ಮೈಸೂರು, (ಸೆಪ್ಟೆಂಬರ್ 04): ಸನಾತನ ಧರ್ಮ (Sanatana Dharma) ಡೆಂಘಿ, ಮಲೇರಿಯಾ, ಕೊರೊನಾ ಇದ್ದಂತೆ. ಅದಕ್ಕೆ ಹೆದರಬಾರದು, ಅದನ್ನ ನಿರ್ಮೂಲನೆ ಮಾಡಬೆಕು. ಅದೇ ರೀತಿ ಸನಾತನ ಧರ್ಮವನ್ನ ನಿರ್ಮೂಲನೆ ಮಾಡಬೇಕು ಎಂದು ಸಚಿವ ಉದಯನಿಧಿ ಸ್ಟಾಲಿನ್, ಹೇಳಿಕೆಯನ್ನು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನತೀರ್ಥ ಸ್ವಾಮೀಜಿ (Pejawar Mutt seer, Vishwaprasanna Teertha) ತೀವ್ರವಾಗಿ ಖಂಡಿಸಿದ್ದಾರೆ. ಈ ಬಗ್ಗೆ ಇಂದು (ಸೆಪ್ಟೆಂಬರ್ 04) ಮೈಸೂರಿನಿಂದ ಮಾಧ್ಯಮಗಳಿಗೆ ವಿಡಿಯೋ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಶ್ರೀಗಳು, ಉದಯನಿಧಿ ಸ್ಟಾಲಿನ್ ಒಂದು ರಾಜ್ಯದ ಮಂತ್ರಿಯಾಗಿದ್ದಾರೆ. ಸಮಾಜದಲ್ಲಿ ಇಂತಹ ವಿಷ ಬೀಜವನ್ನು ಬಿತ್ತುವುದು ಸರಿಯಲ್ಲ.‘ಸನಾತನ’ ಎಂದರೇ ಸದಾ ಕಾಲವೂ ಇರುವಂತಹದ್ದು ಎಂದರ್ಥ. ಎಲ್ಲರೂ ಸುಖವಾಗಿ ಬದುಕಲು ಅಳವಡಿಸಿಕೊಳ್ಳುವ ಸೂತ್ರವೇ ಧರ್ಮ. ನಮ್ಮ ಸುಖದಿಂದ ಅಕ್ಕಪಕ್ಕದವರಿಗೆ ದುಃಖವಾಗಬಾರದು. ಬದಲಾಗಿ ನಮ್ಮ ಸುಖದಿಂದ ಅಕ್ಕಪಕ್ಕದವರಿಗೂ ಸಂತೋಷ ಲಭಿಸಬೇಕು. ಇದು ಸನಾತನ ಧರ್ಮದ ಮೂಲ ಆಶಯವಾಗಿದೆ. ಅಂತಹ ಧರ್ಮವನ್ನು ನಿರ್ಮೂಲಿಸಬೇಕು ಎನ್ನುವ ಪ್ರವೃತ್ತಿ ಸರಿಯಲ್ಲ ಎಂದಿದ್ದಾರೆ.
ಸಮಾಜದೊಳಗೆ ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು. ಸಚಿವರೊಬ್ಬರ ಸನಾತನ ಧರ್ಮದ ಹೇಳಿಕೆ ಕೇಳಿ ತೀವ್ರ ಅಘಾತವಾಗಿದೆ. ಸನಾತನ ಧರ್ಮ ಅಂದ್ರೆ ಸದಾಕಾಲ ಇರುವಂತಹದ್ದು. ಎಲ್ಲಾರು ಸುಖ ಶಾಂತಿಯಿಂದ ಬಯಸುವವರು. ಸಮಾಜದಲ್ಲಿ ಸುಖ ಶಾಂತಿಯಿಂದ ಬದುಕುಬೇಕು. ಇದೇ ಸನಾತನ ಧರ್ಮದ ಆಶಯವಾಗಿರುತ್ತದೆ. ಸನಾತದ ಧರ್ಮದ ನಿರ್ಮೂಲನೆ ಹೇಳಿಕೆಯನ್ನ ಖಂಡಿಸುತ್ತೇನೆ. ಇಂತಹ ಹೇಳಿಕೆಯನ್ನ ನಾನು ಬಲವಾಗಿ ಖಂಡಿಸುತ್ತೇನೆ ಎಂದು ಹೇಳಿದ್ದಾರೆ
ಇದನ್ನೂ ಓದಿ: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಕರೆದ ಸ್ಟಾಲಿನ್ ಪುತ್ರ ಉದಯನಿಧಿ
ಇನ್ನು ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ಅವಹೇಳನಾಕಾರಿ ಹೇಳಿಕೆಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿರುವ ಅವರು, ಸಚಿವ ಉದಯನಿಧಿ ಸ್ಟಾಲಿನ್ ನೀಡಿರುವ ಹೇಳಿಕೆ ಅಸಭ್ಯವಾದದ್ದು. ಸನಾತನ ಧರ್ಮ ನಾಶಪಡಿಸುತ್ತೇನೆ ಎಂಬ ಹೇಳಿಕೆಯನ್ನು ಖಂಡಿಸುತ್ತೇನೆ. ಪೆರಿಯಾರ್ ಸಂಸ್ಕೃತಿಯಿಂದ ಬಂದ ಉದಯನಿಧಿ ಆಟ ಇಲ್ಲಿ ನಡೆಯಲ್ಲ. ಉದಯನಿಧಿ ತನ್ನ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಡೆಂಗ್ಯೂ ,ಮಲೇರಿಯಾದ ರೀತಿಯೇ ನಾಶ ಮಾಡ್ತೇವೆ ಎನ್ನುವುದನ್ನು ಶ್ರೀರಾಮ ಸೇನೆ ಖಂಡಿಸುತ್ತದೆ. ತಮಿಳುನಾಡಿನಲ್ಲೂ ಉದಯನಿಧಿ ವಿರುದ್ಧ ಶ್ರೀರಾಮಸೇನೆ ಪ್ರತಿಭಟನೆ ಮಾಡಿದೆ. ಕರ್ನಾಟಕ ಹೈಕೋರ್ಟ್ನಲ್ಲಿ ಉದಯನಿಧಿ ವಿರುದ್ಧ ದಾವೆ ಹೂಡುತ್ತೇವೆ ಎಂದು ಕಿಡಿಕಾರಿದರು.
ನಿಮ್ಮ ನಿಮ್ಮ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ