ಬಿಜೆಪಿಯಲ್ಲಿ ಸಹಿ ಸಂಗ್ರಹ, ಒತ್ತಡ, ಒತ್ತಾಯದ ಪದ್ಧತಿ ಇಲ್ಲ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬಿಜೆಪಿಯಲ್ಲಿ ಶಿಸ್ತು ಸಮಿತಿ ರಚನೆ ಆಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕಾರವಿದ್ದಾಗ ನೋವು, ಭಾವನೆ ವ್ಯಕ್ತಪಡಿಸುವುದು ಸಹಜ. ಅದಕ್ಕಾಗಿ ಈಗಾಗಲೇ ಒಂದು ತಂಡವನ್ನು ರಚನೆ ಮಾಡಿದ್ದೇವೆ. ರಾಜಕೀಯ ಯೋಚನೆ ಮತ್ತು ಯೋಜನೆ ಬಗ್ಗೆ ಪ್ರತಿ ತಿಂಗಳು ಆ ಸಮಿತಿ ಸಭೆ ಸೇರಿ ಚರ್ಚೆ ನಡೆಸಲಿದೆ ಎಂದು ತಿಳಿಸಿದರು.

ಬಿಜೆಪಿಯಲ್ಲಿ ಸಹಿ ಸಂಗ್ರಹ, ಒತ್ತಡ, ಒತ್ತಾಯದ ಪದ್ಧತಿ ಇಲ್ಲ; ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
ನಳೀನ್ ಕುಮಾರ್ ಕಟೀಲ್
Updated By: sandhya thejappa

Updated on: Jun 08, 2021 | 11:11 AM

ಬಾಗಲಕೋಟೆ: ಬಿಜೆಪಿಯಲ್ಲಿ ಶಾಸಕರ ಸಹಿ ಸಂಗ್ರಹ ಮಾಡುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಹಿ ಸಂಗ್ರಹ, ಒತ್ತಡ ಮತ್ತು ಒತ್ತಾಯದ ಪದ್ಧತಿಗಳು ಬಿಜೆಪಿಯಲ್ಲಿ ಇಲ್ಲ. ಇಂತಹ ಸಹಿ ಸಂಗ್ರಹಗಳು ನಮ್ಮ ಪಾರ್ಟಿಯಲ್ಲಿ ಇಲ್ಲ. ಹೈಕಮಾಂಡ್ ಇದೆ, ರಾಷ್ಟ್ರೀಯ ನಾಯಕರು ಈ ಬಗ್ಗೆ ನಿರ್ಧರಿಸುತ್ತಾರೆ. ಹೈಕಮಾಂಡ್ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿಯಲ್ಲಿ ಶಿಸ್ತು ಸಮಿತಿ ರಚನೆ ಆಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿಕಾರವಿದ್ದಾಗ ನೋವು, ಭಾವನೆ ವ್ಯಕ್ತಪಡಿಸುವುದು ಸಹಜ. ಅದಕ್ಕಾಗಿ ಈಗಾಗಲೇ ಒಂದು ತಂಡವನ್ನು ರಚನೆ ಮಾಡಿದ್ದೇವೆ. ರಾಜಕೀಯ ಯೋಚನೆ ಮತ್ತು ಯೋಜನೆ ಬಗ್ಗೆ ಪ್ರತಿ ತಿಂಗಳು ಆ ಸಮಿತಿ ಸಭೆ ಸೇರಿ ಚರ್ಚೆ ನಡೆಸಲಿದೆ ಎಂದು ತಿಳಿಸಿದರು.

ವರಿಷ್ಠರು ಸೂಚಿಸಿದರೆ ರಾಜೀನಾಮೆ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಹೇಳಿಗೆ ಬಗ್ಗೆ ಮಾತನಾಡಿದ ಕಟೀಲ್, ರಾಜ್ಯದ ಮುಖ್ಯಮಂತ್ರಿ ಬಿಎಸ್ವೈ ರಾಜೀನಾಮೆ ಕೊಡುತ್ತೇನೆಂದು ಹೇಳಿಲ್ಲ. ಹೈಕಮಾಂಡ್ ಸೂಚಿಸಿದರೆ ರಾಜೀನಾಮೆ ಕೊಡುತ್ತೇನೆ ಎಂದಿದ್ದಾರೆ. ಇದು ಒಬ್ಬ ಆದರ್ಶ ಕಾರ್ಯಕರ್ತನ ಲಕ್ಷಣ. ಎಲ್ಲ ಕಾರ್ಯಕರ್ತರಿಗೆ ಪ್ರೇರಣೆಯಾಗುವಂತೆ ಹೇಳಿದ್ದಾರೆ.

ನಮ್ಮ ಪಕ್ಷ ವಿಭಿನ್ನವಾಗಿರುವಂತಹ ಪಕ್ಷ. ನಾವೆಲ್ಲರೂ ಹಿರಿಯರು ಏನು ಸೂಚನೆ ಕೊಡುತ್ತಾರೋ ಅದನ್ನ ಪಾಲಿಸುತ್ತೇವೆ. ಎಲ್ಲ ಕಾರ್ಯಕರ್ತರಿಗೆ ಪ್ರೇರಣೆಯಾಗುವಂತೆ ಮುಖ್ಯಮಂತ್ರಿ ಹೇಳಿಕ ನೀಡಿದ್ದಾರೆ. ಆದರೆ ನಾಯಕತ್ವ ಬದಲಾವಣೆ ಬಗ್ಗೆ ಎಲ್ಲೂ ಚರ್ಚೆಯಾಗಿಲ್ಲ. ಹೈಕಮಾಂಡ್ ಮಟ್ಟದಲ್ಲಿ, ಶಾಸಕಾಂಗ ಪಕ್ಷದ ಸಭೆ, ಕೋರ್ ಕಮಿಟಿ ಸೇರಿದಂತೆ ಎಲ್ಲಿಯೂ ಚರ್ಚೆಯಾಗಿಲ್ಲ ಎಂದು ಹೇಳಿದರು.

ಇದನ್ನೂ ಓದಿ

ಕೊವಿಡ್​ 19 ಮೂರನೇ ಅಲೆ ಮಕ್ಕಳಿಗೇ ಬಾಧಿಸುತ್ತದೆ ಎಂಬುದಕ್ಕೆ ಯಾವುದೇ ಸಾಕ್ಷಿಯೂ ಇಲ್ಲ: ಡಾ.ವಿಕೆ.ಪೌಲ್​

PMGKY 2021: ದೀಪಾವಳಿವರೆಗೂ ಮುಂದುವರಿದ ಪ್ರಧಾನಮಂತ್ರಿ ಗರೀಬ್​ ಕಲ್ಯಾಣ್​ ಯೋಜನೆ; ಅಪ್ಲೈ ಮಾಡುವ ವಿಧಾನ ಇಲ್ಲಿದೆ..

(Nalin Kumar Kateel said there was no signature collection pressure and force in BJP)