ಇಂದು ಈ ಮಾರ್ಗದಲ್ಲಿ ಪ್ರಯಾಣಿಕರಿಗಿಲ್ಲ ಮೆಟ್ರೋ ಸೇವೆ!
ಬೆಂಗಳೂರು: 33 ಕೆವಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ಹಿನ್ನೆಲೆ ಇಂದು ಹಸಿರು ಮಾರ್ಗ ಮೆಟ್ರೋ ಸ್ಥಗಿತಗೊಳ್ಳಲಿದೆ. ಆರ್.ವಿ.ರಸ್ತೆ-ಯಲಚೇನಹಳ್ಳಿ ಮಾರ್ಗದಲ್ಲಿ ಸಾಗುವ ಮೆಟ್ರೋ ಇಂದು ಅಂದರೆ ಒಂದು ದಿನದ ಮಟ್ಟಿಗೆ ತನ್ನ ಸಂಚಾರವನ್ನು ನಿಲ್ಲಿಸಲಿದೆ. ರೀಚ್-4ಮಾರ್ಗಕ್ಕೆ ವಿದ್ಯುತ್ ಸ್ವೀಕರಿಸುವ ಉಪಕೇಂದ್ರದಿಂದ ಯಲಚೇನಹಳ್ಳಿ ನಿಲ್ದಾಣ ಮತ್ತು ಅದಕ್ಕಿಂತ ಮುಂದುವೆರೆದು ಅಂಜನಾಪುರದ ನಿಲ್ದಾಣದ ವರೆಗೆ 33 ಕೆವಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯಲಿದೆ. ಹೀಗಾಗಿ ಮೆಟ್ರೋ ಸಂಚಾರ ಇರುವುದಿಲ್ಲ. ಇನ್ನು ಇದೇ ಹಸಿರು ಮಾರ್ಗದ ಮೆಟ್ರೋ ನಾಗಸಂದ್ರ-ಆರ್.ವಿ.ರಸ್ತೆ ನಡುವೆ […]
ಬೆಂಗಳೂರು: 33 ಕೆವಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ಹಿನ್ನೆಲೆ ಇಂದು ಹಸಿರು ಮಾರ್ಗ ಮೆಟ್ರೋ ಸ್ಥಗಿತಗೊಳ್ಳಲಿದೆ. ಆರ್.ವಿ.ರಸ್ತೆ-ಯಲಚೇನಹಳ್ಳಿ ಮಾರ್ಗದಲ್ಲಿ ಸಾಗುವ ಮೆಟ್ರೋ ಇಂದು ಅಂದರೆ ಒಂದು ದಿನದ ಮಟ್ಟಿಗೆ ತನ್ನ ಸಂಚಾರವನ್ನು ನಿಲ್ಲಿಸಲಿದೆ.
ರೀಚ್-4ಮಾರ್ಗಕ್ಕೆ ವಿದ್ಯುತ್ ಸ್ವೀಕರಿಸುವ ಉಪಕೇಂದ್ರದಿಂದ ಯಲಚೇನಹಳ್ಳಿ ನಿಲ್ದಾಣ ಮತ್ತು ಅದಕ್ಕಿಂತ ಮುಂದುವೆರೆದು ಅಂಜನಾಪುರದ ನಿಲ್ದಾಣದ ವರೆಗೆ 33 ಕೆವಿ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯಲಿದೆ. ಹೀಗಾಗಿ ಮೆಟ್ರೋ ಸಂಚಾರ ಇರುವುದಿಲ್ಲ.
ಇನ್ನು ಇದೇ ಹಸಿರು ಮಾರ್ಗದ ಮೆಟ್ರೋ ನಾಗಸಂದ್ರ-ಆರ್.ವಿ.ರಸ್ತೆ ನಡುವೆ ಎಂದಿನಂತೆ ಮೆಟ್ರೋ ಸೇವೆ ಲಭ್ಯವಿರಲಿದೆ. ಹಾಗೂ ಬೈಯಪ್ಪನಹಳ್ಳಿ-ಮೈಸೂರುವರೆಗಿನ ನೇರಳೆ ಮಾರ್ಗದ ರೈಲು ಸಂಚಾರದಲ್ಲೂ ಬದಲಾವಣೆ ಇಲ್ಲ. ನಾಗಸಂದ್ರ ಮತ್ತು ಯಲಚೇನಹಳ್ಳಿ ನಿಲ್ದಾಣಗಳ ನಡುವೆ ಫೆಬ್ರವರಿ 17ರಂದು ಬೆಳಗ್ಗೆ 5ರಿಂದ ಎಂದಿನಂತೆ ಸೇವೆ ಪುನರಾಂಭವಾಗಲಿದೆ ಎಂದು ಬಿಎಂಆರ್ಸಿಎಲ್ ಪ್ರಕಟಣೆ ಹೊರಡಿಸಿದೆ.