ವೈಯಾಲಿಕಾವಲ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆರೋಪಿ ವಿರುದ್ಧ ಸದಾಶಿವನಗರ, ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ.

ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಆರೋಪಿ ಬಂಧನ:

ಬೆಂಗಳೂರು: ವೈಯಾಲಿಕಾವಲ್ ಠಾಣಾ ಪೊಲೀಸರ ಕಾರ್ಯಾಚರಣೆಯಿಂದ ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ಆರೋಪಿ ಮೋಹನ್ ರಾಜ್​ನನ್ನ ಬಂಧಿಸಲಾಗಿದೆ. ಪ್ಯಾಲೇಸ್ ಗುಟ್ಟಹಳ್ಳಿ ಬಳಿ ಮೋಹನ್​ ಅನುಮಾನಾಸ್ಪದ ಸಂಚರಿಸಿದ್ದು, ವಶಕ್ಕೆ ಪಡೆದು ವಿಚಾರಿಸಿದಾಗ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ. ಬಂಧಿತನಿಂದ 3 ಲಕ್ಷ ಮೌಲ್ಯದ 5 ದ್ವಿಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ. ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: Jr NTR: ರಸ್ತೆ ಅಪಘಾತದಲ್ಲಿ ಜ್ಯೂ. ಎನ್​ಟಿಆರ್​ ಅಭಿಮಾನಿ ನಿಧನ; ಸ್ಟಾರ್​ ನಟನ ಪ್ರಾರ್ಥನೆಯೂ ಫಲಿಸಲಿಲ್ಲ