ಬೆಂಗಳೂರಿನಲ್ಲಿ ಡ್ರಗ್ಸ್ ಸೇವನೆ, ಮಾರಾಟ ಶಂಕೆ ಹಿನ್ನೆಲೆ ಅಪಾರ್ಟ್​ಮೆಂಟ್​ ಮೇಲೆ ಎನ್​ಸಿಬಿ ದಾಳಿ; ಮೂವರು ಯುವತಿಯರು ವಶ

| Updated By: ಆಯೇಷಾ ಬಾನು

Updated on: Dec 01, 2022 | 7:22 AM

ಓರ್ವ ಯುವತಿ ಡಾರ್ಕ್​ವೆಬ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದು ಆಕೆಗೆ ಡಾರ್ಕ್​ವೆಬ್​​ ಲಿಂಕ್ ಇರುವ ಮಾಹಿತಿ ಸಿಕ್ಕಿದೆ. ಉತ್ತರ ಭಾರತ ಮೂಲದ ಮೂವರು ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರಿನಲ್ಲಿ ಡ್ರಗ್ಸ್ ಸೇವನೆ, ಮಾರಾಟ ಶಂಕೆ ಹಿನ್ನೆಲೆ ಅಪಾರ್ಟ್​ಮೆಂಟ್​ ಮೇಲೆ ಎನ್​ಸಿಬಿ ದಾಳಿ; ಮೂವರು ಯುವತಿಯರು ವಶ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಬೆಂಗಳೂರಿನಲ್ಲಿ ತಡರಾತ್ರಿ ಎನ್​ಸಿಬಿ ಅಧಿಕಾರಿಗಳ(NCB Officials) ದಾಳಿ ನಡೆದಿದೆ. ಡ್ರಗ್ಸ್​(Drugs)ಸೇವನೆ ಬಗ್ಗೆ ಖಚಿತ ಮಾಹಿತಿ ಆಧರಿಸಿ ಮಡಿವಾಳ ಠಾಣಾ ವ್ಯಾಪ್ತಿಯ​​ ಅಪಾರ್ಟ್​ಮೆಂಟ್​ ಮೇಲೆ ಎನ್​ಸಿಬಿ ದಾಳಿ ಮಾಡಿದೆ. ಈ ವೇಳೆ ಉತ್ತರ ಭಾರತ ಮೂಲದ ಮೂವರು ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ.

ಓರ್ವ ಯುವತಿ ಡಾರ್ಕ್​ವೆಬ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿದ್ದು ಆಕೆಗೆ ಡಾರ್ಕ್​ವೆಬ್​​ ಲಿಂಕ್ ಇರುವ ಮಾಹಿತಿ ಸಿಕ್ಕಿದೆ. MBA ಮಾಡಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಡ್ರಗ್​ ಡೀಲ್ ಶಂಕೆ ಹಿನ್ನೆಲೆ ಹೆಚ್ಚಿನ ತನಿಖೆಗಾಗಿ ಯುವತಿಯನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ NCB ಅಧಿಕಾರಿಗಳಿಂದ ಮೂವರು ಯುವತಿಯರ ವಿಚಾರಣೆ ನಡೆಯಲಿದೆ.

ಲೋಹದ ಬಿಂದಿಗೆ ತೋರಿಸಿ ವಂಚನೆಗೆ ಪ್ಲಾನ್, ಆರೋಪಿಗಳ ಬಂಧನ

ಲೋಹದ ಬಿಂದಿಗೆ ತೋರಿಸಿ ವಂಚಿಸಲು ಪ್ಲಾನ್ ಹಾಕಿದ್ದ ಇಬ್ಬರು ಆರೋಪಿಗಳನ್ನು ವೈಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಮೂಲದ ಮಹಮ್ಮದ್ ಮುಸ್ತಾಫ್, ಮೊಹಮ್ಮದ್ ಮುಬೀನ್ ಬಂಧಿತರು. ಇವರು ಲೋಹದ ಕೆಲ ವಸ್ತುಗಳನ್ನು ತೋರಿಸಿ ಇದನ್ನ ಖರೀದಿಸಿ ಮನೆಯಲ್ಲಿಟ್ಟುಕೊಂಡರೆ ಬೇಗ ಶ್ರೀಮಂತರಾಗ್ತೀರಾ ಎಂದು ಹೇಳಿ ವಂಚಿಸುತ್ತಿದ್ದರು. ಲೋಹದ ಬಿಂದಿಗೆ, ನಂದಿ ವಿಗ್ರಹ, ಹಳೇ ನಾಣ್ಯ, ದೂರದರ್ಶಕ ತೋರಿಸಿ ಆಮಿಷವಡ್ಡುತ್ತಿದ್ದರು. ಮೊಳಕಾಲ್ಮೂರಿನ ವ್ಯಕ್ತಿಯೊಬ್ಬನಿಂದ ಖರೀದಿಸಿ ವಸ್ತುಗಳನ್ನ ತಂದಿದ್ದ ಆರೋಪಿಗಳು ವೈಯಾಲಿಕಾವಲ್ ಠಾಣಾ ವ್ಯಾಪ್ತಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ ಮಾರಲು ಯತ್ನಿಸಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಖಚಿತ ಮಾಹಿತಿ ಆಧರಿಸಿ ಆರೋಪಿಗಳನ್ನ ಬಂಧಿಸಲಾಗಿದೆ.

ಇದನ್ನೂ ಓದಿ: Digital Rupee: ಇಂದು ಡಿಜಿಟಲ್ ರೂಪಾಯಿ ಬಿಡುಗಡೆ; ಬೆಂಗಳೂರಿನಲ್ಲೂ ಸಿಗಲಿದೆ ಇ-ರೂಪಾಯಿ

ಸಾಲಬಾಧೆಗೆ ರೈತ ಮಹಿಳೆ ಆತ್ಮಹತ್ಯೆ

ಮೈಸೂರಿನ ಹುಣಸೂರು ತಾಲ್ಲೂಕು ಮುತ್ತುರಾಯನ ಹೊಸಹಳ್ಳಿ ಗ್ರಾಮದಲ್ಲಿ ಸಾಲಬಾಧೆ ತಾಳಲಾರದೆ ರೈತ ಮಹಿಳೆ ರತ್ನಮ್ಮ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಹಾಗೂ ಟ್ರ್ಯಾಕ್ಟರ್ ಖರೀದಿಗಾಗಿ ವಿವಿಧ ಬ್ಯಾಂಕ್​ಗಳಲ್ಲಿ ಸುಮಾರು 30 ಲಕ್ಷ ರೂ. ಸಾಲ ಪಡೆದಿದ್ದ ರತ್ನಮ್ಮ ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿದ್ದಾರೆ. ಹುಣಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿಯಮ ಉಲ್ಲಂಘಿಸಿದ ಸವಾರರಿಂದ ₹3,22,200 ದಂಡ ಸಂಗ್ರಹ

ಮೈಸೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಸಂಬಂಧ ನಿಯಮ ಉಲ್ಲಂಘಿಸಿದ ವಾಹನ ಸವಾರರಿಂದ ದಂಡ ಸಂಗ್ರಹಿಸಿ ಎನ್​​ಆರ್​​ ಠಾಣೆ ಪೊಲೀಸರು ವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ. ನಿಯಮ ಉಲ್ಲಂಘಿಸಿದ ಸವಾರರಿಂದ ₹3,22,200 ದಂಡ ಸಂಗ್ರಹಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆ ಹಿನ್ನೆಲೆ 684 ಪ್ರಕರಣ ದಾಖಲಾಗಿದ್ದು 47 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

Published On - 7:22 am, Thu, 1 December 22