ನಮ್ಮ ಸುತ್ತಮುತ್ತ ಇರುವ ಹಕ್ಕಿಗಳನ್ನು ಪರಿಚಯಿಸುವ ಫ್ಲ್ಯಾಶ್‌ಕಾರ್ಡ್ ಆಟ ಬಿಡುಗಡೆ

ಕನ್ನಡದಲ್ಲಿ ಪ್ರಕಟಿಸಲಾದ ಈ ಫ್ಲಾಶ್ ಕಾರ್ಡ್ ಗಳ ಸೆಟ್ ಎಲ್ಲಾ ವಯಸ್ಸಿನವರಿಗೂ ಸೂಕ್ತವಾಗುವಂತೆ ಶೈಕ್ಷಣಿಕ ಆಟವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ಕಾರ್ಡು, ಕರ್ನಾಟಕದ ಸಾಮಾನ್ಯ ಹಕ್ಕಿ ಪ್ರಭೇದವೊಂದನ್ನು ಹೊಂದಿದ್ದು, ಒಂದು ಬದಿಯಲ್ಲಿ ಛಾಯಾಚಿತ್ರಗಳಿವೆ.ಇನ್ನೊಂದೆಡೆ ಆವಾಸಸ್ಥಾನ, ಆಹಾರ ಹಾಗೂ ಗಾತ್ರದ ಚಿಹ್ನೆಗಳನ್ನೊಳಗೊಂಡು ಹಕ್ಕಿಯ ನಡವಳಿಕೆ ಮತ್ತು ವ್ಯಾಪ್ತಿಯ ಬಗ್ಗೆ ಮಾಹಿತಿ ಹೊಂದಿದೆ.

ನಮ್ಮ ಸುತ್ತಮುತ್ತ ಇರುವ ಹಕ್ಕಿಗಳನ್ನು ಪರಿಚಯಿಸುವ ಫ್ಲ್ಯಾಶ್‌ಕಾರ್ಡ್ ಆಟ ಬಿಡುಗಡೆ
ಯಾವುದೇ ಹಕ್ಕಿ
Edited By: ರಶ್ಮಿ ಕಲ್ಲಕಟ್ಟ

Updated on: Jan 03, 2024 | 2:36 PM

ನವೆಂಬರ್ 1 ಕರ್ನಾಟಕ ರಾಜ್ಯೋತ್ಸವದಂದು ನಾಡಿನ ನೈಸರ್ಗಿಕ ವೈವಿಧ್ಯತೆಯನ್ನು ಆಚರಿಸುವ ಸಲುವಾಗಿ ‘ನೇಚರ್ ಕನ್ಸರ್ವೇಷನ್ ಫೌಂಡೇಶನ್’ ಸಂಸ್ಥೆಯ ಅರ್ಲಿ ಬರ್ಡ್(early-bird.in), ಮಕ್ಕಳು ಮತ್ತು ಪ್ರಕೃತಿ ಶಿಕ್ಷಕರಿಗಾಗಿ ವಿಶಿಷ್ಟವಾದ ಫ್ಲ್ಯಾಷ್‌ಕಾರ್ಡ್‌ಗಳ ಆಟವನ್ನು ಬಿಡುಗಡೆ ಮಾಡಿದೆ. ‘ಯಾವುದೀ ಹಕ್ಕಿ?’ ಎಂಬುದು ಹೊಸ ಶೈಕ್ಷಣಿಕ ಆಟವಾಗಿದ್ದು, ತಮ್ಮ ಸುತ್ತಮುತ್ತ ಕಂಡುಬರುವ ಸಾಮಾನ್ಯ ಹಕ್ಕಿಗಳನ್ನು ಮಕ್ಕಳಿಗೆ ಪರಿಚಯಿಸಲು ರಚಿಸಲಾಗಿದೆ. 40 ಫ್ಲಾಶ್ ಕಾರ್ಡ್ಸ್ ಗಳ ಈ ಸೆಟ್ ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡುಬರುವ ಹಕ್ಕಿ ಪ್ರಭೇದಗಳು, ಅವುಗಳ ನಡವಳಿಕೆ ಮತ್ತು ಅವುಗಳ ಬಗ್ಗೆಗಿನ ಮೋಜಿನ ಸಂಗತಿಗಳನ್ನು ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಯಾರಿಗಾದರೂ ಉಪಯೋಗಕ್ಕೆ ಬರುತ್ತದೆ. ತರಗತಿಯ ಒಳಗೆ ಮತ್ತು ಹೊರಗೆ ಮಕ್ಕಳನ್ನು ತೊಡಗಿಸಿಕೊಳ್ಳಲು ಸೃಜನಶೀಲ ಮಾರ್ಗಗಳನ್ನು ಹುಡುಕುತ್ತಿರುವ ಶಿಕ್ಷಕರಿಗೆ ಇದು ವಿಶೇಷವಾಗಿ ಉಪಯುಕ್ತವಾಗಿದೆ.

‘ಯಾವುದೀ ಹಕ್ಕಿ?’ ಬಗ್ಗೆ ಮಾಹಿತಿ

ವೈವಿಧ್ಯತೆಯ ಆವಾಸಸ್ಥಾನಗಳನ್ನು ಒಳಗೊಂಡಿರುವ ಕರ್ನಾಟಕದ ರಾಜ್ಯಅದ್ಭುತವಾದ ಹಕ್ಕಿ ಪ್ರಭೇದಗಳಿಗೆ ನೆಲೆಯಾಗಿದೆ. ಆದರೆ, ಮಕ್ಕಳಿಗೆ ಕಲಿಯಲು ಮತ್ತು ಪಕ್ಷಿವೀಕ್ಷಣೆಯಿಂದ ಉತ್ಸುಕರಾಗಲು ಬೇಕಾದ ಸಂಪನ್ಮೂಲ ಸಾಮಗ್ರಿಗಳ ಕೊರತೆ ಇದೆ. ಇದಲ್ಲದೆ, ಸ್ಥಳೀಯ ಭಾಷೆಯಲ್ಲಿ ಉತ್ತಮ ಗುಣಮಟ್ಟದ ಶೈಕ್ಷಣಿಕ ಸಾಮಗ್ರಿಗಳು ದೊರೆಯುವುದು ಇನ್ನೂ ಕಷ್ಟ. ಕನ್ನಡದಲ್ಲಿ ಪ್ರಕಟಿಸಲಾದ ಈ ಫ್ಲಾಶ್ ಕಾರ್ಡ್ ಗಳ ಸೆಟ್ ಈ ಅಂತರವನ್ನು ತುಂಬುವ ಗುರಿಯನ್ನು ಹೊಂದಿದೆ. ಎಲ್ಲಾ ವಯಸ್ಸಿನವರಿಗೂ ಸೂಕ್ತವಾಗುವಂತೆ ಶೈಕ್ಷಣಿಕ ಆಟವಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ಕಾರ್ಡು, ಕರ್ನಾಟಕದ ಸಾಮಾನ್ಯ ಹಕ್ಕಿ ಪ್ರಭೇದವೊಂದನ್ನು ಹೊಂದಿದ್ದು, ಒಂದು ಬದಿಯಲ್ಲಿ ಛಾಯಾಚಿತ್ರಗಳಿವೆ. ಇನ್ನೊಂದೆಡೆ ಆವಾಸಸ್ಥಾನ, ಆಹಾರ ಹಾಗೂ ಗಾತ್ರದ ಚಿಹ್ನೆಗಳನ್ನೊಳಗೊಂಡು ಹಕ್ಕಿಯ ನಡವಳಿಕೆ ಮತ್ತು ವ್ಯಾಪ್ತಿಯ ಬಗ್ಗೆ ಮಾಹಿತಿ ಹೊಂದಿದೆ. ಕಾರ್ಡ್‌ಗಳು ಪೋಸ್ಟ್‌ಕಾರ್ಡ್ ಗಾತ್ರದಲ್ಲಿದ್ದು ಲ್ಯಾಮಿನೇಟ್ ಆಗಿರುತ್ತದೆ. ಈ ಕಾರ್ಡು ಗಳನ್ನು ಒಳಾಂಗಣ ಅಥವಾ ಹೊರಾಂಗಣದಲ್ಲಿ, ತರಗತಿ ಅಥವಾ ವೈಯಕ್ತಿಕ ಅಥವಾ ಗುಂಪು ಚಟುವಟಿಕೆಗಳಲ್ಲಿ ಬಳಸಬಹುದು. ಸೂಚನೆಗಳ ಕಾರ್ಡ್‌ ಒಂದು ಕೂಡಿದ್ದು, ಇದು ಕಾರ್ಡ್‌ಗಳೊಂದಿಗೆ ಆಡಬಹುದಾದ ಎರಡು ಆಟಗಳನ್ನು ವಿವರಿಸುತ್ತದೆ. 4 ಹೆಚ್ಚುವರಿ ಆಟಗಳ ಮೂಲಕ ಬಳಕೆದಾರರಿಗೆ ಮಾರ್ಗದರ್ಶನ ನೀಡುವ ಸೂಚನಾ ವಿಡಿಯೊಗಳು ಅರ್ಲಿ ಬರ್ಡ್‌ನ YouTube ಚಾನಲ್‌ನಲ್ಲಿ (youtube.com/EarlyBirdIndia) ವೀಕ್ಷಿಸಲು ಲಭ್ಯವಿದೆ. ಪ್ರತಿಯೊಂದು ಕಾರ್ಡು ಕರ್ನಾಟಕದ ಒಂದು ಪರಿಚಿತ ಹಕ್ಕಿಯ ಛಾಯಾಚಿತ್ರ ಮತ್ತು ಮಾಹಿತಿಯನ್ನೊಳಗೊಂಡಿದೆ

ಅಂದಹಾಗೆ ‘ಯಾವುದೀ ಹಕ್ಕಿ?’ ಅರ್ಲಿ ಬರ್ಡ್‌ನ ಜನಪ್ರಿಯ ಇಂಗ್ಲಿಷ್ ಫ್ಲ್ಯಾಷ್‌ಕಾರ್ಡ್‌ಗಳಾದ ‘ವಾಟ್ಸ್ ದಟ್ ಬರ್ಡ್?’ ನ ಕನ್ನಡ ಅನುವಾದ. 2016 ರಲ್ಲಿ ಮೊದಲ ಬಾರಿಗೆ ಪ್ರಕಟವಾದ ಇದು ಸಾವಿರಾರು ಮಕ್ಕಳಿಗೆ ಹಕ್ಕಿಗಳು ಮತ್ತು ಪ್ರಕೃತಿಯನ್ನು ಆಟದ ಮೂಲಕ ಪರಿಚಯಿಸಲು ಸಹಾಯ ಮಾಡಿದೆ.

ಬೆಂಗಳೂರಿನಲ್ಲಿ Std XI ವಿದ್ಯಾರ್ಥಿಯಾಗಿರುವ ಅನಿರುದ್ಧ್ ಅರುಣ್ ಅವರಿಗೆ 5 ವರ್ಷಗಳ ಹಿಂದೆ ಅವರ ಅಪ್ಪ ‘ವಾಟ್ಸ್ ದಟ್ ಬರ್ಡ್?’ ಫ್ಲ್ಯಾಷ್‌ಕಾರ್ಡ್‌ ಸೆಟ್ ತಂದುಕೊಟ್ಟಿದ್ದು  ನಂತರ ಅವರು ಅತ್ಯಾಸಕ್ತಿಯ ಪಕ್ಷಿವೀಕ್ಷಕರಾದರು. “ನಾವು ಪ್ರತಿದಿನ ಒಂದು ಹೊಸ ಹಕ್ಕಿಯ ಬಗ್ಗೆ ಕಲಿಯುತ್ತಿದ್ದೆವು. ನಮ್ಮ ನೆರೆಹೊರೆಯ ಸಾಮಾನ್ಯ ಹಕ್ಕಿಗಳ ಬಗ್ಗೆ ಪರಸ್ಪರ ರಸಪ್ರಶ್ನೆ ಕೇಳುತ್ತಿದ್ದೆವು . ಈ ಆಟ ನಿಧಾನವಾಗಿ ನನ್ನಲ್ಲಿ ಉತ್ಸಾಹವನ್ನು ಬೆಳೆಸಿತು. ನಾನು ಹಕ್ಕಿಗಳನ್ನು ನೋಡುವುದಕೋಸ್ಕರವಾಗಿಯೇ ನನ್ನ ನೆರೆಹೊರೆಯಲ್ಲಿ ನಡೆಯುತ್ತಿದ್ದೆ” ಎಂದು ಹೇಳುತ್ತಾರೆ ಅನಿರುದ್ಧ್. ಹಕ್ಕಿಗಳ ಬಗೆಗಿನ ಅವರ ಉತ್ಸಾಹವು, ಈ ವರ್ಷ ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿಯ ಯುವ ಪಕ್ಷಿಗಾರರ ಸಮ್ಮೇಳನಕ್ಕೆ ವಿಶ್ವದಾದ್ಯಂತ ಆಯ್ಕೆಯಾದ 16 ವಿದ್ಯಾರ್ಥಿಗಳಲ್ಲಿ ಒಬ್ಬರಾಗಲು ಕಾರಣವಾಯಿತು. ಅನಿರುದ್ಧ್ ಈಗ ಅರ್ಲಿ ಬರ್ಡ್ ತಂಡದೊಂದಿಗೆ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುತ್ತಾರೆ.

‘ಅರಣ್ಯ ವಸತಿ ಮತ್ತು ವಿಹಾರಧಾಮಗಳ’ ಸಂಸ್ಥೆ ಈ ಕನ್ನಡ ಫ್ಲ್ಯಾಶ್‌ಕಾರ್ಡ್‌ಗಳ ಮುದ್ರಣವನ್ನು ಆರ್ಥಿಕವಾಗಿ ಬೆಂಬಲಿಸಿದ್ದು, ಅವರ ಈ ಕೊಡುಗೆಯ ದೆಸೆಯಿಂದ ಕರ್ನಾಟಕದ ಅರ್ಹ ಕನ್ನಡ ಶಾಲೆಗಳಿಗೆ ‘ಯಾವುದೀ ಹಕ್ಕಿ?’ ಯ ನೂರಾರು ಸೆಟ್‌ಗಳನ್ನು ಉಚಿತವಾಗಿ ವಿತರಿಸಲಾಗುತ್ತದೆ. ನೀವು, ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳು ಅಥವಾ ಗ್ರಾಮೀಣ ಶಾಲೆಗಳೊಂದಿಗೆಕೆಲಸ ಮಾಡುತ್ತಿರುವ ಶಿಕ್ಷಕರು ಅಥವಾ ಲಾಭರಹಿತ ಸಂಸ್ಥೆ ಆಗಿದ್ದರೆ, ಉಚಿತವಾಗಿ ಫ್ಲ್ಯಾಷ್‌ಕಾರ್ಡ್‌ಗಳನ್ನು ಸ್ವೀಕರಿಸಲು ಈ ಫಾರ್ಮ್ ಅನ್ನು ಭರ್ತಿ ಮಾಡಿ:
‘ಯಾವುದೀ ಹಕ್ಕಿ?’ ಸೆಟ್ ಖರೀದಿಗೆ ಸಹ ಲಭ್ಯವಿದ್ದು, ‘ನೇಚರ್ ಕನ್ಸರ್ವೇಷನ್ ಫೌಂಡೇಶನ್’ ನ ಆನ್ಲೈನ್ ಅಂಗಡಿಯಲ್ಲಿ ncf.myinstamojo.com ರೂ.350.00 ಕ್ಕೆ ಖರೀದಿಸಬಹುದು.

ಲೇಖಕರ ಬಗ್ಗೆ
1. ಗರಿಮಾ ಭಾಟಿಯಾ, ಅರ್ಲಿ ಬರ್ಡ್‌ನ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ. ಗರಿಮಾ, ಹಕ್ಕಿಗಳ ಬಗ್ಗೆ ಆಸಕ್ತಿ ಹೊಂದಿದ್ದು ತನ್ನ ಉತ್ಸಾಹವನ್ನು ಇತರರೊಂದಿಗೆ ಹಂಚಿಕೊಳ್ಳಲು ಆನಂದಿಸುತ್ತಾರೆ.
2. ಸುಹೇಲ್ ಕಾದರ್ ವನ್ಯಜೀವಿ ಜೀವಶಾಸ್ತ್ರಜ್ಞರಾಗಿದ್ದು, ನೇಚರ್ ಕನ್ಸರ್ವೇಶನ್ ಫೌಂಡೇಶನ್‌ನಲ್ಲಿ ವಿಜ್ಞಾನಿ.
3. ಸಹಯೋಗಿಗಳು: ಕನ್ನಡಕ್ಕೆ ಅನುವಾದಿಸಿದವರು ಹರೀಶ ಎ ಎಸ್, ಅರವಿಂದ್ ಕುಡ್ಲ ಮತ್ತು ಅಭಿಷೇಕ ಕೃಷ್ಣಗೋಪಾಲ್. ಭಾರತದಾದ್ಯಂತದ ಪ್ರಮುಖ ಹಕ್ಕಿ ಛಾಯಾಗ್ರಾಹಕರಿಂದ ಛಾಯಾಚಿತ್ರಗಳನ್ನು ಪಡೆಯಲಾಗಿದೆ.

ಅರ್ಲಿ ಬರ್ಡ್ ಬಗ್ಗೆ ಮಾಹಿತಿ

ಅರ್ಲಿ ಬರ್ಡ್, ಹಕ್ಕಿಗಳು ಮತ್ತು ಪ್ರಕೃತಿಯ ಕುರಿತಾದ ಕಲಿಕೆಯ ಕಾರ್ಯಕ್ರಮ. ಆಂಗ್ಲ ಭಾಷೆಯ ಜೊತೆಗೆ 9 ಭಾರತೀಯ ಭಾಷೆಗಳಲ್ಲಿ ಲಭ್ಯವಿರುವ ಭಾರತೀಯ ಹಕ್ಕಿಗಳ ಬಗ್ಗೆಗಿನ ನವೀನ ಶೈಕ್ಷಣಿಕ ಸಾಮಗ್ರಿಗಳ ವಿತರಣೆಯ ಮೂಲಕ, 3 ಲಕ್ಷಕ್ಕೂ ಹೆಚ್ಚು ಮಕ್ಕಳ ಮೇಲೆ ಅರ್ಲಿ ಬರ್ಡ್ ಪ್ರಭಾವ ಬೀರಿದೆ. ಅರ್ಲಿ ಬರ್ಡ್, ನೇಚರ್ ಕನ್ಸರ್ವೇಶನ್ ಫೌಂಡೇಶನ್ (NCF) ನ ಒಂದು ಭಾಗವಾಗಿದೆ, ಇದು ಭಾರತದ ಅನನ್ಯ ವನ್ಯಜೀವಿ ಪರಂಪರೆಯ ಜ್ಞಾನ ಮತ್ತು ಸಂರಕ್ಷಣೆಗೆ ಕೊಡುಗೆ ನೀಡಲು ಸ್ಥಾಪಿಸಲಾದ 25 ವರ್ಷದ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ಆಗಿದೆ.

TV9 Web

TV9 Kannada

Read More
Loading...
Unable to load recommendations.
Follow Us