ನಾಸಿಕ್‌ನಲ್ಲಿ ಅಫ್ಘಾನಿಸ್ತಾನದ ಮುಸ್ಲಿಂ ಆಧ್ಯಾತ್ಮಿಕ ನಾಯಕ ಸೂಫಿ ಬಾಬಾನಿಗೆ ಗುಂಡಿಕ್ಕಿ ಹತ್ಯೆ
35 ವರ್ಷದ ಮುಸ್ಲಿಂ ನಾಯಕ ಅಫ್ಘಾನಿಸ್ತಾನ ಮೂಲದವರಾಗಿದ್ದು, ಅವರನ್ನು ಮಂಗಳವಾರ ನಾಸಿಕ್‌ನ ಯೋಲಾ ಪಟ್ಟಣದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ.
ನಾಸಿಕ್: ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ‘ಸೂಫಿ ಬಾಬಾ’ (Sufi Baba) ಎಂದು ಕರೆಯಲ್ಪಡುವ ಮುಸ್ಲಿಂ ಆಧ್ಯಾತ್ಮಿಕ ನಾಯಕನನ್ನು ಕೊಲೆ (Murder) ಮಾಡಿದ್ದಾರೆ. 35 ವರ್ಷದ ಮುಸ್ಲಿಂ ನಾಯಕ ಅಫ್ಘಾನಿಸ್ತಾನ (Afghanistan) ಮೂಲದವರಾಗಿದ್ದು, ಅವರನ್ನು ಮಂಗಳವಾರ ನಾಸಿಕ್‌ನ ಯೋಲಾ ಪಟ್ಟಣದಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ. ಈ ಹತ್ಯೆಯ ಹಿಂದಿನ ಉದ್ದೇಶ ಏನಿರಬಹುದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
ಮುಂಬೈನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಯೋಲಾ ಪಟ್ಟಣದ ಎಂಐಡಿಸಿ ಪ್ರದೇಶದ ತೆರೆದ ಜಾಗದಲ್ಲಿ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ಖ್ವಾಜಾ ಸಯ್ಯದ್ ಚಿಶ್ತಿ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಮೆಕ್ಸಿಕೋ: ಪೊಲೀಸ್ ಮತ್ತು ಸಶಸ್ತ್ರ ನಾಗರಿಕರ ನಡುವಿನ ಗುಂಡಿನ ಕಾಳಗದಲ್ಲಿ ನಾಲ್ವರು ಪೊಲೀಸರು ಸೇರಿ 12 ಸಾವು
ಗುಂಡಿನ ದಾಳಿ ನಡೆಸಿದವರು ಅವರ ಹಣೆಗೆ ಬಂದೂಕಿನಿಂದ ಗುಂಡು ಹಾರಿಸಿದ್ದು, ಇದರಿಂದ ಗಾಯವಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸೂಫಿ ಬಾಬಾನನ್ನು ಕೊಂದ ನಂತರ ಆರೋಪಿಗಳು ಬಳಸುತ್ತಿದ್ದ ಎಸ್ಯುವಿಯನ್ನು ವಶಪಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದು, ಹಂತಕರನ್ನು ಹಿಡಿಯಲು ಶೋಧ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.