ನಮ್ ಅಣ್ಣಂಗೆ ಇಷ್ಟು ಫ್ಯಾನ್ಸ್ ಇದಾರೆ ಅಂತಾ ಇವಾಗ ಗೊತ್ತಾಯ್ತು; ಶಾಸಕ ಜಮೀರ್ ಅಹ್ಮದ್ ಸಹೋದರ ಹೇಳಿಕೆ
ಶಾಸಕನ ಮನೆ ಮೇಲೆ ದಾಳಿ ನಡೆಸಿದ್ದಕ್ಕೆ ಬೆಂಬಲಿಗರು ಪ್ರತಿಭಟನೆ ಮಾಡಿದ್ದರು. ಅದರಲ್ಲೂ ಯುವಕನೊಬ್ಬ ದಾಳಿ ಖಂಡಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
ಬೆಂಗಳೂರು: ನಿನ್ನೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ (Zameer Ahmed) ಮನೆ, ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು (ACB Officials) ದಾಳಿ ನಡೆಸಿದ್ದರು. ನಿನ್ನೆ (ಜುಲೈ 5) ಮುಂಜಾನೆ 3 ಗಂಟೆ ಸುಮಾರಿಗೆ ಆಗಮಿಸಿದ್ದ ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ಕೊಂಡ್ಯೊಯ್ದಿದ್ದಾರೆ. ಶಾಸಕನ ಮನೆ ಮೇಲೆ ದಾಳಿ ನಡೆಸಿದ್ದಕ್ಕೆ ಬೆಂಬಲಿಗರು ಪ್ರತಿಭಟನೆ ಮಾಡಿದ್ದರು. ಅದರಲ್ಲೂ ಯುವಕನೊಬ್ಬ ದಾಳಿ ಖಂಡಿಸಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಮೀರ್ ಅಹ್ಮದ್ ಸಹೋದರ ಶಕೀಲ್ ಅಹ್ಮದ್, ನಮ್ ಅಣ್ಣಂಗೆ ಇಷ್ಟು ಫ್ಯಾನ್ಸ್ ಇದಾರೆ ಅಂತಾ ಇವಾಗ ಗೊತ್ತಾಗಿದೆ. ಈ ರೀತಿ ಆತ್ಮಹತ್ಯೆಗೆ ಯತ್ನಿಸುವುದು ಸರಿಯಲ್ಲ. ಅವರ ಪ್ರೀತಿಗೆ ಚಿರಋಣಿ. ಆದರೆ ಯಾರೂ ಈ ರೀತಿ ಮಾಡಬೇಡಿ. ಈ ಮಾದರಿ ಪ್ರೀತಿ ಬೇಡ ಎಂದರು.
ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅವರಿಗೆ ಏನೇನು ಬೇಕು ದಾಖಲೆ ಎಲ್ಲಾ ತೆಗೆದುಕೊಂಡು ಹೋಗಿದ್ದಾರೆ. ಇಡಿ ಅಧಿಕಾರಿಗಳು ನಮ್ಮನ್ನ ಕಳಿಸಿದ್ದಾರೆ ಅಂತಾ ಹೇಳಿದ್ದರು. ಕೆಲವೊಂದು ಡಾಕ್ಯುಮೆಂಟ್ಗಳನ್ನ ಕೇಳಿದ್ದರು. ಅವರು ಕೇಳಿದ್ದ ಎಲ್ಲವನ್ನೂ ಕೊಟ್ಟಿದೀವಿ. ಇಡಿ ಅವರು ಏನೇನು ತಗೊಂಡಿದ್ದರು ಅದೇ ದಾಖಲೆಗಳನ್ನ ಪಡೆದಿದ್ದಾರೆ ಎಂದು ಶಕೀಲ್ ಅಹ್ಮದ್ ತಿಳಿಸಿದ್ದಾರೆ.
ಇದನ್ನೂ ಓದಿ: PM Special Scheme: ಪಿಎಂ ಸ್ಪೆಷಲ್ ಯೋಜನೆ; ವೃದ್ಧರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೌಲಭ್ಯ ನೀಡಲು ಸರ್ಕಾರ ಚಿಂತನೆ
ಇದು ರಾಜಕೀಯ ಉದ್ದೇಶ: ಜಮೀರ್ ಅವರ ಬಳಿ ಗನ್ ಇದೆ ಲೈಸೆನ್ಸ್ ಗನ್ ಇದೆ. ಹಾಗಾಗಿ ಬುಲೆಟ್ ಸಿಕ್ಕಿದೆ. ಲೈಸೆನ್ಸ್ ಇರುವ ಒಂದು ಗನ್ ಇದೆ. ಎಸಿಬಿ ಅವ್ರು ತುಂಬಾ ಒಳ್ಳೆಯವರು. ಕೋ ಆಪರೇಟ್ ಮಾಡಿದ್ದೇವೆ. ಸೇಲ್ ಡೀಡ್ ಅಗ್ರಿಮೆಂಟ್ ದಾಖಲೆಗಳನ್ನ ಪಡೆದುಕೊಂಡಿದ್ದಾರೆ. ಇದರ ಹಿಂದೆ ರಾಜಕೀಯ ಉದ್ದೇಶವಿದೆ. ಮನೆ ಪೇಪರ್ಸ್, ಇನ್ ಕಮ್‌ಟ್ಯಾಕ್ಸ್ ಪೇಪರ್ಸ್ ತೆಗೆದುಕೊಂಡು ಹೋಗಿದ್ದಾರೆ. ಬ್ಯಾಂಕ್ ಮಾಹಿತಿ ತೆಗೆದುಕೊಂಡು ಹೋಗಿದ್ದಾರೆ. ವಿಚಾರಣೆಗೆ ಬರುವುದಕ್ಕೆ ಹೇಳಿಲ್ಲ. ವಿಚಾರಣೆಗೆ ಕರೆದರೆ ಹೋಗುತ್ತೇವೆ ಎಂದರು.
ಇದನ್ನೂ ಓದಿ: Samantha: ಸಮಂತಾ-ನಾಗ ಚೈತನ್ಯ ವಿಚ್ಛೇದನಕ್ಕೆ ಅಸಲಿ ಕಾರಣ ಬಹಿರಂಗ ಆಗುವ ಸಮಯ ಬಂತಾ? ಹೆಚ್ಚಿತು ಕೌತುಕ
Published On - 8:35 am, Wed, 6 July 22