NPA ಲಿಸ್ಟ್​ನಲ್ಲಿರುವ ಬ್ಯಾಂಕ್ ಖಾತೆ ಟಾರ್ಗೆಟ್ ಮಾಡಿ ವಂಚನೆ: ಕೇರಳ ಮೂಲದ ಇಬ್ಬರ ಬಂಧನ

ನಂಬಿ ಬಂದವರಿಂದ ಲಕ್ಷಾಂತರ ಹಣ ಪಡೆದು ವಂಚನೆ ಮಾಡುತ್ತಿದ್ದರು. ಸತೀಶನ್ ಎಂಬುವವರಿಗೆ ಆರೋಪಿಗಳು 82 ಲಕ್ಷ ವಂಚಿಸಿದ್ದರು. ನಂತರ ಲೋನ್​ನ ಕಂತನ್ನು ಸರಿಯಾಗಿ ಕಟ್ಟದ ಕಾರಣ ಎನ್​ಪಿಎ ಪಟ್ಟಿಗೆ ಸೇರಿಸಲಾಗಿತ್ತು.

NPA ಲಿಸ್ಟ್​ನಲ್ಲಿರುವ ಬ್ಯಾಂಕ್ ಖಾತೆ ಟಾರ್ಗೆಟ್ ಮಾಡಿ ವಂಚನೆ: ಕೇರಳ ಮೂಲದ ಇಬ್ಬರ ಬಂಧನ
ಬಂಧಿತ ಆರೋಪಿಗಳು.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jul 06, 2022 | 10:02 AM

ಬೆಂಗಳೂರು: ಎನ್​​ಪಿಎ (NPA) ಲಿಸ್ಟ್​ನಲ್ಲಿರುವ ಬ್ಯಾಂಕ್ ಖಾತೆಗಳ (Bank Accounts) ಟಾರ್ಗೆಟ್ ಮಾಡಿ ವಂಚಿಸುತಿದ್ದ ಕೇರಳ ಮೂಲದ ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಘವ್ ಲಾಲ್, ಪಿಳ್ಳೆ ಬಂಧಿತ ಆರೋಪಿಗಳು. ತಮ್ಮದೇ ಆದ ಬ್ಯಾಂಕ್​​ನ ಕೆಲ ವ್ಯಕ್ತಿಗಳ ಜೊತೆ ಸಂಪರ್ಕ ಹೊಂದಿದ್ದು, ಈ ವೇಳೆ ಎನ್​ಪಿ ಪಟ್ಟಿಯಲ್ಲಿರುವ ಅಕೌಂಟ್​ಗಳನ್ನ ಆರೋಪಿಗಳು ಪತ್ತೆ ಮಾಡುತ್ತಿದ್ದು, 5 ಕೋಟಿಗೂ ಅಧಿಕ ಲೋನ್ ಪಡೆದ ಖಾತೆಗಳೇ ಇವರ ಟಾರ್ಗೆಟ್. ನಂತರ ಖಾತೆಯ ಹೊಲ್ಡರ್​ಗೆ ಕಾಲ್ ಮಾಡಿ ಆಮಿಷ ಒಡ್ಡುತ್ತಿದ್ದರು. ಕಡಿಮೆ ಹಣಕ್ಕೆ ಎಲ್ಲವನ್ನೂ ಕ್ಲಿಯರ್ ಮಾಡಿಸೊದಾಗಿ ಹೇಳಿ, ನಂಬಿ ಬಂದವರಿಂದ ಲಕ್ಷಾಂತರ ಹಣ ಪಡೆದು ವಂಚನೆ ಮಾಡುತ್ತಿದ್ದರು. ಸತೀಶನ್ ಎಂಬುವವರಿಗೆ ಆರೋಪಿಗಳು 82 ಲಕ್ಷ ವಂಚಿಸಿದ್ದರು. ನಂತರ ಲೋನ್​ನ ಕಂತನ್ನು ಸರಿಯಾಗಿ ಕಟ್ಟದ ಕಾರಣ ಎನ್​ಪಿಎ ಪಟ್ಟಿಗೆ ಸೇರಿಸಲಾಗಿತ್ತು.

ಇದನ್ನೂ ಓದಿ: ನಾಸಿಕ್​ನಲ್ಲಿ ಅಫ್ಘಾನಿಸ್ತಾನದ ಮುಸ್ಲಿಂ ಆಧ್ಯಾತ್ಮಿಕ ನಾಯಕ ಸೂಫಿ ಬಾಬಾನಿಗೆ ಗುಂಡಿಕ್ಕಿ ಹತ್ಯೆ

ಈ ವೇಳೆ ಪರಿಚಯವಾದ ಇಬ್ಬರಿಂದ ವಂಚನೆ ಮಾಡಿದ್ದಾರೆ. ಬ್ಯಾಂಕ್​ನ ಉದ್ಯೋಗಿಗಳ ಜೊತೆ ಸಂಬಂಧವಿದ್ದು, ಹಣ ಕೊಟ್ಟರೆ ಕೆಲಸ ಆಗತ್ತೆ ಎಂದು ನಂಬಿಸಿ ವಂಚಿಸಿದ್ದಾರೆ. ವಂಚನೆಗೊಳಗಾದ ಸತೀಶನ್​ ಬಳಿಕ ಜಯನಗರ ಪೊಲೀಸ್ ಠಾಣೆಗೆ ವಂಚನೆ ಬಗ್ಗೆ ದೂರು ನೀಡಿದ್ದು, ಜಯನಗರ ಪೊಲೀಸರಿಂದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಮತ್ತಷ್ಟು ಮಂದಿಗೆ ಇದೇ ಮಾದರಿ ವಂಚನೆಯ ಅನುಮಾನ ವ್ಯಕ್ತವಾಗಿದೆ. ಸದ್ಯ ಜಯನಗರ ಪೊಲೀಸರಿಂದ ತನಿಖೆ ನಡೆಯುತ್ತಿದೆ.

 3 ಜನ ಗಾಂಜಾ ಮಾರಾಟಗಾರರ ಬಂಧನ:

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಮಾದನಾಯಕನಹಳ್ಳಿ ಪೊಲೀಸರಿಂದ 3 ಜನ ಗಾಂಜಾ ಮಾರಾಟಗಾರರ ಬಂಧಿಸಿರುವಂತಹ ಘಟನೆ ನಡೆದಿದೆ. ಸೈಯದ್ ನೂರ್, ಅಬ್ಬಲ್ ಖಾನ್, ಇರ್ಪಾನ್ ಖಾನ್ ಬಂಧಿತ ಆರೋಪಿ. 10ಲಕ್ಷಕ್ಕೂ ಹೆಚ್ಚು ಬೆಲೆಬಾಳುವ 51ಕೆಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಕಾರು ಜಪ್ತಿ ಮಾಡಲಾಗಿದೆ. ನೈಸ್​ಗೆ ಸಂಸ್ಥೆಗೆ ಸೇರಿದ ನವಿಲೆ ಲೇಔಟ್ ನಲ್ಲಿ ಆರೋಪಿಗಳು ಬಲೆಗೆ ಬಿದಿದ್ದಾರೆ. ಇನ್ನೋರ್ವ ಪ್ರಮುಖ  ಆರೋಪಿ ಆಂದ್ರ ಪ್ರದೇಶದ ದೇವುಗಾಗಿ ಪೊಲೀಸರ ಶೋಧ ನಡೆಯುತ್ತಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ; India Covid Updates: ಭಾರತದಲ್ಲಿ ಹೊಸದಾಗಿ 16,159 ಮಂದಿಗೆ ಕೊರೊನಾ ಸೋಂಕು, 28 ಸಾವು

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ