ಸ್ನೇಹಿತರ ಜೊತೆ ಪಾರ್ಟಿಗೆ ಹೋದ ಯುವಕ ಅನುಮಾನಾಸ್ಪದವಾಗಿ ಸಾವು, ಹಲ್ಲೆ ಮಾಡಿ ಹತ್ಯೆ ಆರೋಪ

| Updated By: ಸಾಧು ಶ್ರೀನಾಥ್​

Updated on: Dec 22, 2021 | 9:52 AM

ಹೆಚ್ ಡಿ ಕೋಟೆಯಲ್ಲಿ ಸಾಗರ್ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿ ನಂತರ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸಾಗರ್ ಸಹೋದರಿಯರು ಆರೋಪ ಮಾಡಿದ್ದಾರೆ. ಈ ಸಂಬಂಧ ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಸ್ನೇಹಿತರ ಜೊತೆ ಪಾರ್ಟಿಗೆ ಹೋದ ಯುವಕ ಅನುಮಾನಾಸ್ಪದವಾಗಿ ಸಾವು, ಹಲ್ಲೆ ಮಾಡಿ ಹತ್ಯೆ ಆರೋಪ
ಸ್ನೇಹಿತರ ಜೊತೆ ಪಾರ್ಟಿಗೆ ಹೋದ ಯುವಕ ಅನುಮಾನಾಸ್ಪದವಾಗಿ ಸಾವು, ಹಲ್ಲೆ ಮಾಡಿ ಹತ್ಯೆ ಆರೋಪ
Follow us on

ಮೈಸೂರು: ಸ್ನೇಹಿತರ ಜೊತೆ ಪಾರ್ಟಿಗೆ ಹೋದ ಯುವಕ ಅನುಮಾನಸ್ಪದವಾಗಿ ಮೃತಪಟ್ಟಿದ್ದಾನೆ. ಮೈಸೂರಿನ ವಿಜನಯನಗರದ ನಿವಾಸಿ 22 ವರ್ಷದ ಸಾಗರ್ ನೇಪು ಸಾವನ್ನಪ್ಪಿದ ಯುವಕ. ಸಾಗರ್, ಡಿಸೆಂಬರ್ 19ರಂದು ಇಬ್ಬರು ಸ್ನೇಹಿತರಾದ ಶಿವು ಹಾಗೂ ಕೌಶಿಕ್ ಜೊತೆ ಹೋಗಿದ್ದ. ಮರು ದಿನ ಸಾಗರ್ ಆಸ್ಪತ್ರೆಯಲ್ಲಿರುವುದಾಗಿ ಕರೆ ಬಂದಿದೆ. ಸಾಗರ್‌ ಮೊಬೈಲ್‌ನಿಂದಲೇ ಮನೆಯವರಿಗೆ ಕರೆ ಮಾಡಲಾಗಿದೆ. ಅಪಘಾತವಾಗಿದೆ ಅಂತಾ ಯುವತಿಯಿಂದ ಮನೆಯವರಿಗೆ ಕರೆ ಮಾಡಲಾಗಿದ್ದು, ಸಾಗರ್ ಕೆ ಆರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ ಎಂದು ತಿಳಿಸಲಾಗಿದೆ. ಮನೆಯವರು ಹೋಗುವಷ್ಟರಲ್ಲಿ ಸಾಗರ್ ಮೃತಪಟ್ಟಿದ್ದಾನೆ.

ಹೆಚ್ ಡಿ ಕೋಟೆಯಲ್ಲಿ ಸಾಗರ್ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿ ನಂತರ ಅವರೇ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಸಾಗರ್ ಸಹೋದರಿಯರು ಆರೋಪ ಮಾಡಿದ್ದಾರೆ. ಈ ಸಂಬಂಧ ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನದಲ್ಲಿ ಮದುವೆಯಾದ ಮೂರನೇ ವಾರಕ್ಕೆ ಮದುಮಗಳ ಸಾವು

ಹಾಸನ: ಮದುವೆಯಾದ ಮೂರನೇ ವಾರಕ್ಕೆ ಮದುಮಗಳು ಸಾವಿಗೀಡಾಗಿದ್ದಾಳೆ. ವರದಕ್ಷಿಣೆಗಾಗಿ ಮಗಳನ್ನು ಕೊಲೆ ಮಾಡಿರುವುದಾಗಿ ಆ ಮದುಮಗಳ ಪೋಷಕರು ಆರೋಪ ಮಾಡಿದ್ದಾರೆ. ಹಾಸನದ ಸಲೀಂ ನಗರದಲ್ಲಿ ಈ ದುರ್ಘಟನೆ ನಡೆದಿದೆ. ಫಿಜಾ ಖಾನಂ (22) ಮೃತ ಮಹಿಳೆ. ಡಿಸೆಂಬರ್ 2 ರಂದು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಹೊಳಲಗೋಡು ಗ್ರಾಮದ ಯುವತಿ ಫಿಜಾ ಖಾನಂ ಹಾಗೂ ಹಾಸನದ ಶಾಗಿಲ್ ಅಹಮದ್ ಅವಿರಿಬ್ಬರಿಗೂ ಮದುವೆಯಾಗಿತ್ತು. ಮದುವೆಯಾಗಿ 19ನೇ ದಿನವೇ ನವ ವಿವಾಹಿತೆ ಫಿಜಾ ಖಾನಂ ಅನುಮಾನಾಸ್ಪದ ಸಾವು ಕಂಡಿದ್ದಾಳೆ.

ಮಗಳು ಸ್ನಾನಕ್ಕೆ ಹೋದಾಗ ಗ್ಯಾಸ್ ಗೀಸರ್ ಆನ್ ಮಾಡಿ, ಬಾಗಿಲು ಮುಚ್ಚಿ ಕೊಲೆ ಮಾಡಲಾಗಿದೆ ಎಂದು ಫಿಜಾ ಖಾನಂ ಪೋಷಕರು ಆರೋಪಿಸಿದ್ದಾರೆ. ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳ, ವರದಕ್ಷಿಣೆ ಸಾವು ಆರೋಪದಲ್ಲಿ ಕೇಸ್ ದಾಖಲಾಗಿದೆ. ಅಳಿಯ ಶಾಗಿಲ್ ಅಹಮದ್ ಸೇರಿದಂತೆ ಆತನ ಸಹೋದರರು ಮತ್ತು ಶಾಗಿಲ್ ತಾಯಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೆನ್ಷನ್ ಮೊಹಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:
ವಿಧಾನಸಭೆಯಲ್ಲಿ ಇಂದು ಮತಾಂತರ ನಿಷೇಧ ವಿಧೇಯಕ ಮಂಡನೆ-ಚರ್ಚೆ; ಸದನದಲ್ಲಿ ಕದನ ಕುತೂಹಲ

Published On - 9:50 am, Wed, 22 December 21