ಹಳೇ ಮೈಸೂರು ಭಾಗದ ಸ್ಪರ್ಧೆಗೆ ವಿಜಯೇಂದ್ರ ತಿಲಾಂಜಲಿ? ಡಾ. ಯತಿಂದ್ರ ಸಿದ್ದರಾಮಯ್ಯ ಹಾದಿ ಸುಗಮ

| Updated By: ಆಯೇಷಾ ಬಾನು

Updated on: Jul 22, 2022 | 4:40 PM

ಮುಂದಿನ ಚುನಾವಣೆಗೆ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಮೈಸೂರಿನ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಫುಲ್ ಸ್ಟಾಪ್ ಇಡಲಾಗಿದೆ.

ಹಳೇ ಮೈಸೂರು ಭಾಗದ ಸ್ಪರ್ಧೆಗೆ ವಿಜಯೇಂದ್ರ ತಿಲಾಂಜಲಿ? ಡಾ. ಯತಿಂದ್ರ ಸಿದ್ದರಾಮಯ್ಯ ಹಾದಿ ಸುಗಮ
ಡಾ. ಯತಿಂದ್ರ ಸಿದ್ದರಾಮಯ್ಯ, ಬಿ.ವೈ. ವಿಜಯೇಂದ್ರ
Follow us on

ಮೈಸೂರು: ಪುತ್ರ ವಿಜಯೇಂದ್ರಗೆ(BY Vijayendra) ಬಿ.ಎಸ್. ಯಡಿಯೂರಪ್ಪ(BS Yediyurappa) ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ಮುಂದಿನ ಚುನಾವಣೆಗೆ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಥಿಸುವ ಬಗ್ಗೆ ಬಹುತೇಕ ತೀರ್ಮಾನವಾಗಿದೆ. ಇದರಿಂದಾಗಿ ಹಳೇ ಮೈಸೂರು ಭಾಗದ ಸ್ಪರ್ಧೆಗೆ ವಿಜಯೇಂದ್ರ ತಿಲಾಂಜಲಿ? ಇಟ್ಟಿದ್ದಾರೆ. ಡಾ. ಯತಿಂದ್ರ ಸಿದ್ದರಾಮಯ್ಯ(Dr Yathindra Siddaramaiah) ಹಾದಿ ಸುಗಮಗೊಂಡಿದೆ.

ಮುಂದಿನ ಚುನಾವಣೆಗೆ ವಿಜಯೇಂದ್ರ ಶಿಕಾರಿಪುರದಿಂದ ಸ್ಪರ್ಧೆ ಮಾಡಲಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಹೀಗಾಗಿ ಮೈಸೂರಿನ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಫುಲ್ ಸ್ಟಾಪ್ ಇಡಲಾಗಿದೆ. ಹಾಗಾದ್ರೆ ಮೈಸೂರು ಭಾಗಕ್ಕೆ ಬಿಎಸ್ವೈ ಪುತ್ರ ಬರುವುದಿಲ್ಲವಾ? ಎಂದು ವಿಜಯೇಂದ್ರ ಆಗಮಿಸುತ್ತಾರೆಂದು ಉತ್ಸುಕರಾಗಿದ್ದ ವಿಜಯೇಂದ್ರ ಅಭಿಮಾನಿಗಳು ಈಗ ಸಪ್ಪೆಯಾಗಿದ್ದಾರೆ. ಕಳೆದ ಬಾರಿ ಅಂದರೆ 2018ರ ಚುನಾವಣೆ ವೇಳೆ ಕೊನೆ ಕ್ಷಣದಲ್ಲಿ ವಿಜಯೇಂದ್ರರಿಗೆ ಟಿಕೆಟ್ ಕೈ ತಪ್ಪಿತ್ತು. ವಿಜಯೇಂದ್ರಗೆ ಟಿಕೆಟ್ ತಪ್ಪಿದಕ್ಕೆ ಮೈಸೂರು ಸಾಕಷ್ಟು ಹೈಡ್ರಾಮಕ್ಕೆ ಸಾಕ್ಷಿಯಾಗಿತ್ತು. ಆದ್ರೆ ಈಗ ವಿಜಯೇಂದ್ರರವರೇ ಮೈಸೂರಿನಲ್ಲಿ ಸ್ಪರ್ಧೆಗೆ ಇಳಿಯುತ್ತಿಲ್ಲ ಎಂಬುವುದು ಸ್ಪಷ್ಟವಾಗಿದೆ. ಇದರಿಂದ ಕಾಂಗ್ರೆಸ್ಗೆ ಭಾರಿ ಲಾಭವಾಗಿದೆ.

ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸುವೆ

ಬಿಎಸ್ ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟ ಬಗ್ಗೆ ಟಿವಿ9ಗೆ ಜೊತೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಕ್ಷೇತ್ರದ ಮುಖಂಡರ ಆಶಯದಂತೆ ಯಡಿಯೂರಪ್ಪ ತೀರ್ಮಾನ ಮಾಡಿದ್ದಾರೆ. ಹಲವು ವರ್ಷಗಳಿಂದ ಕ್ಷೇತ್ರದ ಜನರು ಒತ್ತಡ ಹಾಕುತ್ತಿದ್ದರು. ತಂದೆಯ ಆಶಯದಂತೆ, ಪಕ್ಷ ತೀರ್ಮಾನದಂತೆ ನಡೆದುಕೊಳ್ಳುವೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸುವೆ. ರಾಜ್ಯದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಸಿದ್ಧನಿದ್ದೆ. ಶಿಕಾರಿಪುರ ಕ್ಷೇತ್ರ ಬಿಟ್ಟುಕೊಟ್ಟಿದ್ದು ಒಳ್ಳೆಯದಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಎಸ್‌ವೈ ಪಕ್ಷ ಬಲಪಡಿಸುತ್ತಾರೆ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ BSY ಪಕ್ಷ ಬಲಪಡಿಸುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸುತ್ತೇನೆ. ನಾನು ಕೇವಲ ಶಿಕಾರಿಪುರ ಕ್ಷೇತ್ರಕ್ಕೆ ಸೀಮಿತವಾಗಿರಲ್ಲ ಎಂದು ತಿಳಿಸಿದ್ದಾರೆ.

ಚುನಾವಣಾ ರಾಜಕೀಯದಿಂದ ನಿವೃತ್ತರಾಗಲು ಯಡಿಯೂರಪ್ಪ ನಿರ್ಧಾರ!

ಪುತ್ರನಿಗಾಗಿ ಕ್ಷೇತ್ರ ಬಿಟ್ಟುಕೊಡಲು ಯಡಿಯೂರಪ್ಪ ತೀರ್ಮಾನಿಸಿದ್ದು ನಿವೃತ್ತರಾಗಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. 2018ರಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲು ವಿಜಯೇಂದ್ರ ಪ್ರಯತ್ನಿಸಿದ್ದರು. ಆಗ ವಿಜಯೇಂದ್ರ ಕನಸಿಗೆ ಕಡೇಕ್ಷಣದಲ್ಲಿ ಬಿಜೆಪಿ ಹೈಕಮಾಂಡ್‌ ಬ್ರೇಕ್‌ ಹಾಕಿತ್ತು. ವರಿಷ್ಠರು ವಿಜಯೇಂದ್ರಗೆ ಕೇವಲ ಬಿಜೆಪಿ ಉಪಾಧ್ಯಕ್ಷ ಸ್ಥಾನ ನೀಡಿತ್ತು. ಬಿಎಸ್‌ವೈ ಸಿಎಂ ಆಗಿದ್ದಾಗ ಉಪಚುನಾವಣೆಗಳಲ್ಲಿ ಮಹತ್ವದ ಜವಾಬ್ದಾರಿ ವಹಿಸಲಾಗಿತ್ತು. ಬಿಎಸ್‌ವೈ ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ವಿಜಯೇಂದ್ರಗೆ ಮಹತ್ವ ಕಡಿಮೆಯಾಗಿತ್ತು. ಇದೆಲ್ಲವನ್ನೂ ಅಂದಾಜಿಸಿಯೇ ಬಿ.ಎಸ್.ಯಡಿಯೂರಪ್ಪ ತೀರ್ಮಾನ ಘೋಷಿಸಿದ್ದಾರೆ.

Published On - 3:11 pm, Fri, 22 July 22