
ಬೆಳಗಾವಿ: ಕಳೆದ ಕೆಲ ದಿನಗಳ ಹಿಂದೆಯಷ್ಟೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದ ಕುರಿತು ಪುಸ್ತಕ ಬಿಡುಗಡೆ ಮಾಡಿದ್ರು. ಜೊತೆಗೆ ಮರಾಠಿಗರನ್ನು ಪ್ರಚೋದಿಸುವ ಹೇಳಿಕೆಗಳನ್ನು ಕೊಟ್ಟಿದ್ದರು. ಇದಷ್ಟೇ ಅಲ್ಲದೆ 50 ವರ್ಷದ ಹಿಂದಿನ ಸಾಕ್ಷ್ಯಚಿತ್ರದ ವಿಡಿಯೋವನ್ನು ಮರು ಬಿಡುಗಡೆ ಮಾಡುವ ಮೂಲಕ ಬೆಳಗಾವಿ ಸೇರಿ ಮರಾಠಿ ಭಾಷಿಕ ಪ್ರದೇಶ ಮಹಾರಾಷ್ಟ್ರಕ್ಕೆ ಸೇರಿದ್ದೆಂದು ಬಿಂಬಿಸಲು ಯತ್ನ ನಡೆಸಿದ್ದಾರೆ.
ಇದು ಬಂದು ಕಡೆ ಆದ್ರೆ ಮತ್ತೊಂದು ಕಡೆ ಮಹಾರಾಷ್ಟ್ರ ಗಡಿಯಲ್ಲಿ NCP ಉದ್ಧಟತನ ಮೆರೆದಿದ್ದಾರೆ. ಕರ್ನಾಟಕದ ಬಸ್‌ಗಳ ಮೇಲೆ ನಾಡದ್ರೋಹಿ ಬರಹದ ಪೋಸ್ಟರ್ ಅಂಟಿಸಿ ಪುಂಡಾಟಿಕೆ ತೋರಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿ ಹಾಗೂ ಕೊಲ್ಹಾಪುರಕ್ಕೆ ಹೋಗುವ ಬಸ್‌ಗಳ ಮೇಲೆ ನಾಡದ್ರೋಹಿ ಪೋಸ್ಟರ್ ಅಂಟಿಸಿ ಎನ್‌ಸಿಪಿ ಪುಂಡಾಟಿಕೆ ಮೆರೆದಿದೆ.
ಗಡಿ ವಿವಾದ ಕೆದಕಿದ ಮಹಾರಾಷ್ಟ್ರ ಸರ್ಕಾರ; 50 ವರ್ಷದ ಹಿಂದಿನ ಸಾಕ್ಷ್ಯಚಿತ್ರ ವಿಡಿಯೋ ರೀ ರಿಲೀಸ್
ಮತ್ತೆ ಉದ್ಧಟತನ ಮೆರೆದ ಮಹಾರಾಷ್ಟ್ರ.. ಗಡಿ ವಿವಾದ ಕುರಿತು ಪುಸ್ತಕ ಬಿಡುಗಡೆ
Published On - 12:44 pm, Fri, 29 January 21