ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳು; 2 ಗೋರಿಲ್ಲ, 4 ಒರಂಗೋಟಾ ಆಗಮನ

50 ವರ್ಷಗಳ ನಂತರ ಮೈಸೂರು ಮೃಗಾಲಯಕ್ಕೆ ಒರಂಗೋಟಾ ಬಂದಿದೆ. ಇನ್ನು 8 ವರ್ಷಗಳ‌ ನಂತರ ಗೋರಿಲ್ಲ ಬಂದಿದೆ. ಸದ್ಯ ಮೃಗಾಲಯದಲ್ಲಿ ಎಲ್ಲಾ ಪ್ರಾಣಿಗಳು ಆಶ್ರಯ ಪಡೆದುಕೊಂಡಿವೆ. ಕೊವಿಡ್‌ ಹಿನ್ನಲೆ ಪ್ರತ್ಯೇಕವಾಗಿ ಈ ಪ್ರಾಣಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.  ಮೈಸೂರಿನ ವಾತಾವರಣಕ್ಕೆ ಪ್ರಾಣಿಗಳು ಹೊಂದಿಕೊಳ್ಳುತ್ತಿವೆ.

ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳು; 2 ಗೋರಿಲ್ಲ, 4 ಒರಂಗೋಟಾ ಆಗಮನ
ಗೋರಿಲ್ಲ
Edited By:

Updated on: Oct 03, 2021 | 1:48 PM

ಮೈಸೂರು: ಪ್ರಾಣಿಗಳ ವಿನಿಮಯ ಪದ್ಧತಿಯಡಿ ಮೈಸೂರು ಮೃಗಾಲಯಕ್ಕೆ ಹೊಸ ಅತಿಥಿಗಳು ಆಗಮಿಸಿದ್ದಾರೆ. ಜರ್ಮನಿ, ಸಿಂಗಪೂರ್ ಹಾಗೂ ಮಲೇಶಿಯಾದಿಂದ ಪ್ರಾಣಿಗಳು ಜಯಚಾಮರಾಜೇಂದ್ರ ಮೃಗಾಲಯಕ್ಕೆ ಬಂದಿಳಿದಿದ್ದಾರೆ. ಎರಡು ಗೋರಿಲ್ಲ, ನಾಲ್ಕು ಒರಂಗೋಟಾ ಮೃಗಾಲಯಕ್ಕೆ ಆಗಮಿಸಿವೆ. ಜಯಚಾಮರಾಜೇಂದ್ರ ಮೃಗಾಲಯಕ್ಕೆ ಬಂದಿಳಿದ ಪ್ರಾಣಿಗಳನ್ನು ಸದ್ಯ ಕ್ವಾರಂಟೈನ್ ಮಾಡಲಾಗಿದೆ.

ಪ್ರಾಣಿಗಳ ವಿನಿಮಯ ಪದ್ಧತಿಯಡಿ ಗೊರಿಲ್ಲ ಹಾಗೂ‌ ಒರಂಗೋಟಾ ಆಗಮಿಸಿವೆ. ಜಿರಾಫೆಯನ್ನು ನೀಡಿ ಒರಂಗೋಟಾ ಹಾಗೂ ಗೊರಿಲ್ಲವನ್ನು ಪಡೆಯಲಾಗಿದೆ. ಮಲೇಶಿಯಾ, ಸಿಂಗಪೂರ್‌ನಿಂದ ತಲಾ 2 ಒರಂಗೋಟಾ ಬಂದಿವೆ. ಜರ್ಮನಿಯಿಂದ 2 ಗೊರಿಲ್ಲ ಬಂದಿವೆ.

50 ವರ್ಷಗಳ ನಂತರ ಮೈಸೂರು ಮೃಗಾಲಯಕ್ಕೆ ಒರಂಗೋಟಾ ಬಂದಿದೆ. ಇನ್ನು 8 ವರ್ಷಗಳ‌ ನಂತರ ಗೋರಿಲ್ಲ ಬಂದಿದೆ. ಸದ್ಯ ಮೃಗಾಲಯದಲ್ಲಿ ಎಲ್ಲಾ ಪ್ರಾಣಿಗಳು ಆಶ್ರಯ ಪಡೆದುಕೊಂಡಿವೆ. ಕೊವಿಡ್‌ ಹಿನ್ನಲೆ ಪ್ರತ್ಯೇಕವಾಗಿ ಈ ಪ್ರಾಣಿಗಳನ್ನು ಕ್ವಾರಂಟೈನ್‌ ಮಾಡಲಾಗಿದೆ.  ಮೈಸೂರಿನ ವಾತಾವರಣಕ್ಕೆ ಪ್ರಾಣಿಗಳು ಹೊಂದಿಕೊಳ್ಳುತ್ತಿವೆ.

ಒರಂಗೋಟಾ

ಬೆಳಗಾವಿ: ಘಟಪ್ರಭಾ ನದಿಯಿಂದ ಹುಣ್ಣೂರಿಗೆ ಬಂದಿದ್ದ ಮೊಸಳೆ ಸೆರೆ
ಘಟಪ್ರಭಾ ನದಿಯಿಂದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹುಣ್ಣೂರಿಗೆ ಬಂದಿದ್ದ ಮೊಸಳೆಯನ್ನು ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ನಿನ್ನೆ ತಡರಾತ್ರಿ ಆಹಾರ ಅರಸಿ ಗ್ರಾಮಕ್ಕೆ ನುಗ್ಗಿದ್ದ ಹತ್ತು ಅಡಿ ಉದ್ದದ ಮೊಸಳೆಯನ್ನು ಸೆರೆ ಹಿಡಿದು, ಅರಣ್ಯ ಇಲಾಖೆ ಸಿಬ್ಬಂದಿಗಳು ಶಿರೂರು ಜಲಾಶಯಕ್ಕೆ ಬಿಟ್ಟು ಬಂದಿದ್ದಾರೆ.

ಇದನ್ನೂ ಓದಿ:
ಪ್ರಾಣಿಗಳ ಸಾಕಲು ಬಂದ ದೇಣಿಗೆ ಹಣದಿಂದ ಐಷಾರಾಮಿ ಕಾರು ಖರೀದಿ ಆರೋಪ: ಮೈಸೂರು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಹೇಳಿದ್ದೇನು?

ದೆಹಲಿ ಮೃಗಾಲಯದಲ್ಲಿ ಚಿತ್ರಿಸಿದ ಕೊಕ್ಕರೆಗಳು; 140 ವಿವಿಧ ಬಣ್ಣದ ಪಕ್ಷಿಗಳ ಚಿತ್ರ ಸೆರೆ

Published On - 11:08 am, Sun, 3 October 21