ಬಿಜೆಪಿ ಎಂಎಲ್ಸಿ ಜೊತೆ ವೇದಿಕೆ ಹಂಚಿಕೊಂಡ ಮಾಜಿ ರೌಡಿ ಜೇಡರಹಳ್ಳಿ ಕೃಷ್ಣಪ್ಪ
ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಎಂಎಲ್ಸಿ ಪುಟ್ಟಣ್ಣ ಜೊತೆ ಮಾಜಿ ರೌಡಿ ಜೇಡರಹಳ್ಳಿ ಕೃಷ್ಣಪ್ಪ ವೇದಿಕೆ ಹಂಚಿಕೊಂಡಿದ್ದಾರೆ.
ಬೆಂಗಳೂರು: ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ (BJP) ಕಾರ್ಯಾಕ್ರಮವೊಂದರಲ್ಲಿ ರೌಡಿಶೀಟರ್ ಸುನಿಲ್ ಕಾಣಿಸಿಕೊಂಡಿದ್ದು, ತೀರ್ವ ಚರ್ಚೆಗೆ ಕಾರಣವಾಗಿದೆ. ಇದಾದ ಬಳಿಕ ಇಂದು (ನ.30) ವಸತಿ ಸಚಿವ ವಿ ಸೋಮಣ್ಣ ಮನೆಗೆ ಇಂದು (ನ. 30) ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಭೇಟಿ ತೀರ್ವ ಕುತೂಹಲ ಮೂಡಿಸಿತ್ತು. ಈ ನಡುವೆಯೇ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಎಂಎಲ್ಸಿ ಪುಟ್ಟಣ್ಣ (MLC Puttanna) ಜೊತೆ ಮಾಜಿ ರೌಡಿ ಜೇಡರಹಳ್ಳಿ ಕೃಷ್ಣಪ್ಪ ವೇದಿಕೆ ಹಂಚಿಕೊಂಡಿದ್ದಾರೆ.
ಸಿಸಿಬಿ ಪೊಲೀಸ್ ದಾಳಿ ವೇಳೆ ತಲೆಮರಿಸಿಕೊಂಡಿದ್ದ ರೌಡಿಶೀಟರ್ ನಾಗ ಸಚಿವ ವಿ ಸೋಮಣ್ಣ ಮನೆಗೆ ಎಂಟ್ರಿ
ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ರೌಡಿಶೀಟರ್ವೋರ್ವನ ಎಂಟ್ರಿ ಸಾಕಷ್ಟು ಚರ್ಚೆಯಾಗುತ್ತಿದೆ. ಹೌದು ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ ಕಾರ್ಯಾಕ್ರಮವೊಂದರಲ್ಲಿ ರೌಡಿಶೀಟರ್ ಸುನಿಲ್ ಕಾಣಿಸಿಕೊಂಡಿದ್ದು, ತೀರ್ವ ಚರ್ಚೆಗೆ ಕಾರಣವಾಗಿದೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಈ ಮಧ್ಯೆ ವಸತಿ ಸಚಿವ ವಿ ಸೋಮಣ್ಣ ಮನೆಗೆ ಇಂದು (ನ. 30) ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಭೇಟಿ ತೀರ್ವ ಕುತೂಹಲ ಮೂಡಿಸಿದೆ.
ವಿಜಯನಗರದಲ್ಲಿರುವ ಸಚಿವ ವಿ.ಸೋಮಣ್ಣ ನಿವಾಸಕ್ಕೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ತನ್ನ ಗ್ಯಾಂಗ್ನ 40 ರಿಂದ 50 ಜನ ಹುಡುಗರ ಜೊತೆಗೆ ಭೇಟಿ ನೀಡಿದ್ದಾನೆ. ಇನ್ನೂ ವಿಲ್ಸನ್ಗಾರ್ಡನ್ ನಾಗ, ಶ್ರೀಕಾಂತ್ ಅಲಿಯಾಸ್ ಆ್ಯಪಲ್ ಸಂತು ನವೆಂಬರ್ 23ರಂದು ಸಿಸಿಬಿ ದಾಳಿ ವೇಳೆ ತಲೆಮರೆಸಿಕೊಂಡಿದ್ದನು.
ಇದನ್ನೂ ಓದಿ: ಅಸ್ತ್ರವಾದ ಸೈಲೆಂಟ್ ಸುನೀಲ: ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಘಟಕ ತೆರೆಯುವ ಲಕ್ಷಣವಿದೆ ಎಂದ ಕಾಂಗ್ರೆಸ್
ಇಂದು ವಿ ಸೋಮಣ್ಣ ಮನೆಗೆ ಭೇಟಿ ನೀಡಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಾಸಾರವಾಗುತ್ತಿದ್ದಂತೆ ಎಚ್ಚೆತ್ತ ಸಿಸಿಬಿ ಆರೋಪಿ ನಾಗನನ್ನು ಕರೆತಂದು ವಿಚಾರಣೆ ನಡೆಸಿದರು. ಬಳಿಕ ಆರೋಪಿ ನಾಗ ವಿ ಸೋಮಣ್ಣ ಮನೆಗೆ ಭೇಟಿ ನೀಡಿದ್ದಾನೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:03 pm, Wed, 30 November 22