ಮೈಸೂರು ಲ್ಯಾಂಪ್​ನ 22.50 ಎಕರೆ ಜಮೀನು ಖಾಸಗಿಯವರಿಗೆ ಏಕೆ ಹಸ್ತಾಂತರ ಮಾಡಿದ್ದೀರಿ: ಕೆ.ಟಿ.ಶ್ರೀಕಂಠೇಗೌಡ

| Updated By: preethi shettigar

Updated on: Mar 08, 2022 | 8:34 PM

ಸರ್ಕಾರದ ಆಸ್ತಿ ಜನರ ಆಸ್ತಿ. ಸರ್ಕಾರ ಜನರ ದಾರಿ ತಪ್ಪಿಸುತ್ತಿದ್ದಾರೆ. 22 ಎಕರೆ ಜಾಗವನ್ನು ತೋಟಗಾರಿಕೆ ಇಲಾಖೆಗೆ ಕೊಡಿ. ಇಲ್ಲದೆ ಹೋದರೆ ಸರ್ಕಾರಿ ಹೈಟೆಕ್ ಆಸ್ಪತ್ರೆ, ಹಾಸ್ಟಲ್ ಮಾಡಿ. 119 ಎಕರೆ ಜಾಗ ತೋಟಗಾರಿಕೆ ಇಲಾಖೆಗೆ ಕೂಡಿ. ಈ ಟ್ರಸ್ಟ್ ಕೂಡಲೇ ರದ್ದು ಮಾಡಿ ಎಂದು ಜೆಡಿಎಸ್​ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಆಗ್ರಹಿಸಿದ್ದಾರೆ.

ಮೈಸೂರು ಲ್ಯಾಂಪ್​ನ 22.50 ಎಕರೆ ಜಮೀನು ಖಾಸಗಿಯವರಿಗೆ ಏಕೆ ಹಸ್ತಾಂತರ ಮಾಡಿದ್ದೀರಿ: ಕೆ.ಟಿ.ಶ್ರೀಕಂಠೇಗೌಡ
ಕೆ.ಟಿ.ಶ್ರೀಕಂಠೇಗೌಡ
Follow us on

ಮೈಸೂರು: ಲ್ಯಾಂಪ್ ಕಾರ್ಖಾನೆ ಜಾಗದಲ್ಲಿ ಮ್ಯೂಸಿಯಂ ವಿಚಾರಕ್ಕೆ ಸಂಬಂಧಪಟ್ಟಂತೆ ಜೆಡಿಎಸ್​ ಸದಸ್ಯ ಕೆ.ಟಿ.ಶ್ರೀಕಂಠೇಗೌಡ( KT Srikantegowda) ಪ್ರತಿಕ್ರಿಯೆ ನೀಡಿದ್ದಾರೆ. ಟ್ರಸ್ಟ್​ಗೆ ಖಾಸಗಿ ವ್ಯಕ್ತಿ ಬಂದಿರುವುದರ ಹಿಂದಿನ ಉದ್ದೇಶ ಏನು?  ಎನ್​ಜಿಎಫ್​ ಕಾರ್ಖಾನೆಯ 119 ಎಕರೆ ಮತ್ತು ಮೈಸೂರು ಲ್ಯಾಂಪ್(Lamp) 22.50 ಎಕರೆ ಜಾಗ ಖಾಸಗಿ ಅವರು ಯಾಕೆ ಹಸ್ತಾಂತರ ಮಾಡ್ತಿದ್ದೀರಾ? ನಮ್ಮ ಆಸ್ತಿಯನ್ನು 5 ಜನ ಖಾಸಗಿ ಜನರನ್ನು ಬಿಡಿಸಿಕೊಳ್ಳಿ ನೋಡೋಣ. ಸರ್ಕಾರದ ಆಸ್ತಿ ಜನರ ಆಸ್ತಿ. ಸರ್ಕಾರ(Government) ಜನರ ದಾರಿ ತಪ್ಪಿಸುತ್ತಿದ್ದಾರೆ. 22 ಎಕರೆ ಜಾಗವನ್ನು ತೋಟಗಾರಿಕೆ ಇಲಾಖೆಗೆ ಕೊಡಿ. ಇಲ್ಲದೆ ಹೋದರೆ ಸರ್ಕಾರಿ ಹೈಟೆಕ್ ಆಸ್ಪತ್ರೆ, ಹಾಸ್ಟಲ್ ಮಾಡಿ. 119 ಎಕರೆ ಜಾಗ ತೋಟಗಾರಿಕೆ ಇಲಾಖೆಗೆ ಕೂಡಿ. ಈ ಟ್ರಸ್ಟ್ ಕೂಡಲೇ ರದ್ದು ಮಾಡಿ ಎಂದು ಆಗ್ರಹಿಸಿದ್ದಾರೆ.

ಸರ್ಕಾರದ ನಿಲುವಿಗೆ ಆಡಳಿತ ಪಕ್ಷದ ಸದಸ್ಯರಿಂದಲೇ ವಿರೋಧ

ಮೈಸೂರು ಲ್ಯಾಂಪ್ಸ್ ಕಾರ್ಖಾನೆ ಜಾಗದಲ್ಲಿ ಮ್ಯೂಸಿಯಂ ನಿರ್ಮಿಸುವ ಸರ್ಕಾರದ ನಿಲುವಿಗೆ ಆಡಳಿತಾರೂಢ ಬಿಜೆಪಿ ಸದಸ್ಯೆ ತೇಜಸ್ವಿನಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟ್ರಸ್ಟ್ ರಚನೆ ಮಾಡುವುದರ ಹಿಂದೆ ಭೂಮಿ ಪರಭಾರೆ ಮಾಡುವ ಅನುಮಾನ‌ ಇದೆ. ಸರ್ಕಾರದ ಅಮೂಲ್ಯ ಜಾಗದಲ್ಲಿ ವಸ್ತು ಸಂಗ್ರಹಾಲಯ ಮಾಡಿ ಭೂಮಿ ಕಬಳಿಸುವ ಉದ್ದೇಶ ಕಾಣಿಸುತ್ತಿದೆ. ಟ್ರಸ್ಟ್ ರಚನೆ ಮಾಡುವ ಚಿಂತನೆ ಸರ್ಕಾರ ಬಿಡದಿದ್ರೆ ಆಡಳಿತ ಪಕ್ಷದವರಾದರೂ ನಾವು ಹೋರಾಟ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್​ ಕಲಾಪದಲ್ಲಿ ತೇಜಸ್ವಿನಿ ಎಚ್ಚರಿಕೆ ನೀಡಿದ್ದಾರೆ.

ಮೈಸೂರು ಲ್ಯಾಂಪ್ಸ್​ ಜಾಗದ ಜತೆ ಭಾವನಾತ್ಮಕ ಸಂಬಂಧವಿದೆ: ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ

ಮೈಸೂರು ಲ್ಯಾಂಪ್ಸ್​ ಜಾಗದಿಂದಲೇ ದಿನನಿತ್ಯ ಸಂಚರಿಸುತ್ತೇನೆ. ಮೈಸೂರು ಲ್ಯಾಂಪ್ಸ್​ ಜಾಗದ ಜತೆ ಭಾವನಾತ್ಮಕ ಸಂಬಂಧವಿದೆ. ರಾಜ್ಯದ 7 ಐಎಎಸ್ ಅಧಿಕಾರಿಗಳು ಟ್ರಸ್ಟ್​ನ ಸದಸ್ಯರಾಗಿರುತ್ತಾರೆ. ಟ್ರಸ್ಟ್​ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಟ್ರಸ್ಟ್ ಮೂಲಕ ಬೆಂಗಳೂರಿನ ವೈಶಿಷ್ಟ್ಯ ಬಿಂಬಿಸುವ ಪ್ರಯತ್ನ ಮಾಡಲಾಗುತ್ತದೆ. ಮೈಸೂರು ಲ್ಯಾಂಪ್ಸ್ ಹೆಸರಿನಲ್ಲೇ ಜಾಗ ಇರುತ್ತೆ, ಟ್ರಸ್ಟ್​ಗೆ ಹೋಗಲ್ಲ. ಈ ತಿಂಗಳವರೆಗೂ ಅಧಿವೇಶನ ನಡೆಯುತ್ತದೆ. ಟ್ರಸ್ಟ್​ಗೆ ಜಮೀನು ನೀಡುವುದು ಹಿಂದಿನ ಸಚಿವರ ನಿರ್ಧಾರವಾಗದಿದೆ. ನಾನೊಬ್ಬನೇ ಯಾವುದೇ ತೀರ್ಮಾನ ಕೈಗೊಳ್ಳಲು ಆಗುವುದಿಲ್ಲ. ಸಿಎಂ, ಸಿಎಸ್​ ಜೊತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ. ಕೊನೆಯಲ್ಲಿ ಸದನದ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇನೆ ಎಂದು ವಿಧಾನಪರಿಷತ್​ನಲ್ಲಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:
ಆಲೂಗಡ್ಡೆ ಚಿಪ್ಸ್​-ಸ್ನ್ಯಾಕ್ಸ್​ ಕಾರ್ಖಾನೆ, ವೋಡ್ಕಾ ತಯಾರಿಕಾ ಘಟಕ ನಿರ್ಮಾಣ; ಉತ್ತರಪ್ರದೇಶ ಜನರಿಗೆ ಅಖಿಲೇಶ್ ಯಾದವ್​ ಭರವಸೆ

ಮಲಪ್ರಭಾ ಸಕ್ಕರೆ ಕಾರ್ಖಾನೆ ಮತ್ತೆ ಗೋಲ್‌ಮಾಲ್: ಅಮಾಯಕರ ಹೆಸರಲ್ಲಿ 16 ಕೋಟಿ ಸಾಲ! ನ್ಯಾಯಕ್ಕಾಗಿ ಅಮಾಯಕ ಕೂಗು

Published On - 8:20 pm, Tue, 8 March 22