AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಮೃಗಾಲಯದಲ್ಲಿ ಚಿತ್ರಿಸಿದ ಕೊಕ್ಕರೆಗಳು; 140 ವಿವಿಧ ಬಣ್ಣದ ಪಕ್ಷಿಗಳ ಚಿತ್ರ ಸೆರೆ

Delhi Zoo: ಪಕ್ಷಿಗಳು ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡುವ ಕೆಲವೇ ತಾಣಗಳಲ್ಲಿ ದೆಹಲಿಯ ಮೃಗಾಲಯ ಕೂಡಾ ಒಂದು ಎಂದು ಮೃಗಾಲಯದ ನಿರ್ದೇಶಕರಾದ ರಮೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ದೆಹಲಿ ಮೃಗಾಲಯದಲ್ಲಿ ಚಿತ್ರಿಸಿದ ಕೊಕ್ಕರೆಗಳು; 140 ವಿವಿಧ ಬಣ್ಣದ ಪಕ್ಷಿಗಳ ಚಿತ್ರ ಸೆರೆ
ಪ್ರಾತಿನಿಧಿಕ ಚಿತ್ರ
TV9 Web
| Updated By: shruti hegde|

Updated on:Aug 16, 2021 | 11:38 AM

Share

ದೆಹಲಿ: ರಾಷ್ಟ್ರ ರಾಜಧಾನಿಯ ಮೃಗಾಲಯದಲ್ಲಿ ಬಣ್ಣ ಬಣ್ಣದ ಕೊಕ್ಕರೆಗಳು ಕಂಡು ಬಂದಿವೆ. ವಲಸೆ ಹಕ್ಕಿಗಳು ಆಗಸ್ಟ್ ಮಧ್ಯದಲ್ಲಿ ಪೂರ್ವ ಭಾಗಗಳಿಂದ ದೆಹಲಿಗೆ ಹಾರಿ ಬರುತ್ತಿದ್ದವು. ಈ ವರ್ಷ ಪಕ್ಷಿಗಳು ಮುಂಚಿತವಾಗಿ ಬಂದು ನೆಲೆಸಿವೆ. 140 ವಿವಿಧ ಬಣ್ಣದ ಕೊಕ್ಕರೆಗಳ ಚಿತ್ರ ಸೆರೆ ಹಿಡಿಯಲಾಗಿದ್ದು ಸುಂದರ ದೃಶ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಆಗಸ್ಟ್ 6ರಂದು ಬಣ್ಣ ಬಣ್ಣದ ಕೊಕ್ಕರೆಗಳು ಮೃಗಾಲಯದಲ್ಲಿ ಕಂಡು ಬಂದವು. ಇವುಗಳ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಾಯಿತು. ದಿನ ಸಾಗುತ್ತಿದ್ದಂತೆಯೇ ಪಕ್ಷಿಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಪಕ್ಷಿಗಳು ಗೂಡುಕಟ್ಟಿ ಸಂತಾನೋತ್ಪತ್ತಿ ಮಾಡುವ ಕೆಲವೇ ತಾಣಗಳಲ್ಲಿ ದೆಹಲಿಯ ಮೃಗಾಲಯ ಕೂಡಾ ಒಂದು ಎಂದು ಮೃಗಾಲಯದ ನಿರ್ದೇಶಕರಾದ ರಮೇಶ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗಾಗಿ ಪಕ್ಷಿ ವೀಕ್ಷಣೆ ಆಗಸ್ಟ್ ಕೊನೆಯ ವೇಳೆಗೆ ಪಕ್ಷಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗುತ್ತವೆ. ಸುಮಾರು 500 ಪಕ್ಷಿಗಳಿಗಿಂತಲೂ ಹೆಚ್ಚಿನ ಪಕ್ಷಿಗಳು ಕಾಣಿಸಿಕೊಳ್ಳುತ್ತವೆ. ಸುಂದರವಾಗಿ ಕಾಣಿಸುವ ತಾಣಗಳ ಭೇಟಿಗೆ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಯೋಜನೆ ನಡೆಯುತ್ತಿದೆ. ಪಕ್ಷಿಗಳ ಮಾರ್ಗದರ್ಶನದ ಜತೆಗೆ ವಿದ್ಯಾರ್ಥಿಗಳು ಪಕ್ಷಿ ವೀಕ್ಷಣೆ ಮಾಡಲಿದ್ದಾರೆ ಎಂದು ರಮೇಶ್ ಕುಮಾರ್ ಪಾಂಡೆ ಮಾಹಿತಿ ಹಂಚಿಕೊಂಡಿದ್ದಾರೆ.

ಮುಂಬರುವ ವಾರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳಿರುವ ಜಾಗಕ್ಕೆ ಪ್ರವಾಸ ಕೈಗೊಳ್ಳಲು ಯೋಜನೆ ನಡೆಯುತ್ತಿದೆ. 20 ಪಕ್ಷಿವೀಕ್ಷಕರ ಜತೆ ವೀಕ್ಷಣೆ ನಡೆಯಲಿದೆ. ಬಣ್ಣಬಣ್ಣದ ಕೊಕ್ಕರೆಗಳು ಆಗಸ್ಟ್​ನಿಂದ ಅಕ್ಟೋಬರ್​ವರೆಗೆ ಸಂತಾನೋತ್ಪತ್ತಿ ಮಾಡುತ್ತವೆ. ಮಾರ್ಚ್​ವರೆಗೆ ದೆಹಲಿಯ ಮೃಗಾಲಯದಲ್ಲಿ ವಾಸಿಸುತ್ತವೆ. ಪಕ್ಷಿ ವೀಕ್ಷಣೆಯು ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಬಲ್ಲದು ಎಂದು ಪಕ್ಷಿತಜ್ಞೆ ಪಂಕಜ್ ಗುಪ್ತಾ ಹೇಳಿಕೆ ನೀಡಿದ್ದಾರೆ.

ದೆಹಲಿ ಮೃಗಾಲಯ ಹೆರಾನ್​ಗಳು, ಕಿಂಗ್​ಫಿಶರ್​, ಗ್ರೇ ಹಾರ್ನ್ ಬಿಲ್, ಜಂಗಲ್ ಬಾಬ್ಲರ್, ಕಾರ್ಮೊರಂಟ್ಸ್, ಪ್ಯಾರಕೀಟ್ಸ್, ಹಸಿರು ಬಣ್ಣದ ಪಾರಿವಾಳ., ಕಂದು ತಲೆಯ ಬಾರ್ಬೆಟ್, ಸ್ಪಾಟ್-ಬಿಲ್ ಬಾತುಕೋಳಿ ಸೇರಿದಂತೆ ಸುಮಾರು 50 ವಿವಿಧ ಜಾತಿಯ ಪ್ರಬೇಧಗಳ ನೆಲೆಯಾಗಿದೆ.

ಇದನ್ನೂ ಓದಿ:

Covid Diary : ಕವಲಕ್ಕಿ ಮೇಲ್ ; ಪ್ರಾಣಿ ಪಕ್ಷಿಗಳಿಗೆ ತಾಯ್ತನ ತೋರಿಸುವವಳು ತಾನು ತಾಯಿ ಆಗಲಾರೆ ಎನ್ನುವಳಲ್ಲ?

ಆಸ್ಪತ್ರೆಯಲ್ಲಿ ಬೆಡ್​ ಇಲ್ಲದೇ ಪರದಾಟ; ಬೇರೆಡೆಗೆ ಕರೆದೊಯ್ದು ಕಾಪಾಡುವಷ್ಟರಲ್ಲಿ ಹಾರಿ ಹೋದ ಪ್ರಾಣಪಕ್ಷಿ

Published On - 11:35 am, Mon, 16 August 21

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ