ದೆಹಲಿ: ಅಸ್ಸಾಂನ ಜನಪ್ರಿಯ ದಿನಪತ್ರಿಕೆ ‘ಅಗ್ರದೂತ್’ (Agradoot) ಮಾಧ್ಯಮ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಬುಧವಾರ (ಜುಲೈ 6) ವಿಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ಪ್ರಧಾನಿ ಕಚೇರಿಯ ಪ್ರಕಟಣೆಯ ಪ್ರಕಾರ, ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಮಂತ ಶರ್ಮಾ ಅವರು ಅಗ್ರದೂತ್ ಸುವರ್ಣ ಮಹೋತ್ಸವ ಕಾರ್ಯಕ್ರಮದ ಪ್ರಧಾನ ಪೋಷಕರಾಗಿದ್ದಾರೆ.
ಅಸ್ಸಾಂನ ಹಿರಿಯ ಪತ್ರಕರ್ತ ಕನಕ್ ಸೇನ್ ದೇಕಾ ಅವರು ಅಸ್ಸಾಮಿ ಭಾಷೆಯ ಪಾಕ್ಷಿಕವನ್ನು (ತಿಂಗಳಿಗೆ 2 ಸಂಚಿಕೆ) ಆರಂಭಿಸಿದ್ದರು. 1995ರಲ್ಲಿ ‘ದೈನಿಕ್ ಅಗ್ರದೂತ್’ ದಿನಪತ್ರಿಕೆಯನ್ನು ಆರಂಭಿಸಲಾಯಿತು. ಇಂದಿಗೂ ಇದು ಅಸ್ಸಾಂನ ಅತ್ಯಂತ ವಿಶ್ವಾಸಾರ್ಹ ಹಾಗೂ ಪ್ರಭಾವಿ ದಿನಪತ್ರಿಕೆಯಾಗಿದೆ.