ಲಾಲ್​ಬಾಗ್ ಫ್ಲವರ್ ​​ಶೋ ವೀಕ್ಷಿಸಲು ತೆರಳುವವರಿಗೆ ಗುಡ್​ನ್ಯೂಸ್ ನೀಡಿದ ನಮ್ಮ ಮೆಟ್ರೋ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 12, 2024 | 4:51 PM

ಪ್ರಯಾಣಿಕರ ಅನುಕೂಲ ದೃಷ್ಟಿಯಿಂದ ಮೆಟ್ರೋದಲ್ಲಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪೇಪರ್ ಟಿಕೆಟ್ ಲಭ್ಯವಾಗಲಿದೆ. ಲಾಲ್​​ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ 30 ರೂ. ಪೇಪರ್ ಟಿಕೆಟ್ ಪಡೆದು ಪ್ರಯಾಣಿಸಬಹುದೆ. ಎಎಫ್​ಸಿ ಗೇಟ್​ ಬಳಸಿ ಯಾವುದೇ ನಿಲ್ದಾಣಕ್ಕೆ ಪ್ರಯಾಣ ಬೆಳೆಸಬಹುದಾಗಿದೆ.

ಲಾಲ್​ಬಾಗ್ ಫ್ಲವರ್ ​​ಶೋ ವೀಕ್ಷಿಸಲು ತೆರಳುವವರಿಗೆ ಗುಡ್​ನ್ಯೂಸ್ ನೀಡಿದ ನಮ್ಮ ಮೆಟ್ರೋ
ಲಾಲ್​ಬಾಗ್ ಫ್ಲವರ್ ​​ಶೋ ವೀಕ್ಷಿಸಲು ತೆರಳುವವರಿಗೆ ಗುಡ್​ನ್ಯೂಸ್ ನೀಡಿದ ನಮ್ಮ ಮೆಟ್ರೋ
Follow us on

ಬೆಂಗಳೂರು, ಆಗಸ್ಟ್​ 12: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸಸ್ಯಕಾಶಿ ಲಾಲ್​ಬಾಗ್​ನಲ್ಲಿ ಈಗಾಗಲೇ ಫ್ಲವರ್​ಶೋ ನಡೆಯುತ್ತಿದೆ. ಸಂವಿಧಾನ ಶಿಲ್ಪಿ ಡಾ. ಬಿಆರ್​ ಅಂಬೇಡ್ಕರ್ ವಿಷಯಾಧಾರಿತವಾಗಿ ಫ್ಲವರ್​ ಶೋ ಪ್ರದರ್ಶನಗೊಳ್ಳುತ್ತಿದೆ. ಇದೀಗ ಫ್ಲವರ್ ​​ಶೋ ವೀಕ್ಷಿಸಲು ತೆರಳುವವರಿಗೆ ಬೆಂಗಳೂರು ಮೆಟ್ರೋ (Metro) ರೈಲು ನಿಗಮ (BMRCL) ಸಿಹಿಸುದ್ದಿ ನೀಡಿದೆ. ಆ. 15, 17 ಮತ್ತು 18ರಂದು ಮೆಟ್ರೋದಲ್ಲಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.

ಪ್ರಯಾಣಿಕರ ಅನುಕೂಲ ದೃಷ್ಟಿಯಿಂದ ಮೆಟ್ರೋದಲ್ಲಿ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಪೇಪರ್ ಟಿಕೆಟ್ ಲಭ್ಯವಾಗಲಿದೆ. ಲಾಲ್​​ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ 30 ರೂ. ಪೇಪರ್ ಟಿಕೆಟ್ ಪಡೆದು ಪ್ರಯಾಣಿಸಬಹುದೆ. ಎಎಫ್​ಸಿ ಗೇಟ್​ ಬಳಸಿ ಯಾವುದೇ ನಿಲ್ದಾಣಕ್ಕೆ ಪ್ರಯಾಣ ಬೆಳೆಸಬಹುದಾಗಿದೆ.

ಇದನ್ನೂ ಓದಿ: ವೀಕೆಂಡ್​​ನಲ್ಲಿ ಲಾಲ್​ ಬಾಗ್​ಗೆ ಲಗ್ಗೆಯಿಟ್ಟ ಸಿಲಿಕಾನ್​ ಮಂದಿ: ನಾಲ್ಕನೇ ದಿನದ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್

ರಿಟರ್ನ್ ಜರ್ನಿ ಪೇಪರ್ ಟಿಕೆಟ್‌ಗಳು ಖರೀದಿಸಿದ ದಿನದಂದು ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಯಾವುದೇ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸಬಹುದಾಗಿದೆ. ಸಾರ್ವಜನಿಕರು ಟೋಕನ್, ಕಾರ್ಡ್. ಕ್ಯೂಆರ್ ಟಿಕೆಟ್‌ಗಳ ಮೂಲಕ ಲಾಲ್‌ಬಾಗ್ ನಿಲ್ದಾಣಕ್ಕೆ ಪ್ರಯಾಣಿಸಬಹುದು ಹಾಗೂ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಿಂದ ಹಿಂತಿರುಗಲು ಟೋಕನ್ ಗಳ ಬದಲಿಗೆ ಪೇಪರ್ ಟಿಕೆಟ್, ಕಾರ್ಡ್, ಮತ್ತು ಕ್ಯೂಆರ್ ಟಿಕೆಟ್ ಮೂಲಕ ಮಾತ್ರ ಪ್ರಯಾಣಿಸಬಹುದು.

ನಮ್ಮ ಮೆಟ್ರೋ ಟ್ವೀಟ್​

ಮೇಲಿನ ದಿನಾಂಕಗಳಲ್ಲಿ ಮತ್ತು ಅವಧಿಯಲ್ಲಿ ಲಾಲ್‌ಬಾಗ್ ಮೆಟ್ರೋ ನಿಲ್ದಾಣದಲ್ಲಿ ಟೋಕನ್‌ಗಳನ್ನು ನೀಡಲಾಗುವುದಿಲ್ಲ. ಟಿಕೆಟ್‌ಗಳನ್ನು ಖರೀದಿಸಲು ಕಾಯುವ ಸಮಯವನ್ನು ತಪ್ಪಿಸಲು ಪ್ರಯಾಣಿಕರು ತಮ್ಮ ಪ್ರಯಾಣಕ್ಕೆ ಮುಂಚಿತವಾಗಿ ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಲು ವಿನಂತಿಸಲಾಗಿದೆ. ಸಾರ್ವಜನಿಕರ ಸುಗಮ ಪ್ರಯಾಣಕ್ಕಾಗಿ ಈ ಸೌಲಭ್ಯವನ್ನು ಬಳಸಿಕೊಳ್ಳುವಂತೆ ಕೋರಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.